ಭದ್ರತೆಯವರ ಕಣ್ಣು ತಪ್ಪಿಸಿ ಅಮಿತಾಭ್ ಬಳಿ ಬಂದು ಕಾಲಿಗೆ ಬಿದ್ದ ಬಾಲಕ; ಆತನ ಹತ್ತಿರ ಇತ್ತು ವಿಶೇಷ ವಸ್ತು

ಭಾನುವಾರ ಅಭಿಮಾನಿಗಳನ್ನು ನೋಡಲು ಮನೆಯ ಹೊರ ಭಾಗಕ್ಕೆ ಬಂದಿದ್ದರು ಅಮಿತಾಭ್ ಬಚ್ಚನ್. ಬೌನ್ಸರ್​ಗಳು ಬ್ಯಾರಿಕೇಡ್​ಗಳನ್ನು ಹಾಕಿ ಅಭಿಮಾನಿಗಳನ್ನು ತಡೆದು ನಿಲ್ಲಿಸಿದ್ದರು. ಆಗ ಓರ್ವ ಅಭಿಮಾನಿ ಬ್ಯಾರಿಕೇಡ್ ದಾಟಿ ಬಂದಿದ್ದಾನೆ.

ಭದ್ರತೆಯವರ ಕಣ್ಣು ತಪ್ಪಿಸಿ ಅಮಿತಾಭ್ ಬಳಿ ಬಂದು ಕಾಲಿಗೆ ಬಿದ್ದ ಬಾಲಕ; ಆತನ ಹತ್ತಿರ ಇತ್ತು ವಿಶೇಷ ವಸ್ತು
ಅಮಿತಾಭ್
Updated By: ರಾಜೇಶ್ ದುಗ್ಗುಮನೆ

Updated on: Nov 22, 2022 | 12:19 PM

ಅಮಿತಾಭ್ ಬಚ್ಚನ್ (Amitabh Bachchan) ಅವರ ವಯಸ್ಸು 80 ದಾಟಿದೆ. ಆದಾಗ್ಯೂ ಅವರು ಇನ್ನೂ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೆ ಎಲ್ಲರೂ ಅಮಿತಾಭ್ ಬಚ್ಚನ್ ಅವರ ಅಭಿಮಾನಿಗಳೇ. ಅಮಿತಾಭ್ ಬಚ್ಚನ್ ಅವರು ಪ್ರತಿ ಭಾನುವಾರ ಮುಂಬೈನ ತಮ್ಮ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅಭಿಮಾನಿಗಳತ್ತ ಕೈ ಬೀಸಿ ಅವರನ್ನು ಖುಷಿಪಡಿಸುತ್ತಾರೆ. ಕಳೆದ ಭಾನುವಾರ (ನವೆಂಬರ್ 20) ಕೂಡ ಅಮಿತಾಭ್ ಬಚ್ಚನ್ ಅವರು ಅಭಿಮಾನಿಗಳನ್ನು ನೋಡಲು ಬಂದಿದ್ದಾರೆ. ಆಗ ಬಾಲಕನೋರ್ವ ಭದ್ರತೆಯವರ ಕಣ್ಣು ತಪ್ಪಿಸಿ ಅಮಿತಾಭ್ ಬಚ್ಚನ್ ಅವರ ಬಳಿ ಬಂದು ಕಾಲಿಗೆ ಬಿದ್ದಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ವೀಶೇಷ ಎಂದರೆ ಈ ಘಟನ ಬಗ್ಗೆ ಅಮಿತಾಭ್ ಬಚ್ಚನ್ ಕೂಡ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಭಾನುವಾರ ಅಭಿಮಾನಿಗಳನ್ನು ನೋಡಲು ಮನೆಯ ಹೊರ ಭಾಗಕ್ಕೆ ಬಂದಿದ್ದರು ಅಮಿತಾಭ್ ಬಚ್ಚನ್. ಬೌನ್ಸರ್​ಗಳು ಬ್ಯಾರಿಕೇಡ್​ಗಳನ್ನು ಹಾಕಿ ಅಭಿಮಾನಿಗಳನ್ನು ತಡೆದು ನಿಲ್ಲಿಸಿದ್ದರು. ಆಗ ಓರ್ವ ಅಭಿಮಾನಿ ಬ್ಯಾರಿಕೇಡ್ ದಾಟಿ ಬಂದಿದ್ದಾನೆ. ಭದ್ರತೆಯವರ ಕೈಗೆ ಸಿಗದೆ ನೇರವಾಗಿ ಅಮಿತಾಭ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಆತ, ಅಮಿತಾಭ್ ಬಚ್ಚನ್ ಅವರ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡಿದ್ದ. ಆತನ ಕಣ್ಣಲ್ಲಿ ನೀರಿತ್ತು. ಪೇಂಟಿಂಗ್​ಗೆ ಹಸ್ತಾಕ್ಷರ ಹಾಕಿಕೊಡುವಂತೆ ಆತ ಅಮಿತಾಭ್ ಬಳಿ ಕೇಳಿದ್ದ.

ಅಮಿತಾಭ್ ಇದಕ್ಕೆ ಸಿಟ್ಟು ಮಾಡಿಕೊಳ್ಳಲಿಲ್ಲ. ಬಾಲಕ ಭದ್ರತೆಯವರ ಕೈಗೆ ಸಿಗದೆ ತಪ್ಪಿಸಿಕೊಂಡು ಬಂದಿದ್ದಕ್ಕೆ ಬೈಯ್ಯಲಿಲ್ಲ. ಬದಲಿಗೆ ಹಸ್ತಾಕ್ಷರ ನೀಡಿದ್ದಾರೆ. ಇದರಿಂದ ಹುಡುಗ ಖುಷಿಪಟ್ಟಿದ್ದಾನೆ. ಸದ್ಯ, ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ. ಆ ಬಾಲಕನನ್ನು ಎಲ್ಲರೂ ‘ಅದೃಷ್ಟವಂತ’ ಎಂದು ಕರೆದಿದ್ದಾರೆ.

ಇದನ್ನೂ ಓದಿ
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​

‘ಈ ನಾಲ್ಕು ವರ್ಷದ ಬಾಲಕ ಇಂದೋರ್​ನಿಂದ ಇಲ್ಲಿಗೆ ಬಂದಿದ್ದಾನೆ. ನನ್ನ ನಟನೆಯ ಡಾನ್ ಚಿತ್ರ ನೋಡಿ ಆತ ಮೆಚ್ಚಿಕೊಂಡಿದ್ದ. ನನ್ನ ನಟನೆ, ನನ್ನ ಡೈಲಾಗ್​ಗಳು ಆತನಿಗೆ ಇಷ್ಟ ಆಗಿದ್ದವು. ನನ್ನ ಕಾಲಿಗೆ ಆತ ನಮಸ್ಕರಿಸಿದ. ತಂದೆ ಕೊಟ್ಟ ಲೆಟರ್ ನೀಡಿದ. ಅವನ ಪೇಂಟಿಂಗ್ ನೋಡಿದೆ. ಸಾಕಷ್ಟು ಖುಷಿಪಟ್ಟೆ’ ಎಂದಿದ್ದಾರೆ ಅಮಿತಾಭ್ ಬಚ್ಚನ್.

Published On - 12:04 pm, Tue, 22 November 22