ಕ್ಲೀವೇಜ್ ತೋರಿಸೋ ಅಗತ್ಯವಿಲ್ಲ ಎಂದವರಿಗೆ ಖಡಕ್ ಉತ್ತರ ಕೊಟ್ಟ ಅನುಷ್ಕಾ ಶಂಕರ್
ಪ್ರಸಿದ್ಧ ಸಿತಾರ್ ವಾದಕಿ ಅನುಷ್ಕಾ ಶಂಕರ್ ಅವರ ಫೋಟೋಗಳಿಗೆ ಬಂದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ದೇಹ ಮತ್ತು ಉಡುಪಿನ ಆಯ್ಕೆಯು ಸಂಪೂರ್ಣವಾಗಿ ತಮ್ಮದೆಂದು ಹೇಳಿ, ಲೈಂಗಿಕ ದೌರ್ಜನ್ಯ, ಆರೋಗ್ಯ ಸಮಸ್ಯೆಗಳು ಮುಂತಾದ ಅನುಭವಗಳನ್ನು ಹಂಚಿಕೊಂಡು, ತಮ್ಮ ದೇಹದ ಬಗ್ಗೆ ಬೇರೆಯವರು ಟೀಕಿಸುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಈ ಧೈರ್ಯಶಾಲಿ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಪ್ರಸಿದ್ಧ ಸಿತಾರ್ ವಾದಕಿ ಮತ್ತು ಸಂಗೀತಗಾರ್ತಿ ಅನುಷ್ಕಾ ಶಂಕರ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಸಿತಾರ್ ವಾದಕ ಪಂಡಿತ್ ರವಿಶಂಕರ್ ಮಗಳು. ಅವರು ಉಡುಪಿನ ವಿಷಯಕ್ಕೆ ಸಾಕಷ್ಟು ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕೆಲವರು ಮಾಡಿದ ಕಾಮೆಂಟ್ಗಳನ್ನು ಎತ್ತಿ ತೋರಿಸಿದ್ದಾರೆ. ಜೊತೆಗೆ ಅವರುಗಳಿಗೆ ಪಾಠವನ್ನೂ ಕೂಡ ಮಾಡಿದ್ದಾರೆ.
ಅನುಷ್ಕಾ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಕಮೆಂಟ್ಗಳ ಸ್ಕ್ರೀನ್‌ಶಾಟ್‌ಗಳನ್ನು ಸೇರಿಸಿದ್ದಾರೆ. ಇದರಲ್ಲಿ ಕೆಲವರು, ‘ನಿಮಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಕ್ಲೀವೇಜ್ ತೋರಿಸೋ ಅಗತ್ಯವಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.
‘ಭಾರತೀಯ ಶಾಸ್ತ್ರೀಯ ಸಂಗೀತವು ಪವಿತ್ರ ಸಂಗೀತ, ಆದರೆ ಧರಿಸಿರುವ ಉಡುಪು ಹೊಂದಿಕೆಯಾಗುತ್ತಿಲ್ಲ’ ಎಂದು ಯಾರೋ ಕಾಮೆಂಟ್ ಮಾಡಿದ್ದಾರೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಕುಟುಂಬ ರಜಾದಿನದ ತನ್ನ ಬಿಕಿನಿ ಚಿತ್ರಗಳ ಮೇಲಿನ ಕಾಮೆಂಟ್‌ನ ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ, ಅದರಲ್ಲಿ ಯಾರೋ ಒಬ್ಬರು ‘ನೀವು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಮಾಡಬಾರದು. ದಯವಿಟ್ಟು ನಿಮ್ಮ ತಂದೆಯ ಘನತೆ ಬಗ್ಗೆ ಯೋಚಿಸಿ’ ಎಂದು ಕಾಮೆಂಟ್ ಮಾಡಿದ್ದಾರೆ.
View this post on Instagram
ಇದಕ್ಕೆ ಅನುಷ್ಕಾ ಅವರು ಉತ್ತರ ನೀಡಿದ್ದಾರೆ. ‘ಇದು ಎಲ್ಲರಂತೇ ಸಾಮಾನ್ಯ ದೇಹ. ಇದರಲ್ಲಿ ಏನೂ ವಿಶೇಷವಿಲ್ಲ. ಆದರೂ ಒಮ್ಮೊಮ್ಮೆ ಮಿರಾಕಲ್ ಎನಿಸುತ್ತದೆ. ನನ್ನ ದೇಹವು ನನ್ನನ್ನು ಏನೆಲ್ಲಾ ಅನುಭವಿಸಿದೆ ಎಂಬುದರ ಬಗ್ಗೆ ಯೋಚಿಸಿದಾಗ, ನಾನು ವಿಸ್ಮಯ ಮತ್ತು ಕೃತಜ್ಞತೆಯಿಂದ ತುಂಬಿರುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಈ ದೇಹ ಇಬ್ಬರನ್ನು ಸೃಷ್ಟಿಸಿದೆ. ಸಣ್ಣ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯವನ್ನು ಎದುರಿಸಿದೆ. ಪುರುಷರಿಂದ ಸಾಕಷ್ಟು ಅಪಾಯಕಾರಿ ಸಮಯ ಎದುರಿಸಿದೆ. ಹಲವು ಸರ್ಜಿಗಳಾಗಿವೆ. ಮುಟ್ಟಿನ ಸಮಯದಲ್ಲಿ ಸಾಕಷ್ಟು ನೋವು ಅನುಭವಿಸುವ ಸಮಸ್ಯೆ ಇದೆ. ಇನ್ನೂ ಹಲವು ಸಮಸ್ಯೆಗಳು ಇವೆ’ ಎಂದು ಅವರು ಹೇಳಿದ್ದಾರೆ.
ಅನುಷ್ಕಾ ಶಂಕರ್ ಬಹಳಷ್ಟು ಬರೆದಿದ್ದಾರೆ. ಇದು ನನ್ನ ದೇಹ ಮತ್ತು ಏನು ಧರಿಸಬೇಕೆಂಬುದು ನನ್ನಆಯ್ಕೆ. ಬೇರೆ ಯಾರಿಗೂ ಅದರ ಬಗ್ಗೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಅವರು ವಿಸ್ತಾರವಾಗಿ ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



