ವಿರಾಟ್​ನ ಒಮ್ಮೆ ಮಾತ್ರ ಭೇಟಿ ಮಾಡಿದ್ದ ಅನಿಲ್ ಕಪೂರ್; ಆರಾಧಿಸುವಂತೆ ಮಾಡಿಬಿಟ್ಟ ಕೊಹ್ಲಿ

ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ನಂತರ, ಅನಿಲ್ ಕಪೂರ್ ಅವರು ತಮ್ಮ 2014ರ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. ಕೊಹ್ಲಿಯ ವಿನಮ್ರತೆ ಮತ್ತು ಸರಳತೆ ಅವರನ್ನು ಆಕರ್ಷಿಸಿತ್ತು ಎಂದು ಅವರು ಹೇಳಿದ್ದಾರೆ. ಕೊಹ್ಲಿಯ ಶಿಸ್ತು ಮತ್ತು ಸಾಧನೆಗಳನ್ನು ಅವರು ಮೆಚ್ಚುಗೆ ಪಡೆದಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ, ಭಾರತೀಯರ ಹೃದಯದಲ್ಲಿ ಅವರು ಯಾವಾಗಲೂ ಇರುತ್ತಾರೆ ಎಂದು ಅನಿಲ್ ಕಪೂರ್ ಹೇಳಿದ್ದಾರೆ.

ವಿರಾಟ್​ನ ಒಮ್ಮೆ ಮಾತ್ರ ಭೇಟಿ ಮಾಡಿದ್ದ ಅನಿಲ್ ಕಪೂರ್; ಆರಾಧಿಸುವಂತೆ ಮಾಡಿಬಿಟ್ಟ ಕೊಹ್ಲಿ
ಅನಿಲ್-ವಿರಾಟ್
Edited By:

Updated on: May 13, 2025 | 11:02 AM

ವಿರಾಟ್ ಕೊಹ್ಲಿ (Virat Kohli) ಅವರು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದು ತಿಳಿದೇ ಇದೆ. ಅವರು ಇಷ್ಟು ವರ್ಷಗಳ ಕಾಲ ನೀಡಿದ ಕೊಡುಗೆಯನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಈಗ ವಿರಾಟ್ ಅವರ ಬಗ್ಗೆ ನಟ ಅನಿಲ್ ಕಪೂರ್ ಮಾತನಾಡಿದ್ದಾರೆ. 11 ವರ್ಷಗಳ ಹಿಂದೆ ಕೊಹ್ಲಿ ಅವರನ್ನು ಅನಿಲ್ ಭೇಟಿ ಆದರು. ಅದು ವಿರಾಟ್ ಜೊತೆಗಿನ ಮೊದಲ ಹಾಗೂ ಕೊನೆಯ ಭೇಟಿ ಮಾಡಿ ಆಗಿತ್ತು. ಮೊದಲ ಭೇಟಿಗೆ ಇಂಪ್ರೆಸ್ ಆದರು ಅನಿಲ್. ಆ ಬಗ್ಗೆ ಅವರು ಬರೆದುಕೊಂಡಿದ್ದಾರೆ.

‘ಹನ್ನೊಂದು ವರ್ಷಗಳ ಹಿಂದೆ ಅನುಷ್ಕಾ ‘ದಿಲ್ ಧಡಕ್ನೆ ದೋ’ ಚಿತ್ರೀಕರಣದಲ್ಲಿದ್ದಾಗ ನಾವು ಒಂದು ಕ್ರೂಸ್‌ನಲ್ಲಿ ಭೇಟಿಯಾದೆವು. ನೀವು ಎಷ್ಟು ವಿನಮ್ರ ಮತ್ತು ಸರಳ ವ್ಯಕ್ತಿಯಾಗಿದ್ದಿರಿ ಎಂದು ನನಗೆ ಇನ್ನೂ ನೆನಪಿದೆ. ಅದು ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಅಂದಿನಿಂದ, ನಾನು ನಿಮ್ಮನ್ನು ದೂರದಿಂದಲೇ ಮೆಚ್ಚುತ್ತಿದ್ದೇನೆ’ ಎಂದು ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.

‘ನಿಮ್ಮ ಶಿಸ್ತು, ಉತ್ಸಾಹ ಮತ್ತು ಮೈದಾನದಲ್ಲಿ ನಿಮ್ಮ ಅದ್ಭುತ ಸಾಧನೆಗಳ ಮೂಲಕ ನೀವು ನಮಗೆ ಸಂಪೂರ್ಣ ಸಂತೋಷ ಮತ್ತು ಹೆಮ್ಮೆ ನೀಡಿದ್ದೀರಿ’ ಎಂದು ಅನಿಲ್ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ?
ನನ್ನ ತಂದೆ ಪಾಕಿಸ್ತಾನದವರು ಎಂದಿದ್ದ ಶಾರುಖ್ ಖಾನ್; ಈ ಕಾರಣಕ್ಕೆ ಮೌನ?
‘ಕೂಲಿ’ ಸಿನಿಮಾದ ಬಹುತೇಕ ಶೂಟ್​ನ ಬಾಡಿ ಡಬಲ್​ ಮೂಲಕವೇ ಮುಗಿಸಿದ ನಿರ್ದೇಶಕ
ಕಲರ್ಸ್​​ ಧಾರಾವಾಹಿಯಲ್ಲಿ ಗೌತಮಿ ಜಾಧವ್; ಪ್ರೋಮೋ ಮೂಲಕ ಬಿಗ್ ಸರ್​ಪ್ರೈಸ್

‘ನಾವು ಮತ್ತೆ ಭೇಟಿಯಾಗದಿದ್ದರೂ, ನಾನು ಯಾವಾಗಲೂ ನಿಮಗಾಗಿ ಹುರಿದುಂಬಿಸುತ್ತಿದ್ದೇನೆ. ನೀವು ಸಾಧಿಸಿದ ಎಲ್ಲದಕ್ಕೂ ಅಭಿನಂದನೆಗಳು. ನೀವು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು, ಆದರೆ ನೀವು 1.4 ಬಿಲಿಯನ್ ಭಾರತೀಯರ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಹೃದಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ. ಧನ್ಯವಾದಗಳು, ವಿರಾಟ್’ ಎಂದು ನಟ ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪರ ಕೇವಲ 27 ದಿನ ಮಾತ್ರ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

2015ರಲ್ಲಿ ರಿಲೀಸ್ ಆದ ಜೋಯಾ ಅಖ್ತರ್ ನಿರ್ದೇಶನದ ‘ದಿಲ್ ಧಡಕ್ನೆ ದೋ’ ಸಿನಿಮಾದಲ್ಲಿ ಅನುಷ್ಕಾ ಹಾಗೂ ಅನಿಲ್ ಕಪೂರ್ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಕೂಡ ಇದ್ದರು. ಈ ಸಿನಿಮಾದಲ್ಲಿ ಕ್ರ್ಯೂಸ್ ಕಥೆ ಇದೆ. ರೋಹಿತ್ ಹಾಗೂ ಅನುಷ್ಕಾ 2014ರಲ್ಲಿ ಡೇಟಿಂಗ್ ಆರಂಭಿಸಿದರು. ಈ ಕಾರಣದಿಂದ ಅನುಷ್ಕಾನ ಕೊಹ್ಲಿ ಕ್ರ್ಯೂಸ್​ನಲ್ಲಿ ಭೇಟಿ ಆದರು. 2017ರಲ್ಲಿ ಇವರು ವಿವಾಹ ಆದರು. ಅನುಷ್ಕಾ 2018ರ ಬಳಿಕ ಸಿನಿಮಾ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.