ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ: ದಿ ರೈಸ್’ (Pushpa: The Rise) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಬಾಲಿವುಡ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಹಿಂದಿಗೆ ಡಬ್ ಆಗಿ ತೆರೆ ಕಂಡ ಈ ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರದ ಬಗ್ಗೆ ಆಮಿರ್ ಖಾನ್ (Aamir Khan) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಗಳಿಕೆ ವಿಚಾರದಲ್ಲಿ ‘ಪುಷ್ಪ’ ಸಿನಿಮಾ ‘3 ಈಡಿಯಟ್ಸ್’ ಅನ್ನೂ ಹಿಂದಿಕ್ಕಿದೆ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ಬಾಲಿವುಡ್ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಮಾತನಾಡಿದ್ದಾರೆ. ಈ ವೇಳೆ ಸಿನಿಮಾದ ಯಶಸ್ಸನ್ನು ಯಾವ ರೀತಿಯಲ್ಲಿ ಅಳೆಯಬೇಕು ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರದ ಯಶಸ್ಸನ್ನು ಅಳೆಯಲು ವಾರಾಂತ್ಯದ ಕಲೆಕ್ಷನ್ ಹಾಗೂ ಸಿನಿಮಾದ ಒಟ್ಟೂ ಕಲೆಕ್ಷನ್ ನಡುವೆ ಹೋಲಿಕೆ ಮಾಡಿ ನೋಡಬೇಕು. ‘3 ಈಡಿಯಟ್ಸ್’ ಸಿನಿಮಾ ವಾರಾಂತ್ಯದಲ್ಲಿ 40 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರದ ಒಟ್ಟೂ ಗಳಿಕೆ 200 ಕೋಟಿ ರೂಪಾಯಿ. ಅಂದರೆ, ವಾರಾಂತ್ಯದ ಕಲೆಕ್ಷನ್ಗಿಂತ ಐದು ಪಟ್ಟು ಹೆಚ್ಚು ಈ ಸಿನಿಮಾ ಗಳಿಕೆ ಮಾಡಿತ್ತು. ಹೀಗಾಗಿ, ಈ ಚಿತ್ರ ಉತ್ತಮವಾಗಿದೆ ಎನ್ನಬಹುದು. ವಾರಾಂತ್ಯದಲ್ಲಿ 100 ಕೋಟಿ ಗಳಿಸಿ, ಸಿನಿಮಾದ ಒಟ್ಟೂ ಗಳಿಕೆ 200 ಕೋಟಿ ಎಂದರೆ, ಆ ಸಿನಿಮಾ ಉತ್ತಮವಾಗಿಲ್ಲ ಎಂದರ್ಥ’ ಎಂದಿದ್ದಾರೆ ಆಮಿರ್ ಖಾನ್ .
‘ಪುಷ್ಪ ಸಿನಿಮಾ ಮೊದಲ ವಾರಾಂತ್ಯದ ಕಲೆಕ್ಷನ್ಗಿಂತ 7.04 ಪಟ್ಟು ಹೆಚ್ಚು ಒಟ್ಟೂ ಕಲೆಕ್ಷನ್ ಮಾಡಿದೆ. ಈ ಫಾರ್ಮುಲಾ ವಿಚಾರದಲ್ಲಿ, ಉರಿ: ದಿ ಸರ್ಜಿಕಲ್ ಸ್ಟ್ರೈಕ್ (6.87), ಬಾಹುಬಲಿ: ದಿ ಬಿಗಿನಿಂಗ್ (5.31) 3 ಈಡಿಯಟ್ಸ್ (5) ರೇಟಿಂಗ್ ಕಡಿಮೆ. ಈ ಲೆಕ್ಕಕ್ಕೆ ಹೋಲಿಕೆ ಮಾಡಿದರೆ ಪುಷ್ಪ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಚಿತ್ರವನ್ನು ನೋಡೋಕೆ ಪ್ರೇಕ್ಷಕರು ಮತ್ತೆಮತ್ತೆ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ಅಕ್ಷಯ್ ಕುಮಾರ್ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ
ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್ ಖಾನ್ ಶಾದಿ? ವೈರಲ್ ಫೋಟೋದ ಅಸಲಿಯತ್ತು ಇಲ್ಲಿದೆ
Published On - 6:04 pm, Tue, 18 January 22