AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್ ಆಸ್ತಿ 3000 ಸಾವಿರ ಕೋಟಿ ರೂಪಾಯಿ; ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?

ಅಮಿತಾಭ್ ಬಚ್ಚನ್ ಅವರು ಬಾಲಿವುಡ್​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಆಸ್ತಿ 3190 ಕೋಟಿ ರೂಪಾಯಿ ಇದೆ. ಅವರು ದುಬಾರಿ ವಾಹನ, ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅಮಿತಾಭ್​ಗೆ ಪದ್ಮ ವಿಭೂಷಣ ರೀತಿಯ ಅವಾರ್ಡ್​ಗಳನ್ನು ನೀಡಲಾಗಿದೆ. ಅವರ ಆಸ್ತಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. 

ಅಮಿತಾಭ್ ಆಸ್ತಿ 3000 ಸಾವಿರ ಕೋಟಿ ರೂಪಾಯಿ; ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?
ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 11, 2024 | 7:47 AM

Share

ಅಮಿತಾಭ್ ಬಚ್ಚನ್ ಅವರಿಗೆ ಇಂದು (ಅಕ್ಟೋಬರ್ 11) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಈಗ 82 ವರ್ಷಗಳು ತುಂಬಿವೆ. ಈ ವಯಸ್ಸಲ್ಲೂ ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ ಎಂದರೆ ಅದು ಸಣ್ಣ ಮಾತಲ್ಲ. ಅವರ ನಟನೆಯ ‘ವೆಟ್ಟೈಯಾನ್’ ಸಿನಿಮಾ ಈ ವಾರ ತೆರೆಗೆ ಬಂದು ಗೆದ್ದಿರುವುದರಿಂದ ಅವರ ಖುಷಿ ಹೆಚ್ಚಾಗಿದೆ. ಅದೇ ರೀತಿ ಈ ವರ್ಷ ರಿಲೀಸ್ ಆದ ‘ಕಲ್ಕಿ 2898 ಎಡಿ’ ಚಿತ್ರವೂ  ಮೆಚ್ಚುಗೆ ಪಡೆಯಿತು.

ಅಮಿತಾಭ್ ಬಚ್ಚನ್ ಅವರು ಬಾಲಿವುಡ್​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಆಸ್ತಿ 3190 ಕೋಟಿ ರೂಪಾಯಿ ಇದೆ. ಅವರು ದುಬಾರಿ ವಾಹನ, ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅಮಿತಾಭ್​ಗೆ ಪದ್ಮ ವಿಭೂಷಣ ರೀತಿಯ ಅವಾರ್ಡ್​ಗಳನ್ನು ನೀಡಲಾಗಿದೆ. ಅವರ ಆಸ್ತಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.

ಅಮಿತಾಭ್ ಬಚ್ಚನ್ ಅವರು ಮುಂಬೈನಲ್ಲಿ ಪ್ರತಿಷ್ಠಿತ ಜಾಗದಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದು, ಇದರಲ್ಲಿ 31ನೇ ಫ್ಲೋರ್​​ನಲ್ಲಿ ಫ್ಲ್ಯಾಟ್ ಹೊಂದಿದ್ದಾರೆ. ಅವರು ಜಲ್ಸಾದಲ್ಲಿ ವಾಸವಾಗಿದ್ದು, ಇದು ಜುಹುದಲ್ಲಿ ಇದೆ. ಇದರ ಬೆಲೆ 112 ಕೋಟಿ ರೂಪಾಯಿ. ಮುಂಬೈನ ಹಲವು ಕಡೆಗಳಲ್ಲಿ ಅವರು ಅಪಾರ್ಟ್​ಮೆಂಟ್​ಗಳನ್ನು ಹೊಂದಿರುತ್ತಾರೆ. ಜಲ್ಸಾ ಮನೆ ಸಾಕಷ್ಟು ವಿಶಾಲವಾಗಿದೆ. ಇದು ಗಾರ್ಡನ್ ಹೊಂದಿದ್ದು, ಹಲವು ಬೆಡ್​ರೂಂಗಳನ್ನು ಇದು ಹೊಂದಿದೆ.  ಅವರು ಇತ್ತೀಚೆಗೆ ಅಯೋಧ್ಯೆಯಲ್ಲಿ ಭೂಮಿ ಖರೀದಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಮಿತಾಭ್ ಬಚ್ಚನ್ ಅವರಿಗೆ ಹಲವು ಮೂಲಗಳಿಂದ ಹಣ ಬರುತ್ತದೆ. ಅವರು ಪ್ರತಿ ಚಿತ್ರಕ್ಕೆ 6 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ‘ಕಲ್ಕಿ 2898 ಎಡಿ’, ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಕ್ಯಾಡ್ಬರಿ ಡೈರಿ ಮಿಲ್ಕ್, ಡಾಬರ್ ಚಮನ್​ಪ್ರಾಶ್, ಕಲ್ಯಾಣ್ ಜ್ಯುವೆಲರ್ಸ್ ಸೇರಿ ಅನೇಕ ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಇದಕ್ಕೆ ಅವರು 5 ಕೋಟಿ ರೂಪಾಯಿ ಪಡೆಯುತ್ತಾರೆ.

‘ಕೌನ್ ಬನೇಗಾ ಕರೋಡ್ಪತಿ’ ನಡೆಸಿಕೊಡಲು ಪ್ರತಿ ಎಪಿಸೋಡ್​ಗೆ 5 ಕೋಟಿ ರೂಪಾಯಿ ಪಡೆಯುತ್ತಾರಂತೆ. ಈ ಕಾರಣಕ್ಕೆ ಅವರು ಈ ಶೋನ ಇನ್ನೂ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಅವರಿಗೆ ಬಾಡಿಗೆ ಮೂಲಕವೂ ಹಣ ಬರುತ್ತದೆ.

ಅಮಿತಾಭ್ ಅವರು ಚಿತ್ರರಂಗದಲ್ಲಿ 50 ವರ್ಷ ಕಳೆದಿದ್ದಾರೆ. ಅವರ ಆಸ್ತಿ 3190 ಕೋಟಿ ರೂಪಾಯಿಗೂ ಅಧಿಕವಾಗಿದೆ. ಬ್ಯಾಂಕ್ ಬ್ಯಾಲೆನ್ಸ್ 120 ಕೋಟಿ ರೂಪಾಯಿಗೂ ಅಧಿಕವಾಗಿದೆ. ರಿಯಲ್ ಎಸ್ಟೇಟ್​ ಮೇಲೆ ಅಮಿತಾಭ್ ಸಾಕಷ್ಟು ಹೂಡಿಕೆ ಮಾಡಿದ್ದಾರೆ.  ಕೆಲವು ಅಪಾರ್ಟ್​ಮೆಂಟ್​ಗಳನ್ನು ಬಾಡಿಗೆಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಅಮಿತಾಭ್​ನ ಲವ್​ ಮಾಡುವಾಗ ರೇಖಾಗೆ ಎಚ್ಚರಿಕೆ ಕೊಟ್ಟಿದ್ದ ಜಯಾ; ನಂತರ ಎಲ್ಲವೂ ಬದಲಾಯ್ತು

ಅಮಿತಾಭ್ ಕಾರ್ ಕಲೆಕ್ಷನ್ ಬಗ್ಗೆಯಂತೂ ಕೇಳೋದಬೇಡ. ಅವರ ಬಳಿ ಬೆಂಟ್ಲಿ, ರೋಲ್ಸ್ ರಾಯ್ಸ್, ರೇಂಜ್ ರೋವರ್ ವೋಗ್ ಮೊದಲಾದ ಕಾರು ಇದೆ. ಇಷ್ಟೇ ಅಲ್ಲದೆ, ಲೆಕ್ಸಸ್, ಆಡಿ, ಬೆಂಜ್ ಕಂಪನಿಯ ಕಾರುಗಳೂ ಅವರ ಬಳಿ ಇವೆ. ಅವರ ಬಳಿ 260 ಕೋಟಿ ರೂಪಾಯಿ ಬೆಲೆಯ ಪ್ರೈವೆಟ್ ಜೆಟ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:45 am, Fri, 11 October 24