AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಪೊಟಿಸಂಗಿಂತಲೂ ಡೇಂಜರ್ ಬಾಲಿವುಡ್ ರಾಜಕೀಯ: ಹಿರಿಯ ನಟ

Aditya Pancholi: ಬಾಲಿವುಡ್ ಹೇಗೆ ನೆಪೊಟಿಸಂ ಅನ್ನು ಸಾಕುತ್ತಾ, ಚಿತ್ರರಂಗದ ಹಿನ್ನೆಲೆ ಇರದವರನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಈ ಚರ್ಚೆ ಇನ್ನಷ್ಟು ಹೆಚ್ಚಾಗಿದೆ. ಹಿರಿಯ ನಟನೊಬ್ಬ ಬಾಲಿವುಡ್​​ನಲ್ಲಿ ನೆಪೊಟಿಸಂಗಿಂತಲೂ ಒಳ ರಾಜಕೀಯ ಇನ್ನೂ ಕೆಟ್ಟದಾಗಿದೆ, ಅದು ನೆಪೊಟಿಸಂಗಿಂತಲೂ ಅಪಾಯಕಾರಿ ಎಂದಿದ್ದು, ತಮ್ಮದೇ ಉದಾಹರಣೆಯನ್ನು ಅವರು ನೀಡಿದ್ದಾರೆ.

ನೆಪೊಟಿಸಂಗಿಂತಲೂ ಡೇಂಜರ್ ಬಾಲಿವುಡ್ ರಾಜಕೀಯ: ಹಿರಿಯ ನಟ
Aditya Pancholi
ಮಂಜುನಾಥ ಸಿ.
|

Updated on:Oct 28, 2025 | 5:56 PM

Share

ಬಾಲಿವುಡ್​​ನಲ್ಲಿ (Bollywood) ನೆಪೊಟಿಸಂ ಚರ್ಚೆ ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಬಾಲಿವುಡ್ ಹೇಗೆ ನೆಪೊಟಿಸಂ ಅನ್ನು ಸಾಕುತ್ತಾ, ಚಿತ್ರರಂಗದ ಹಿನ್ನೆಲೆ ಇರದವರನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಈ ಚರ್ಚೆ ಇನ್ನಷ್ಟು ಹೆಚ್ಚಾಗಿದೆ. ಆದರೆ ಇದೀಗ ಹಿರಿಯ ನಟನೊಬ್ಬ ಬಾಲಿವುಡ್​​ನಲ್ಲಿ ನೆಪೊಟಿಸಂಗಿಂತಲೂ ಒಳ ರಾಜಕೀಯ ಇನ್ನೂ ಕೆಟ್ಟದಾಗಿದೆ, ಅದು ನೆಪೊಟಿಸಂಗಿಂತಲೂ ಅಪಾಯಕಾರಿ ಎಂದಿದ್ದು, ತಮ್ಮದೇ ಉದಾಹರಣೆಯನ್ನು ಅವರು ನೀಡಿದ್ದಾರೆ.

ಆದಿತ್ಯ ಪಂಚೋಲಿ, ಬಾಲಿವುಡ್​ನ ಹಿರಿಯ ನಟ. ಚಿತ್ರರಂಗದ ಹಿನ್ನೆಲೆಯಿಂದ ಬಂದಿದ್ದ ಆದಿತ್ಯ ಪಂಚೋಲಿ, 80, 90ರ ದಶಕದ ಹಲವಾರು ಹಿಂದಿ ಸಿನಿಮಾಗಳಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿಯೂ ಮಿಂಚಿದ್ದಾರೆ. ಈಗಲೂ ನಟನೆಯಲ್ಲಿ ಸಕ್ರಿಯವಾಗಿರುವ ಆದಿತ್ಯ ಪಂಚೋಲಿ ಇತ್ತೀಚೆಗೆ ಬಿಡುಗಡೆ ಆದ ‘ವಾರ್ 2’ ಸಿನಿಮಾನಲ್ಲಿ ನಟಿಸಿದ್ದಾರೆ. ಈಗ ಆಲಿಯಾ ಭಟ್ ನಟನೆಯ ‘ಆಲ್ಫಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಇದೀಗ ಆದಿತ್ಯ ಪಂಚೋಲಿ ಮಾಡಿರುವ ಟ್ವೀಟ್ ಬಾಲಿವುಡ್​ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಹೇಗೆ ತಮ್ಮಿಂದ ಸಿನಿಮಾ ಅನ್ನು ಕಿತ್ತುಕೊಳ್ಳಲಾಯ್ತು ಎಂದು ಅವರು ಟ್ವೀಟ್​​ನಲ್ಲಿ ವಿವರಿಸಿದ್ದಾರೆ. ಜೊತೆಗೆ ಬಾಲಿವುಡ್​ನ ಒಳರಾಜಕೀಯಗಳನ್ನು ತೆರೆದಿಟ್ಟಿದ್ದಾರೆ. ‘1988 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ ‘ತೇಜಾಬ್’ಗೆ ಮಾಧುರಿ ದೀಕ್ಷಿತ್ ಎದುರು ನಾನು ನಾಯಕನಾಗಿ ಆಯ್ಕೆ ಆಗಿದ್ದೆ. ಇದಕ್ಕೆ ಆ ಸಿನಿಮಾದ ನಿರ್ದೇಶಕ ಚಂದ್ರ ಅವರೇ ಸಾಕ್ಷಿ. ಆದರೆ ನಾಯಕನೊಬ್ಬ ತನ್ನ ಅಣ್ಣನ ಮೂಲಕ ನಿರ್ಮಾಪಕರ ಮೇಲೆ ಪ್ರಭಾವ ಬೀರಿ ನನ್ನನ್ನಿಂದ ಪಾತ್ರವನ್ನು ಕಿತ್ತುಕೊಂಡ’ ಎಂದಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ಗೆ ಕಾಲಿಟ್ಟ ಸೂಪರ್ ಮಾಡೆಲ್ ವರ್ತಿಕಾ ಸಿಂಗ್: ಯಾರೀಕೆ?

‘ತೇಜಾಬ್’ ಸಿನಿಮಾನಲ್ಲಿ ಮಾಧುರಿ ದೀಕ್ಷಿತ್ ಎದುರು ಅನಿಲ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು. ಆದಿತ್ಯ ಹೇಳಿರುವಂತೆ, ಅನಿಲ್ ಕಪೂರ್ ಅವರು ತಮ್ಮ ಸಹೋದರ ಬೋನಿ ಕಪೂರ್ ಅವರ ಕಡೆಯಿಂದ ‘ತೇಜಾಬ್’ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಎರಡೂ ಆಗಿದ್ದ ಚಂದ್ರ ಮೇಲೆ ಒತ್ತಡ ಹೇರಿಸಿ ಪಾತ್ರವನ್ನು ತಮ್ಮದಾಗಿಸಿಕೊಂಡರಂತೆ.

ಟ್ವೀಟ್​​ನಲ್ಲಿ ಈ ಬಗ್ಗೆ ಹೇಳಿರುವ ಆದಿತ್ಯ, ‘ಆ ಸಿನಿಮಾ ಸೂಪರ್ ಹಿಟ್ ಆಯ್ತು, ಮುಂದಿನದ್ದು ಇತಿಹಾಸ. ಸಿನಿಮಾ ರಂಗದಲ್ಲಿ ರಾಜಕೀಯ ಎಂಬುದು ನೆಪೊಟೀಸಂಗಿಂತಲೂ ಅಪಾಯಕಾರಿ, ಅದು ಬಾಲಿವುಡ್​ನ ಬೇರುಗಳ ವರೆಗೆ ತಲುಪಿದೆ. ಪಕ್ಷಪಾತ, ಕುತಂತ್ರ ಮತ್ತು ಅಧಿಕಾರದ ಆಟಗಳು ನೆಪೊಟೀಸಂಗಿಂತಲೂ ಚೆನ್ನಾಗಿ ವೃತ್ತಿಜೀವನವನ್ನು ರೂಪಿಸುತ್ತವೆ ಬಾಲಿವುಡ್​​ನಲ್ಲಿ’ ಎಂದಿದ್ದಾರೆ ನಟ.

‘ತೇಜಾಬ್’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಅನಿಲ್ ಕಪೂರ್ ನಾಯಕನಾಗಿ ಹೆಸರು ಮಾಡಿದ್ದರು. ‘ತೇಜಾಬ್’ ಸಿನಿಮಾದ ಬಳಿಕ ಅವರ ಸ್ಟಾರ್​​ಡಂ ಇನ್ನೂ ಹೆಚ್ಚಾಯ್ತು. ಆದರೆ ಆದಿತ್ಯ ಪಂಚೋಲಿ ಆಗಷ್ಟೆ ಚಿತ್ರರಂಗಕ್ಕೆ ಬಂದಿದ್ದರು. ಅವರು ಈಗ ಹೇಳಿರುವಂತೆ, ‘ತೇಜಾಬ್’ ಅವರಿಗೆ ಸಿಕ್ಕಿದ್ದರೆ ಅವರು ದೊಡ್ಡ ಸ್ಟಾರ್ ಆಗಿರುತ್ತಿದ್ದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Tue, 28 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ