AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sooryavanshi Box Office Collection: 3 ದಿನಕ್ಕೆ 75 ಕೋಟಿ ರೂ. ಗಳಿಸಿದ ಅಕ್ಷಯ್​ ಕುಮಾರ್​ ಸಿನಿಮಾ ‘ಸೂರ್ಯವಂಶಿ’

Akshay Kumar: ಅಕ್ಷಯ್​ ಕುಮಾರ್​-ಕತ್ರಿನಾ ಕೈಫ್​ ಜೋಡಿಯ ‘ಸೂರ್ಯವಂಶಿ’ ಚಿತ್ರ ಮೂರನೇ ದಿನಕ್ಕೆ 75 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾ ಅನಾಯಾಸವಾಗಿ 100 ಕೋಟಿ ರೂ. ಕ್ಲಬ್​ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Sooryavanshi Box Office Collection: 3 ದಿನಕ್ಕೆ 75 ಕೋಟಿ ರೂ. ಗಳಿಸಿದ ಅಕ್ಷಯ್​ ಕುಮಾರ್​ ಸಿನಿಮಾ ‘ಸೂರ್ಯವಂಶಿ’
‘ಸೂರ್ಯವಂಶಿ’ ಸಿನಿಮಾ ಪೋಸ್ಟರ್​
TV9 Web
| Edited By: |

Updated on: Nov 08, 2021 | 11:31 AM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ಸೂರ್ಯವಂಶಿ’ ಚಿತ್ರ ನ.5ರಂದು ಬಿಡುಗಡೆ ಆಯಿತು. ಅಕ್ಷಯ್​ ಕುಮಾರ್​, ಕತ್ರಿನಾ ಕೈಫ್​ ಜೋಡಿಯಾಗಿ ನಟಿಸಿರುವ ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ರೋಹಿತ್​ ಶೆಟ್ಟಿ. ಗಲ್ಲಾಪೆಟ್ಟಿಗೆಯಲ್ಲಿ ‘ಸೂರ್ಯವಂಶಿ’ ಭರ್ಜರಿ ಸಾಧನೆ ಮಾಡುತ್ತಿದೆ. ಮೂರೇ ದಿನಕ್ಕೆ 75 ಕೋಟಿ ರೂ. ಗಳಿಸಿರುವುದು ಈ ಸಿನಿಮಾದ ಸಾಧನೆ. ಆ ಮೂಲಕ ಅಕ್ಷಯ್​ ಕುಮಾರ್​ ಅವರ ಖಾತೆಗೆ ಮತ್ತೊಂದು ಸೂಪರ್​ ಹಿಟ್​ ಸಿನಿಮಾ ಸೇರ್ಪಡೆ ಆದಂತಾಗಿದೆ. ನಿರ್ದೇಶಕ ರೋಹಿತ್​ ಶೆಟ್ಟಿ ಗೆಲುವಿನ ನಗು ಬೀರುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಕತ್ರಿನಾ ಕೈಫ್​ ಚಾರ್ಮ್​ ಇನ್ನಷ್ಟು ಹೆಚ್ಚುವಂತಾಗಿದೆ.

ಬಿಡುಗಡೆಯಾದ ಮೊದಲ ದಿನೇ (ನ.5) ಭಾರತೀಯ ಮಾರುಕಟ್ಟೆಯಲ್ಲಿ ‘ಸೂರ್ಯವಂಶಿ’ ಗಳಿಸಿದ್ದು ಬರೋಬ್ಬರಿ 26.38 ಕೋಟಿ ರೂಪಾಯಿ. ಅಂದು ದೀಪಾವಳಿ ಹಬ್ಬದ ರಜೆ ಇದ್ದಿದ್ದರಿಂದ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದರು. ಎರಡನೇ ದಿನ 24.53 ರೂ. ಕಲೆಕ್ಷನ್​ ಆಗಿದೆ. ಮೂರನೇ ದಿನವಾದ ಭಾನುವಾರ ಕೂಡ ಅಷ್ಟೇ ಪ್ರಮಾಣದ ಆದಾಯ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಆ ಮೂಲಕ ಮೂರನೇ ದಿನಕ್ಕೆ 75 ಕೋಟಿ ರೂ. ಕಲೆಕ್ಷನ್​ ಆಗಿದೆ ಎನ್ನುತ್ತಿವೆ ಬಾಕ್ಸ್​ ಆಫೀಸ್​ ಮೂಲಗಳು.

ಇನ್ನೆರಡು ದಿನಗಳಲ್ಲಿ ‘ಸೂರ್ಯವಂಶಿ’ ಅನಾಯಾಸವಾಗಿ 100 ಕೋಟಿ ರೂ. ಕ್ಲಬ್​ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮಹಾರಾಷ್ಟ್ರ, ಗೋವಾ, ಜಾರ್ಖಾಂಡ್​ ಮುಂತಾದ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಗಿದ್ದರೂ ಕೂಡ ಈ ಸಿನಿಮಾ ಈ ಪರಿ ಕಲೆಕ್ಷನ್​ ಮಾಡಿರುವುದು ಸಾಧನೆಯೇ ಸರಿ.

ಈ ಸಿನಿಮಾದ ಗೆಲುವಿಗೆ ಹಲವು ಕಾರಣಗಳಿವೆ. ಬಹುದಿನಗಳ ಬಳಿಕ ಚಿತ್ರಮಂದಿರದಲ್ಲಿ ಒಂದು ಬಿಗ್​ ಬಜೆಟ್​ ಸಿನಿಮಾ ರಿಲೀಸ್​ ಆಗಿರುವುದರಿಂದ ಉತ್ತರ ಭಾರತದ ಮಂದಿ ಮುಗಿಬಿದ್ದು ನೋಡಿದ್ದಾರೆ. ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಕಾಂಬಿನೇಷನ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆ್ಯಕ್ಷನ್​ ಸಿನಿಮಾಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದ ನಿರ್ದೇಶಕ ರೋಹಿತ್​ ಶೆಟ್ಟಿ ಅವರು ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿವೆ. ಈ ಎಲ್ಲ ಕಾರಣಗಳಿಂದ ‘ಸೂರ್ಯವಂಶಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್​ ಬೆಳೆ ತೆಗೆಯುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹಲವು ತಿಂಗಳ ಹಿಂದೆಯೇ ‘ಸೂರ್ಯವಂಶಿ’ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್​ ಲಾಕ್​ಡೌನ್ ಕಾರಣದಿಂದ ಪದೇಪದೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಈ ನಡುವೆ ಓಟಿಟಿಯಲ್ಲಿ ರಿಲೀಸ್​ ಮಾಡಲು ಆಫರ್​ ಬಂದಿದ್ದರೂ ಕೂಡ ಅದಕ್ಕೆ ನಿರ್ಮಾಪಕರು ಒಪ್ಪಿಕೊಂಡಿರಲಿಲ್ಲ. ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿದೆ.

ಇದನ್ನೂ ಓದಿ:

Sooryavanshi: ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ‘ಸೂರ್ಯವಂಶಿ’; ದಿನದ 24 ಗಂಟೆಯೂ ಅಕ್ಷಯ್​ ಕುಮಾರ್​ ಚಿತ್ರ ಪ್ರದರ್ಶನ

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ