ನಟ ಅಜಯ್ ದೇವಗನ್ (Ajay Devgn) ಅವರಿಗೆ ಇಂದು (ಮೇ 2) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಈ ವರ್ಷ ಅವರು ನಟಿಸಿ, ನಿರ್ಮಿಸಿರೋ ‘ಶೈತಾನ್’ ರಿಲೀಸ್ ಆಗಿ ಹಿಟ್ ಆಗಿದೆ. ಹೀಗಾಗಿ ಬರ್ತ್ಡೇ ವಿಶೇಷ ಎನಿಸಿಕೊಂಡಿದೆ. ಈ ಬಾರಿ ಅವರು ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಶ್ರೀಮಂತ ನಟರಲ್ಲಿ ಅವರು ಕೂಡ ಒಬ್ಬರು. ಅವರ ಆಸ್ತಿ ಮೌಲ್ಯ 534 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರ ಬಳಿ ಇರೋ ದುಬಾರಿ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅಜಯ್ ದೇವಗನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರ ‘ಫೂಲ್ ಔರ್ ಕಾಂತೆ’ ಸಿನಿಮಾ ಮೂಲಕ ಮೊದಲ ಸಿನಿಮಾದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. 1999ರಲ್ಲಿ ಅವರು ‘ಹಿಂದುಸ್ತಾನ್ ಕಿ ಕಸಮ್’ ಸಿನಿಮಾ ಮೂಲಕ ನಿರ್ಮಾಪಕರಾದರು. 2008ರಲ್ಲಿ ‘ಯು ಮಿ ಔರ್ ಹಮ್’ ಚಿತ್ರದ ಮೂಲಕ ನಿರ್ದೇಶಕರಾದರು. ‘ಶಿವಾಯ್’, ‘ರನ್ವೇ 34’, ‘ಭೀಲಾ’ ಸಿನಿಮಾನ ಅವರು ನಿರ್ದೇಶನ ಮಾಡಿದ್ದಾರೆ. ಅವರಿಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಜಯ್ ದೇವಗನ್ ಅವರು ನಟನೆಯ ಜೊತೆಗೆ ನಿರ್ಮಾಣ, ಜಾಹೀರಾತುಗಳಿಂದ ದೊಡ್ಡ ಹಣ ಗಳಿಕೆ ಮಾಡುತ್ತಿದ್ದಾರೆ. ಅವರ ಆಸ್ತಿ 534 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರ ಬಳಿ ದುಬಾರಿ ಪ್ರಾಪರ್ಟಿಗಳು ಇವೆ. ಅವರು ಪ್ರೈವೆಟ್ ಜೆಟ್ ಹೊಂದಿದ್ದಾರೆ. ಐಷಾರಾಮಿ ಕಾರುಗಳು ಇವೆ. ಮುಂಬೈನಲ್ಲಿ ಎರಡು ಮನೆ ಇದೆ. ಜುಹುದಲ್ಲಿ ಒಂದು ಹಾಗೂ ಮಲ್ಗಾರಿ ರೋಡ್ನಲ್ಲಿ ಒಂದು ನಿವಾಸ ಇದೆ. ಲಂಡನ್ನಲ್ಲಿ ಅವರು ಬಂಗಲೆ ಹೊಂದಿದ್ದಾರೆ.
ಅಜಯ್ ದೇವಗನ್ ಅವರು ಪ್ರತಿ ಚಿತ್ರಕ್ಕೆ 25 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ವಿಮಲ್ ಸೇರಿ ಅನೇಕ ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದಕ್ಕೂ ಅವರು ದೊಡ್ಡ ಹಣ ಪಡೆಯುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟರ ಪೈಕಿ ಅಜಯ್ ದೇವಗನ್ ಕೂಡ ಇದ್ದಾರೆ. ಅವರು ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ‘ಶೈತಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡಲು ಮುಂದಾದ ಅಜಯ್ ದೇವಗನ್
ಅಜಯ್ ದೇವಗನ್ ಅವರು ಖ್ಯಾತ ಉದ್ಯಮಿ ಕೂಡ ಹೌದು. ಅವರು ನಟನೆಯಿಂದ ಬಂದ ಹಣವನ್ನು ನಾನಾ ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರಿಗೆ ಡಿವಿಡಂಟ್ ಬರುತ್ತಿದೆ. ಹಲವು ಬ್ರ್ಯಾಂಡ್ಗಳನ್ನು ಅವರು ಪ್ರಚಾರ ಮಾಡುತ್ತಾರೆ. ಬೆಂಜ್ ಸೇರಿ ಅನೇಕ ದುಬಾರಿ ಕಾರುಗಳು ಅವರ ಬಳಿ ಇವೆ. ‘ಶೈತಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ವಶೀಕರಣದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಆರ್ ಮಾಧವನ್ ಹಾಗೂ ಜ್ಯೋತಿಕಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಅವರ ಖ್ಯಾತಿ ಭರ್ಜರಿ ಏರಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ