ನಟಿ ಉರ್ಫಿ ಜಾವೇದ್ (Urfi Javed) ಅವರು ಮಾಡದ ಅವತಾರಗಳೇ ಇಲ್ಲ. ಕಾಸ್ಟ್ಯೂಮ್ ವಿಚಾರದಲ್ಲಿ ಅವರು ಪ್ರತಿ ದಿನವೂ ಸುದ್ದಿ ಆಗುತ್ತಾರೆ. ಬಗೆಬಗೆಯ ಬಟ್ಟೆ ಧರಿಸಿಕೊಂಡು ಬಂದು ಪಾಪರಾಜಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವುದೇ ಅವರ ಕಸುಬು ಆದಂತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಉರ್ಫಿ ಜಾವೇದ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ನಟನೆಗಿಂತಲೂ ಹೆಚ್ಚಾಗಿ ಅವರು ಈ ರೀತಿಯ ಬಟ್ಟೆ ಧರಿಸಿಯೇ ಫೇಮಸ್ ಆಗಿದ್ದಾರೆ. ಇನ್ನು ಅವರಿಗೆ ಟ್ರೋಲ್ ಕಾಟವೂ ತಪ್ಪಿದ್ದಲ್ಲ. ಉರ್ಫಿ ಜಾವೇದ್ ಅವರ ಫೋಟೋ (Urfi Javed Photo) ಮತ್ತು ವಿಡಿಯೋಗೆ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡ್ತಾರೆ. ಕೆಲವರು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಾರೆ. ಆದರೆ ಅದಕ್ಕೆಲ್ಲ ಈ ನಟಿ ತಲೆ ಕೆಡಿಸಿಕೊಂಡಿಲ್ಲ. ದಿನದಿನಕ್ಕೂ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಈಗ ಅವರು ಬಿಕಿನಿಗೆ (Bikini) ಹೂವು ಅಂಟಿಸಿಕೊಂಡು ಬಂದಿದ್ದಾರೆ. ಆ ಮೂಲಕ ಪಡ್ಡೆಗಳ ನಿದ್ದೆ ಕದಿಯಲು ಪ್ರಯತ್ನಿಸಿದ್ದಾರೆ.
‘ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ್ಯಾ? ಫೈರ್..!’ ಎಂದು ಅಲ್ಲು ಅರ್ಜುನ್ ಡೈಲಾಗ್ ಹೊಡೆದಿದ್ದನ್ನು ನೆಟ್ಟಿಗರು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಉರ್ಫಿ ಜಾವೇದ್ ಹಾಗೆಯೇ ಡ್ರೆಸ್ ಮಾಡಿಕೊಂಡು ಬಂದಿದ್ದಾರೆ. ಬಿಕಿನಿಗೆ ಫ್ಲವರ್ ಅಂಟಿಸಿಕೊಂಡು ಬಂದಿದ್ದಾರೆ. ಆದರೆ ಅವರ ಮಾದಕತೆ ಫೈರ್ ರೀತಿ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ: ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ ಎಂದಿದ್ದೇಕೆ?
ಬಟ್ಟೆ ಮಾತ್ರವಲ್ಲದೇ ಬೇರೆ ವಿಚಾರಗಳಿಂದಲೂ ಊರ್ಫಿ ಜಾವೇದ್ ಅವರು ಆಗಾಗ ಸುದ್ದಿ ಆಗುತ್ತಾರೆ. ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಅವರು ಭಾಗವಹಿಸಿದ್ದರು. ಕಿರುತೆರೆಯಲ್ಲಿ ತಮಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂಬ ಬೇಸರ ಕೂಡ ಅವರಿಗೆ ಇದೆ. ಈ ಹಿಂದೆ ನೀಡಿದ ಸಂದರ್ಶನಗಳಲ್ಲಿ ಅವರು ಅದನ್ನು ನೇರವಾಗಿ ಹೇಳಿಕೊಂಡಿದ್ದರು. ಕಿರುತೆರೆಯ ಸೆಲೆಬ್ರಿಟಿಗಳಿಂದಲೇ ತಮಗೆ ಅವಮಾನ ಆಗಿದೆ ಎಂದು ಉರ್ಫಿ ಹೇಳಿದ್ದರು.
‘ನನ್ನ ಫೋಟೋಗಳು ಅಪ್ಲೋಡ್ ಆದಾಗ ಅಥವಾ ವೈರಲ್ ಆದಾಗ ಬ್ಲೂ ಟಿಕ್ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್ ಮಾಡ್ತಾರೆ’ ಎಂದು ಉರ್ಫಿ ಜಾವೇದ್ ಬೇಸರ ವ್ಯಕ್ತಪಡಿಸಿದ್ದರು. ಅದೇನೇ ಇರಲಿ, ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 32 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.