‘ಗಾಯ ಬೇಗ ಗುಣವಾಗುತ್ತದೆ’; ‘ಪ್ರಾಜೆಕ್ಟ್​ ಕೆ’ ಸೆಟ್​ನಲ್ಲಿ ಗಾಯಗೊಂಡ ಅಮಿತಾಭ್​ ಬಚ್ಚನ್ ಪೋಸ್ಟ್​

ಅಮಿತಾಭ್ ಬಚ್ಚನ್ ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಇತ್ತೀಚೆಗೆ ಚಿತ್ರದ ಸೆಟ್​ನಲ್ಲಿ ಅವರು ಆ್ಯಕ್ಷನ್ ದೃಶ್ಯ ಮಾಡುತ್ತಿದ್ದರು. ಆಗ ಅವರಿಗೆ ಗಾಯ ಆಗಿದೆ.

‘ಗಾಯ ಬೇಗ ಗುಣವಾಗುತ್ತದೆ’; ‘ಪ್ರಾಜೆಕ್ಟ್​ ಕೆ’ ಸೆಟ್​ನಲ್ಲಿ ಗಾಯಗೊಂಡ ಅಮಿತಾಭ್​ ಬಚ್ಚನ್ ಪೋಸ್ಟ್​
ಅಮಿತಾಭ್ ಬಚ್ಚನ್

Updated on: Mar 10, 2023 | 10:49 AM

ಬಾಲಿವುಡ್ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರು ಇತ್ತೀಚೆಗೆ ಗಾಯಗೊಂಡಿದ್ದರು. ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್​ನಲ್ಲಿ ನಟಿಸುವಾಗ ಅವರ ಪಕ್ಕೆಲುಬಿಗೆ ಗಾಯ ಆಗಿತ್ತು. ಇದರಿಂದ ಅವರು ಮನೆಯಲ್ಲೇ ಕೂರುವಂತಾಗಿದೆ. ಈಗ ಅಮಿತಾಭ್ ಅವರು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರು ಈ ಘಟನೆ ಬಗ್ಗೆ, ಅದರಿಂದ ಚೇತರಿಕೆ ಕಾಣುತ್ತಿರುವ ಬಗ್ಗೆ ತಮ್ಮ ಬ್ಲಾಗ್​ನಲ್ಲಿ ಮಾಹಿತಿ ನೀಡಿದ್ದಾರೆ.

‘ಒಬ್ಬ ವ್ಯಕ್ತಿ ಕಳೆದುಹೋದ ಅವಕಾಶ ನೆನೆದು ಕೊರಗಬಹುದು ಅಥವಾ ಎದ್ದುನಿಂತು ಕಷ್ಟಗಳನ್ನು ಎದುರಿಸಿ ಮುಂದೆ ಸಾಗಬಹುದು. ಸೋಲಿನಿಂದ ಆದ ನಷ್ಟದ ನೋವು ತುಂಬಾ ದೊಡ್ಡದು. ದೇಹವು ಎಷ್ಟು ಬೇಗನೆ ಗಾಯಗೊಳ್ಳುತ್ತದೆಯೋ ಅಷ್ಟೇ ಬೇಗ ಗುಣವಾಗುತ್ತದೆ. ಎದ್ದೇಳಿ, ಹೋಗಿ ಮತ್ತೆ ಕೆಲಸ ಮಾಡಿ. ಯಾರಿಗೆ ಕೆಲಸವು ಹೊಸ ಆರಂಭವನ್ನು ತರುತ್ತದೆಯೋ ಅವರು ಸ್ವಂತವಾಗಿ ಮಾತನಾಡುತ್ತಾರೆ. ಇದು ನನ್ನ ದೇಹ , ನನ್ನ ಮನಸ್ಸು, ನನ್ನ ಇಚ್ಛೆ, ನನ್ನ ಬಯಕೆ’ ಎಂದು ಬರೆದುಕೊಂಡಿದ್ದಾರೆ ಅಮಿತಾಭ್ ಬಚ್ಚನ್.

ಇದನ್ನೂ ಓದಿ
ಒಪ್ಪಿಗೆ ಇಲ್ಲದೆ ಅಮಿತಾಭ್ ಬಚ್ಚನ್​ ಫೋಟೋ ಬಳಸುವಂತಿಲ್ಲ; ಕೋರ್ಟ್​ನಿಂದಲೇ ಬಂತು ಆದೇಶ
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ

‘ಜೀವನವೊಂದು ಚುಚ್ಚಿದ ಬಾಣ, ಸತ್ತಿರುವ ಮನಸ್ಸು. ಇದು ಸತ್ಯ. ಇದಕ್ಕೆ ಪುರಾವೆ ತರುವ ಅಗತ್ಯ ಇಲ್ಲ. ಮೊದಲು ದೇಹದಿಂದ ಬಾಣವನ್ನು ಹೊರತೆಗೆಯಿರಿ. ಬಾಣ ಹೊಡೆಯಲು ಯಾರು ಬಿಲ್ಲು ಎಳೆದರು, ಅವನು ಅದನ್ನು ಏಕೆ ಮಾಡಿದ ಇವುಗಳನ್ನು ನಂತರ ಯೋಚಿಸಬೇಕು. ಮೊದಲು ಬಾಣ ಹೊರತೆಗೆಯಿರಿ’ ಎಂದಿದ್ದಾರೆ ಅಮಿತಾಭ್.

ಅಮಿತಾಭ್ ಬಚ್ಚನ್ ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈ ವಯಸ್ಸಲ್ಲೂ ಅವರು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಸೆಟ್​ನಲ್ಲಿ ಅವರು ಆ್ಯಕ್ಷನ್ ದೃಶ್ಯ ಮಾಡುತ್ತಿದ್ದರು. ಆಗ ಅವರಿಗೆ ಗಾಯ ಆಗಿದೆ. ಈಗ ಅವರು ಇದರಿಂದ ಚೇತರಿಸಿಕೊಳ್ಳಬೇಕಿದೆ. ಅಮಿತಾಭ್ ಬಚ್ಚನ್ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರು ‘ಕಬ್ಜ’ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ವಿಶ್ ಮಾಡಿದ್ದರು.

ಪ್ರಾಜೆಕ್ಟ್​ ಕೆ:

ನಾಗ್ ಅಶ್ವಿನ್ ಅವರು ‘ಪ್ರಾಜೆಕ್ಟ್​ ಕೆ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ