Amitabh Bachchan: ಸಾಲದ ಸುಳಿಗೆ ಸಿಲುಕಿದ್ದ ಅಮಿತಾಭ್​ ಬಚ್ಚನ್​ ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ

| Updated By: ಮದನ್​ ಕುಮಾರ್​

Updated on: Oct 11, 2022 | 12:10 PM

Amitabh Bachchan 80th birthday: ಸ್ಟಾರ್​ ಆಗಿ ಮೆರೆದ ಬಳಿಕವೂ ಅಮಿತಾಭ್​ ಬಚ್ಚನ್​ ಅವರಿಗೆ ತೀರಾ ಕಷ್ಟದ ಸಂದರ್ಭ ಎದುರಾಗಿತ್ತು. ನಿರ್ಮಾಪಕರ ಮನೆಗೆ ಹೋಗಿ ‘ದಯವಿಟ್ಟು ಒಂದೇ ಒಂದು ಅವಕಾಶ ಕೊಡಿ’ ಎಂದು ಅವರು ಬೇಡಿಕೊಂಡರು.

Amitabh Bachchan: ಸಾಲದ ಸುಳಿಗೆ ಸಿಲುಕಿದ್ದ ಅಮಿತಾಭ್​ ಬಚ್ಚನ್​ ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ
ಅಮಿತಾಭ್ ಬಚ್ಚನ್
Follow us on

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವಾದ್ಯಂತ ಇರುವ ಅಭಿಮಾನಿಗಳು ಇಂದು (ಅ.11) ಅವರ ಹುಟ್ಟುಹಬ್ಬ (Amitabh Bachchan Birthday) ಆಚರಿಸುತ್ತಿದ್ದಾರೆ. 80ನೇ ವಯಸ್ಸಿನಲ್ಲೂ ಅಮಿತಾಭ್​ ಬಚ್ಚನ್​ ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರೇ ಸ್ಫೂರ್ತಿ. ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಅಮಿತಾಭ್​ ಬಚ್ಚನ್​ ಸಾಗಿ ಬಂದ ಹಾದಿ ತುಂಬ ಸುಲಭವಾಗಿಯೇನೂ ಇರಲಿಲ್ಲ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಮುಂದೆ ಬಂದಿದ್ದಾರೆ. ಒಮ್ಮೆಯಂತೂ ಅವರು ಎಲ್ಲವನ್ನೂ ಕಳೆದುಕೊಂಡು ಸಂಪೂರ್ಣ ಸೋತ ಸ್ಥಿತಿಗೆ ತಲುಪಿದ್ದರು. ಆ ಕಷ್ಟದ ದಿನಗಳನ್ನು ಎದುರಿಸಿ ಅವರು ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ.

ಅದು 1999ರ ಸಮಯ. ಹಲವಾರು ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿ ಫೇಮಸ್​ ಆಗಿದ್ದರೂ ಕೂಡ ಅಮಿತಾಭ್​ ಬಚ್ಚನ್​ ಅವರು ಬಿಸ್ನೆಸ್​ನಲ್ಲಿ ಸೋತರು. ಅವರ ‘ಅಮಿತಾಭ್​ ಬಚ್ಚನ್​ ಕಾರ್ಪೊರೇಷನ್​ ಲಿಮಿಟೆಡ್​’ ಕಂಪನಿ ಭಾರಿ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಬಂದು ಮನೆ ಬಳಿ ನಿಲ್ಲುವಂತಾಯಿತು. ಕುಟುಂಬದವರಿಗೆ ಬೆದರಿಕೆ ಬಂದವು. ಆ ಸಮಯದಲ್ಲಿ ಅಮಿತಾಭ್ ಬಚ್ಚನ್​ ಚಿಂತೆಗೆ ಒಳಗಾಗಿದ್ದರು. ಅಂಥ ಕಷ್ಟದ ಸಂದರ್ಭದಲ್ಲಿಯೂ ಅಮಿತಾಭ್​ ಬಚ್ಚನ್​ ಅವರು ಸೋಲು ಒಪ್ಪಿಕೊಳ್ಳಲಿಲ್ಲ. ಕೆಲಸದ ಮೂಲಕವೇ ಮತ್ತೆ ಎದ್ದು ನಿಲ್ಲುವ ಮನಸ್ಸು ಮಾಡಿದರು.

ಅಲ್ಲಿಯವರೆಗಿನ 44 ವರ್ಷಗಳ ವೃತ್ತಿಜೀವನದಲ್ಲಿ ಅಮಿತಾಭ್​ ಬಚ್ಚನ್​ ಅವರಿಗೆ ಆ ರೀತಿಯ ಕಷ್ಟ ಎಂದೂ ಬಂದಿರಲಿಲ್ಲ. ಸೀದಾ ಅವರು ನಿರ್ಮಾಪಕ ಯಶ್​ ಚೋಪ್ರಾ ನಿವಾಸಕ್ಕೆ ಹೋದರು. ದಯವಿಟ್ಟು ಅವಕಾಶ ಕೊಡಿ ಎಂದು ಬೇಡಿಕೊಂಡರು. ಆಗ ಶಾರುಖ್​ ಖಾನ್​ ಹೀರೋ ಆಗಿದ್ದ ‘ಮೊಹಬ್ಬತೇ’ ಸಿನಿಮಾದಲ್ಲಿ ಬಚ್ಚನ್​ ಅವರಿಗೆ ಒಂದು ಪಾತ್ರ ಸಿಕ್ಕಿತು. ಅಲ್ಲಿಂದ ಅವರ ಬದುಕು ಮತ್ತೆ ಬದಲಾಯಿತು. ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರಗಳನ್ನು ಮಾಡುತ್ತ ಅವರು ಮುನ್ನುಗ್ಗಲು ಆರಂಭಿಸಿದರು.

ಇದನ್ನೂ ಓದಿ
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಆ ಬಳಿಕ ತಮ್ಮ ಪಾಲಿಗೆ ಬಂದ ಎಲ್ಲ ಅವಕಾಶವನ್ನೂ ಅವರು ಒಪ್ಪಿಕೊಳ್ಳಲು ಶುರು ಮಾಡಿದರು. ಒಂದೊಂದೇ ಸಾಲ ತೀರಿಸುತ್ತಾ ಬಂದರು. ಕಳೆದುಕೊಂಡಿದ್ದ ಎಲ್ಲವನ್ನೂ ಮರಳಿ ಪಡೆದರು. ಈಗಲೂ ಅವರು ಬಹುಬೇಡಿಕೆಯ ಕಲಾವಿದನಾಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ.

ಇಳಿ ವಯಸ್ಸಿನಲ್ಲೂ ಪ್ರತಿ ದಿನ ಕೆಲಸ ಮಾಡುವ ಮೂಲಕ ಕೋಟ್ಯಂತರ ಜನರಿಗೆ ಅಮಿತಾಭ್ ಬಚ್ಚನ್​ ಅವರು ಮಾದರಿ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಎಷ್ಟೋ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Tue, 11 October 22