
‘ಬಿಗ್ ಬಾಸ್ 17′ ಸ್ಪರ್ಧಿ ಸಮರ್ಥ್ ಜುರೈಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಅಂಕಿತಾ ಲೋಖಂಡೆ (Ankita Lokhande) ಅವರ ಪತಿ ಮತ್ತು ಉದ್ಯಮಿ ವಿಕ್ಕಿ ಜೈನ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ವಿಕ್ಕಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುತ್ತಿರೋದು ಇದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವಿಕ್ಕಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಕ್ಕಿಗೆ ಏನಾಯಿತು ಎಂದು ಹಲವರು ಕೇಳಿದ್ದಾರೆ. ಈಗ ಅಂಕಿತಾ ಮತ್ತು ವಿಕ್ಕಿಯ ಆಪ್ತ ಸ್ನೇಹಿತ ಮತ್ತು ಚಲನಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಈ ಬಗ್ಗೆ ಪೋಸ್ಟ್ ಬರೆದು ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ವಿಕ್ಕಿ ಅಪಘಾತಕ್ಕೀಡಾಗಿದ್ದಾರೆ ಮತ್ತು ಅವರ ಕೈಗೆ 45 ಹೊಲಿಗೆಗಳಿವೆ ಎಂದು ಅವರು ಹೇಳಿದರು. ವಿಕ್ಕಿಯ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ಈಗ ಅವರ ಸ್ಥಿತಿ ಉತ್ತಮವಾಗಿದೆ ಎಂದು ಸಂದೀಪ್ ಹೇಳಿದ್ದಾರೆ.
ವಿಕಿ ಜೈನ್ ಭೀಕರ ಅಪಘಾತದಿಂದ ಬದುಕುಳಿದಿದ್ದು, ಕಳೆದ ಮೂರು ದಿನಗಳಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕಿಯ ಬಲಗೈಗೆ ಹಲವಾರು ಗಾಜಿನ ಚೂರುಗಳು ತಗುಲಿದ್ದು, 45 ಹೊಲಿಗೆಗಳು ಬೇಕಾಗಿವೆ. ಸಂದೀಪ್ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವುಗಳಲ್ಲಿ, ವಿಕ್ಕಿ ಆಸ್ಪತ್ರೆಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ಮತ್ತು ಅಂಕಿತಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
‘ವಿಕ್ಕಿಯ ಕೈಗೆ ಹಲವಾರು ಗಾಜಿನ ತುಂಡುಗಳು ತಗುಲಿದ್ದು, ಇದರಿಂದಾಗಿ ಅವರ ಕೈಗೆ 45 ಹೊಲಿಗೆ ಹಾಕಲಾಗಿದೆ. ಅವರು ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ. ಈ ಅಪಘಾತದ ನಂತರವೂ ಅವರು ತುಂಬಾ ಬಲಿಷ್ಠರಾಗಿದ್ದಾರೆ. ಅಂತಹ ಸ್ಥಿತಿಯಲ್ಲಿಯೂ ಅವರು ನಮ್ಮನ್ನು ನಗಿಸುತ್ತಿದ್ದಾರೆ. ಅವರನ್ನು ನೋಡಿದಾಗ ಏನೂ ಆಗಿಲ್ಲ ಎಂಬಂತೆ ಭಾಸವಾಗುತ್ತದೆ. ಆದರೆ ಅಂಕಿತಾ ಲೋಖಂಡೆ.. ನೀವು ಸೂಪರ್ ವುಮನ್ ಗಿಂತ ಕಡಿಮೆಯಿಲ್ಲ. ನೀವು 72 ಗಂಟೆಗಳ ಕಾಲ ಅವರನ್ನು ನೋಡಿಕೊಳ್ಳುತ್ತಿದ್ದೀರಿ ಮತ್ತು ಅವರ ಪಕ್ಕದಲ್ಲಿ ಬಂಡೆಯಂತೆ ಬಲವಾಗಿ ನಿಂತಿದ್ದೀರಿ. ನಿಮ್ಮ ಗಂಡನ ಮೇಲಿನ ನಿಮ್ಮ ಪ್ರೀತಿ ನಿಮ್ಮ ಗುರಾಣಿ. ನಿಮ್ಮ ಧೈರ್ಯವೇ ಅವರ ಶಕ್ತಿ’ ಎಂದು ಸಂದೀಪ್ ಬರೆದಿದ್ದಾರೆ. ಆದರೆ ವಿಕ್ಕಿಯ ಅಪಘಾತ ಎಲ್ಲಿ ಮತ್ತು ಹೇಗೆ ಸಂಭವಿಸಿತು ಎಂಬ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ.
ಇದನ್ನೂ ಓದಿ: ‘ನಾಗಿನ್’ ಧಾರಾವಾಹಿಯಲ್ಲಿ ನಟಿಸೋಕೆ ರೆಡಿ ಆದ ಅಂಕಿತಾ ಲೋಖಂಡೆ; ಸಿಗುತ್ತಿದೆ ಭರ್ಜರಿ ಸಂಭಾವನೆ?
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಅಂಕಿತಾ 2019 ರಲ್ಲಿ ವಿಕ್ಕಿ ಜೈನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ವಿಕ್ಕಿ ಮೂಲತಃ ಬಿಲಾಸ್ಪುರದವರಾಗಿದ್ದು, ದೊಡ್ಡ ಉದ್ಯಮಿಯಾಗಿದ್ದಾರೆ. ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರೂ 2021ರಲ್ಲಿ ಬಹಳ ಸಂಭ್ರಮದಿಂದ ವಿವಾಹವಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.