AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ಸ್ಟಾರ್ ಕಿಡ್ ಎಂದು ಟೀಕಿಸಿದವರಿಗೆ ಖಡಕ್ ಆಗಿ ಉತ್ತರಿಸಿದ ನಟಿ ಆಲಿಯಾ ಭಟ್

‘ಹೈವೇ’, ‘ಉಡ್ತಾ ಪಂಜಾಬ್​’, ‘ಡಿಯರ್ ಜಿಂದಗಿ’, ‘ರಾಜಿ’ ಮೊದಲಾದ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಆಲಿಯಾ ತಮ್ಮ ನಟನೆ ಮೂಲಕ ಗಮನ ಸೆಳೆದರೂ ಅವರ ಬಗ್ಗೆ ಟೀಕೆ ನಿಂತಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.  

Alia Bhatt: ಸ್ಟಾರ್ ಕಿಡ್ ಎಂದು ಟೀಕಿಸಿದವರಿಗೆ ಖಡಕ್ ಆಗಿ ಉತ್ತರಿಸಿದ ನಟಿ ಆಲಿಯಾ ಭಟ್
ಆಲಿಯಾ ಭಟ್
ರಾಜೇಶ್ ದುಗ್ಗುಮನೆ
|

Updated on:May 11, 2023 | 8:15 AM

Share

ನಟಿ ಆಲಿಯಾ ಭಟ್ (Alia Bhatt) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಎಸ್​ಎಸ್ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದಾರೆ. ಆಲಿಯಾ ಸ್ಟಾರ್​ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಚಿತ್ರರಂಗದ ಬಾಗಿಲು ತೆರೆಯಿತು. ಅವರ ಮೊದಲ ಸಿನಿಮಾ ‘ಸ್ಟುಡೆಂಟ್ ಆಫ್ ಇಯರ್’ಗೆ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ (Dharma Productions) ಬಂಡವಾಳ ಹೂಡಿತು. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು. ಅವರು ತಮ್ಮ ನಟನೆ ಮೂಲಕ ಯಾರು ಎಂಬುದನ್ನು ಸಾಬೀತು ಮಾಡಿದ್ದಾರೆ. ಆದಾಗ್ಯೂ ಅವರು ಸ್ಟಾರ್ ಕಿಡ್ ಎನ್ನುವ ಬಗ್ಗೆ ಒಂದಷ್ಟು ಟೀಕೆಗಳು ಬರುತ್ತಲೇ ಇವೆ. ಈ ಬಗ್ಗೆ ಆಲಿಯಾ ಭಟ್ ಮಾತನಾಡಿದ್ದಾರೆ.

ಆಲಿಯಾ ಭಟ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳಿಗೆ ನಿರ್ಮಾಪಕ ಕರಣ್ ಜೋಹರ್ ಅವರು ಗಾಡ್ ಫಾದರ್. ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸೋದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ. ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಭಟ್​ ಅವರನ್ನು ಬಾಲಿವುಡ್​ಗೆ ಕರಣ್ ಪರಿಚಯಿಸಿದರು. ಆಲಿಯಾ ಮೊದಲ ಸಿನಿಮಾದಲ್ಲೇ ಗ್ಲಾಮರ್ ಅವತಾರ ತಾಳಿ ಎಲ್ಲರ ಗಮನ ಸೆಳೆದರು. ಬಳಿಕ ಅವರು ಗ್ಲಾಮರ್ ಪಾತ್ರಕ್ಕೆ ಸೀಮಿತ ಮಾಡಿಕೊಂಡಿಲ್ಲ. ‘ಹೈವೇ’, ‘ಉಡ್ತಾ ಪಂಜಾಬ್​’, ‘ಡಿಯರ್ ಜಿಂದಗಿ’, ‘ರಾಜಿ’ ಮೊದಲಾದ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಆಲಿಯಾ ತಮ್ಮ ನಟನೆ ಮೂಲಕ ಗಮನ ಸೆಳೆದರೂ ಅವರ ಬಗ್ಗೆ ಟೀಕೆ ನಿಂತಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಹಲವು ವರ್ಷಗಳಿಂದ ಈ ಮಾತು ಕೇಳಿದ್ದೇನೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಮತ್ತೊಬ್ಬರ ಕನಸುಗಳಿಗೆ ಹೋಲಿಸುತ್ತೇನೆ. ಕನಸುಗಳಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರ ಕನಸುಗಳು ಒಂದೇ. ಎಲ್ಲರ ಆಸೆಯೂ ಒಂದೇ. ನನಗೆ ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಕಾರಣಕ್ಕೆ ನಾನು ನನ್ನ ನೂರರಷ್ಟು ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ಸ್ವೀಕರಿಸಿಲ್ಲ’ ಎಂದಿದ್ದಾರೆ ಆಲಿಯಾ.

ಇದನ್ನೂ ಓದಿ: Alia Bhatt: ಆಲಿಯಾ ಭಟ್​ ನೋಡಿ ಐಶ್ವರ್ಯಾ ರೈ ಎಂದು ಕೂಗಿದ ಪಾಪರಾಜಿಗಳು; ನಟಿಯ ಪ್ರತಿಕ್ರಿಯೆ ಹೇಗಿತ್ತು?

ಕಳೆದ ವರ್ಷ ಅಕ್ಟೋಬರ್​ಗೆ ಆಲಿಯಾ ಭಟ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಅವರು ಇತ್ತೀಚೆಗೆ ಐದನೇ ಫಿಲ್ಮ್​ಫೇರ್ ಅವಾರ್ಡ್ ಗೆದ್ದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ಸಿಕ್ಕಿದೆ.  ‘ಹಾರ್ಟ್ ಆಫ್ ಸ್ಟೋನ್’ ಮೂಲಕ ಆಲಿಯಾ ಹಾಲಿವುಡ್​ಗೆ ಕಾಲಡುತ್ತಿದ್ದಾರೆ. ಇದಲ್ಲದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ರಿಲೀಸ್​ಗೆ ರೆಡಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:09 am, Thu, 11 May 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ