ನಟನಾಗಿ ಗುರುತಿಸಿಕೊಳ್ಳುತ್ತಿರುವ ಐಎಎಸ್ ಅಧಿಕಾರಿ; ಸಣ್ಣ ಹಳ್ಳಿಯಿಂದ ಆಗಮಿಸಿದ ಅವರ ಜೀವನ ಪಯಣ ಹೀಗಿದೆ ನೋಡಿ

Abhishek Singh: ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಇದೀಗ ಹಿಂದಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ. ಇದರೊಂದಿಗೆ ಅವರು ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ.

ನಟನಾಗಿ ಗುರುತಿಸಿಕೊಳ್ಳುತ್ತಿರುವ ಐಎಎಸ್ ಅಧಿಕಾರಿ; ಸಣ್ಣ ಹಳ್ಳಿಯಿಂದ ಆಗಮಿಸಿದ ಅವರ ಜೀವನ ಪಯಣ ಹೀಗಿದೆ ನೋಡಿ
ಅಭಿಷೇಕ್ ಸಿಂಗ್
Follow us
TV9 Web
| Updated By: shivaprasad.hs

Updated on:Feb 24, 2022 | 12:09 PM

ಚಿತ್ರರಂಗ ಇಂಥವರಿಗೆ ಎಂದು ಸೀಮಿತವಲ್ಲದಿದ್ದರೂ ಹೊಸಬರ ಪ್ರವೇಶ ಅಷ್ಟೇನು ಸುಲಭವಲ್ಲ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಒಂದುವೇಳೆ ಚಿತ್ರರಂಗ ಪ್ರವೇಶಿಸಿದರೂ ದೀರ್ಘಕಾಲ ಅಲ್ಲಿ ಉಳಿಯಲು ಅಪಾರ ಪರಿಶ್ರಮ, ಅನನ್ಯ ಪ್ರತಿಭೆ ಬೇಕು. ಬಾಲಿವುಡ್ ಚಿತ್ರರಂಗ ಕೂಡ ಇದಕ್ಕೆ ಹೊರತಲ್ಲ. ನೆಪೋಟಿಸಂ ಕುರಿತ ಆಪಾದನೆಗಳು ಚಿತ್ರರಂಗದ ಮೇಲೆ ಇದ್ದರೂ, ಹಲವು ಪ್ರತಿಭೆಗಳು ಸ್ವಂತ ಪರಿಶ್ರಮದಿಂದ ಗುರುತಿಸಿಕೊಂಡಿದ್ದಾರೆ. ಸ್ಟಾರ್​ ಕಿಡ್​ಗಳು ಚಿತ್ರರಂಗದಲ್ಲಿ ಯಶ ಕಾಣದೇ ಬೇರೆ ರಂಗದತ್ತ ತೆರಳಿರುವುದೂ ಇದೆ. ಆದರೆ ಬಾಲಿವುಡ್​ನಲ್ಲಿ (Bollywood) ನೆಲೆಯೂರಬೇಕು ಎಂದು ಕನಸು ಕಾಣುವವರಿಗೆ ಸ್ಫೂರ್ತಿ ತುಂಬಬಲ್ಲ ಓರ್ವ ಪ್ರತಿಭೆ ಇತ್ತೀಚೆಗೆ ದೊಡ್ಡ ಸದ್ದು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಯಾವುದೇ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರಿ. ಪ್ರತಿಭೆಯಿದ್ದರೆ ನಟನೆಯಲ್ಲಿ ಗುರುತಿಸಿಕೊಳ್ಳಬಹುದು ಎಂದೂ ಆ ನಟ ಸಾಬೀತು ಮಾಡುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh)!

ಅಭಿಷೇಕ್ ಸಿಂಗ್ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಕಾರ್ಯಶೈಲಿಯಿಂದ ಅಧಿಕಾರಿ ವಲಯದಲ್ಲಿ ಅವರು ಖ್ಯಾತರಾಗಿದ್ದರು. ಆದರೆ ನಟನೆಯ ಮೇಲೆ ಅವರಿಗೆ ತುಸು ಹೆಚ್ಚೇ ಒಲವು ಇತ್ತು. ಇದೇ ಕಾರಣಕ್ಕೆ ಆಡಳಿತಾತ್ಮಕ ಸೇವೆಗಳ ಜತೆಜತೆಗೆ ನಟನೆಯಲ್ಲೇ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಖ್ಯಾತ ಸಂಗೀತಗಾರರಾದ ಬಾದ್‌ಶಾ, ಜುಬಿನ್ ನೌಟಿಯಾಲ್ ಮತ್ತು ಬಿ ಪ್ರಾಕ್ ಅವರ ಹಲವಾರು ಹಿಟ್ ಆಲ್ಬಂಗಳಲ್ಲಿ ಕಾಣಿಸಿಕೊಂಡ ಅಭಿಷೇಕ್ ಸಿಂಗ್ ಖ್ಯಾತಿ ಗಳಿಸಿದರು.

ಅಭಿಷೇಕ್ ಸಿಂಗ್ ಖಡಕ್ ಲುಕ್​ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಅವರು ಕಾಣಿಸಿಕೊಂಡಿರುವ ಮ್ಯೂಸಿಕ್ ಆಲ್ಬಂಗಳು ಅಪಾರ ವೀಕ್ಷಣೆ ಗಳಿಸಿವೆ. ತಮ್ಮ ನಟನಾ ಜರ್ನಿಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಅವರು ತಾವು ಸಣ್ಣ ಹಳ್ಳಿಯಿಂದ ಬಂದಿದ್ದನ್ನು ಹೇಳಿಕೊಂಡಿದ್ದಾರೆ. ‘‘ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನು ನಾನು. ಶ್ರದ್ಧೆಯಿಂದ ಓದಿ, ಕಠಿಣ ಪರಿಶ್ರಮದಿಂದ ಐಎಎಸ್ ಅಧಿಕಾರಿಯಾದೆ’’ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಅವರು ತಮ್ಮ ಕನಸಿನಂತೆ ನಟನಾಗಿ ಗುರುತಿಸಿಕೊಳ್ಳುತ್ತಿದ್ಧಾರೆ.

ಅಭಿಷೇಕ್ ಸಿಂಗ್:

ಅಭಿಷೇಕ್ ಕಾಣಿಸಿಕೊಂಡಿರುವ ಮ್ಯೂಸಿಕ್ ಆಲ್ಬಂ ಒಂದು ಇಲ್ಲಿದೆ:

ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದಲ್ಲದೇ ಅಭಿಷೇಕ್ ಮಾನವೀಯ ಕಾರ್ಯಗಳ ಮೂಲಕವೂ ಸುದ್ದಿಯಾಗುತ್ತಿದ್ದಾರೆ. 2020ರ ಕೊವಿಡ್ ಸಮಯದಲ್ಲಿ ಅವರ ಕಾರ್ಯಗಳು ಸಖತ್ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಷ್ಟದಲ್ಲಿರುವವರಿಗೆ ಕ್ಯಾಂಪೇನ್ ಮೂಲಕ ಅವರು ಸಹಾಯ ಮಾಡಿದ್ದರು. ಸಾಧನೆಗೆ ನಮ್ಮ ಮನಸ್ಥಿತಿ ಅಡ್ಡಿಯಾಗಬಲ್ಲದೇ ಹೊರತು ಮತ್ತೇನೂ ಅಲ್ಲ ಎನ್ನುವುದು ಅಭಿಷೇಕ್ ಮಾತು. ಪ್ರಸ್ತುತ ನಟ ಸಾಮಾಜಿಕ ಕೆಲಸಗಳಲ್ಲಿ, ನಟನೆಯಲ್ಲಿ ಬ್ಯುಸಿಯಾಗಿದ್ಧಾರೆ.

ಇದನ್ನೂ ಓದಿ:

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

ರಶ್ಮಿಕಾ ಹೇಗೆ ಯಾವಾಗಲೂ ಖುಷಿಯಾಗಿರುತ್ತಾರೆ? ಸಂತೋಷದ ರಹಸ್ಯವನ್ನು ರಿವೀಲ್ ಮಾಡಿದ ನಟಿ

Published On - 11:52 am, Thu, 24 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ