ನೂರಾರು ಕೋಟಿ ರೂ. ಒಡೆಯನಾದರೂ ಬಾಡಿಗೆ ಮನೆಯಲ್ಲೇ ಇದ್ದಾರೆ ಅನುಪಮ್​ ಖೇರ್; ಕಾರಣವೇನು?

ವಿಜಯ್ 69 ಚಿತ್ರದ ನಟ ಅನುಪಮ್ ಖೇರ್ ಅವರು ಕೋಟ್ಯಾಧಿಪತಿಯಾಗಿದ್ದರೂ ಸ್ವಂತ ಮನೆ ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುವ ಅವರು, ಸ್ವಂತ ಮನೆ ಖರೀದಿಸುವ ಬದಲು ಹಣವನ್ನು ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ತಮ್ಮ ತಾಯಿಗೆ ಮಾತ್ರ ಶಿಮ್ಲಾದಲ್ಲಿ ಮನೆ ಖರೀದಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನೂರಾರು ಕೋಟಿ ರೂ. ಒಡೆಯನಾದರೂ ಬಾಡಿಗೆ ಮನೆಯಲ್ಲೇ ಇದ್ದಾರೆ ಅನುಪಮ್​ ಖೇರ್; ಕಾರಣವೇನು?
ಅನುಪಮ್ ಖೇರ್
Follow us
ರಾಜೇಶ್ ದುಗ್ಗುಮನೆ
|

Updated on: Nov 11, 2024 | 2:53 PM

ಅನುಪಮ್ ಖೇರ್ ಅವರ ನಟನೆಯ ‘ವಿಜಯ್ 69’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿದೆ. ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದರೆ, ಅವರು ಈವರೆಗೆ ಸ್ವಂತ ಮನೆ ಹೊಂದಿಲ್ಲ. ಈ ವಿಚಾರವನ್ನು ಸ್ವತಃ ಅನುಪಮ್ ಖೇರ್ ಅವರೇ ರಿವೀಲ್ ಮಾಡಿದ್ದಾರೆ. ಸ್ವಂತ ಮನೆ ಹೊಂದದೇ ಇರಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಇದನ್ನು ಕೆಲವರು ಒಪ್ಪಿಕೊಂಡಿದ್ದಾರೆ.

ಅನುಪಮ್ ಖೇರ್ ಅವರು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದು, ಇದು ಬಾಡಿಗೆಯದ್ದು. ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಅಪಾರ್ಟ್​​ಮೆಂಟ್​ನ ಬಾಡಿಗೆ ಪಡೆದು ಅಲ್ಲಿ ವಾಸವಾಗಿದ್ದೇನೆ. ನಾನು ಸ್ವಂತ ಮನೆ ಹೊಂದಬಾರದು ಎಂದು ನಿರ್ಧರಿಸಿದೆ. ಯಾರಿಗಾಗಿ ಈ ಸ್ವಂತ ಮನೆ? ಪ್ರತಿ ತಿಂಗಳು ಬಾಡಿಗೆ ಕಟ್ಟಿ ಹಾಯಾಗಿ ವಾಸ ಮಾಡಿ. ನೀವು ಮನೆ ಖರೀದಿ ಮಾಡಬೇಕು ಎಂದು ತೆಗೆದಿಟ್ಟ ಹಣವನ್ನು ಬ್ಯಾಂಕ್​ನಲ್ಲಿ ಇಡಿ. ಅದರಿಂದ ಬಾಡಿಗೆ ಕಟ್ಟಿ’ ಎಂದಿದ್ದಾರೆ ಅವರು.

‘ನೀವು ಹೋದ ಬಳಿಕ ನಿಮ್ಮ ಮನೆಗಾಗಿ ನಿಮ್ಮವರು ಜಗಳ ಆಡಬಹುದು. ಅದರ ಬದಲು ಹಣವನ್ನು ಹಂಚುವುದು ಉತ್ತಮ. ನಾನು ಶಿಮ್ಲಾದಲ್ಲಿ ನನ್ನ ತಾಯಿಗಾಗಿ ಒಂದು ಮನೆಯನ್ನು ಖರೀದಿಸಿದೆ. ಏಳು ವರ್ಷಗಳ ಹಿಂದೆ ನಾನು ನನ್ನ ತಾಯಿಗೆ ಏನು ಬೇಕು ಎಂದು ಕೇಳಿದೆ. ಮನೆ ಬೇಕು ಎಂದು ಹೇಳಿದರು. ಹೀಗಾಗಿ ಮನೆ ಖರೀದಿಸಿದೆ. ನನ್ನ ತಂದೆ ಮೃತಪಟ್ಟ ಬಳಿಕ ಅವರು ಅಲ್ಲಿ ವಾಸವಾಗಿರಲಿಲ್ಲ’ ಎಂದಿದ್ದಾರೆ ಅನುಪಮ್ ಖೇರ್.

ಇದನ್ನೂ ಓದಿ: ‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

‘ಒಂದು ಬೆಡ್​ರೂಂ ಮನೆ ಬೇಕು ಎಂದರು. ನಾನು ಎಂಟು ಬೆಡ್​ರೂಂ ಮನೆ ಕೊಡಿಸಿದೆ. ಹೆಚ್ಚಿನ ಕರೆಂಟ್​ ಬಿಲ್ ಬರುತ್ತದೆ ಎಂದು ಅವರು ಅಲ್ಲಿಗೆ ಹೋದಾಗಲೆಲ್ಲ ಲೈಟ್​ನ ಆರಿಸಿ ಕುಳಿತುಕೊಳ್ಳುತ್ತಾರೆ. ವಿದ್ಯುತ್ ಬಿಲ್ ಹೆಚ್ಚು ಬರಹುದು’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ