Anupam Kher: ‘ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಏನೋ ಸಮಸ್ಯೆ ಇರಬಹುದು’; ಆಸ್ಕರ್ನಿಂದ ಔಟ್ ಆಗಿದ್ದಕ್ಕೆ ಅನುಪಮ್ ಖೇರ್ ಪ್ರತಿಕ್ರಿಯೆ
The Kashmir Files | Oscar Awards: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಆಸ್ಕರ್ಗೆ ನಾಮಿನೇಟ್ ಆಗಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಆ ಬಗ್ಗೆ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.
95ನೇ ಆಸ್ಕರ್ ಪ್ರಶಸ್ತಿಯ (Oscar Awards) ನಾಮಿನೇಷನ್ ಪಟ್ಟಿ ಇತ್ತೀಚೆಗಷ್ಟೇ ಪ್ರಕಟ ಆಯಿತು. 300ಕ್ಕೂ ಅಧಿಕ ಸಿನಿಮಾಗಳು ನಾಮನಿರ್ದೇಶನಗೊಳ್ಳಲು ಅರ್ಹತೆ ಪಡೆದಿದ್ದವು. ಆ ಪೈಕಿ ಒಂದಷ್ಟು ಸಿನಿಮಾಗಳಿಗೆ ಮಾತ್ರ ನಾಮಿನೇಟ್ ಆಗುವ ಅವಕಾಶ ಸಿಕ್ಕಿದೆ. ಇನ್ನುಳಿದ ಸಿನಿಮಾಗಳಿಗೆ ತೀವ್ರ ನಿರಾಸೆ ಆಗಿದೆ. ಕನ್ನಡದ ‘ಕಾಂತಾರ’, ‘ವಿಕ್ರಾಂತ್ ರೋಣ’, ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಗಳು ರೇಸ್ನಿಂದ ಹೊರಗುಳಿದಿವೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಆಸ್ಕರ್ ಸಿಗಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಕುರಿತಾಗಿ ಆ ಚಿತ್ರದ ನಟ ಅನುಪಮ್ ಖೇರ್ (Anupam Kher) ಅವರು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಆ ಬಗ್ಗೆ ಅನುಪಮ್ ಖೇರ್ ಅವರಿಗೆ ಖುಷಿ ಇದೆ. ‘ಆರ್ಆರ್ಆರ್ ಚಿತ್ರಕ್ಕೆ ಕ್ರಿಟಿಕ್ಸ್ ಚಾಯ್ಸ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ವಿಚಾರ. ಅದನ್ನು ನಾವೇಕೆ ಸೆಲೆಬ್ರೇಟ್ ಮಾಡಬಾರದು? ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಖಂಡಿತವಾಗಿ ಏನೋ ಸಮಸ್ಯೆ ಇರಬಹುದು’ ಎಂದು ಅನುಪಮ್ ಖೇರ್ ಹೇಳಿದ್ದಾರೆ.
Oscar 2023 Nomination: ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟ; ಭಾರತಕ್ಕೆ ಬಂಪರ್ ಚಾನ್ಸ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಡಿಮೆ ಬಜೆಟ್ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಲವು ಆಯಾಮದಿಂದ ಈ ಸಿನಿಮಾ ಚರ್ಚೆಗೆ ಒಳಗಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಇದಕ್ಕೆ ನಿರ್ದೇಶಮ ಮಾಡಿದ್ದಾರೆ. ಈ ಸಿನಿಮಾ ಆಸ್ಕರ್ಗೆ ನಾಮಿನೇಟ್ ಆಗಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಇತ್ತೀಚೆಗೆ #boycottoscars ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಆರಂಭಿಸಿದ್ದರು.
ಭಾರತಕ್ಕೆ ಆಸ್ಕರ್ ನಿರೀಕ್ಷೆ:
ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್ಲಿಸ್ಟ್ ಆಗಿದ್ದರಿಂದ ನಾಮಿನೇಷನ್ ಪ್ರಕ್ರಿಯೆ ಮೇಲೆ ಸಖತ್ ನಿರೀಕ್ಷೆ ಮೂಡಿತ್ತು. ಅಂತಿಮವಾಗಿ ಭಾರತಕ್ಕೆ ಮೂರು ನಾಮಿನೇಷನ್ ಸಿಕ್ಕಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:01 pm, Thu, 26 January 23