AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND Vs PAK ಪಂದ್ಯ ವೀಕ್ಷಿಸಲು ಅಹಮದಾಬಾದ್​ಗೆ ತೆರಳಿದ ಅನುಷ್ಕಾ; ಸಚಿನ್, ದಿನೇಶ್ ಕಾರ್ತಿಕ್ ಜೊತೆ ಪೋಸ್

ಇತ್ತೀಚೆಗೆ ಟೀಂ ಇಂಡಿಯಾ ಮ್ಯಾಚ್ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಆಗಮಿಸಿರಲಿಲ್ಲ. ಅವರು ಪ್ರೆಗ್ನೆಂಟ್ ಎನ್ನುವ ಕಾರಣಕ್ಕೆ ಪಂದ್ಯ ವೀಕ್ಷಣೆಗೆ ಬರುತ್ತಿಲ್ಲ ಎಂದು ಅನೇಕರು ಊಹಿಸಿದ್ದರು. ಆದರೆ, ಇದನ್ನು ಅನುಷ್ಕಾ ಶರ್ಮಾ ಸುಳ್ಳು ಮಾಡಿದ್ದಾರೆ.

IND Vs PAK ಪಂದ್ಯ ವೀಕ್ಷಿಸಲು ಅಹಮದಾಬಾದ್​ಗೆ ತೆರಳಿದ ಅನುಷ್ಕಾ; ಸಚಿನ್, ದಿನೇಶ್ ಕಾರ್ತಿಕ್ ಜೊತೆ ಪೋಸ್
ದಿನೇಶ್, ಸಚಿನ್, ಅನುಷ್ಕಾ
TV9 Web
| Edited By: |

Updated on: Oct 14, 2023 | 10:58 AM

Share

ಇಂದು (ಅಕ್ಟೋಬರ್ 14) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಸೆಲೆಬ್ರಿಟಿಗಳು ತೆರಳುತ್ತಿದ್ದಾರೆ. ಈಗಾಗಲೇ ಈ ಭಾಗದ ಹೋಟೆಲ್ ರೂಂಗಳು ಬುಕ್ ಆಗಿವೆ. ಈ ಮ್ಯಾಚ್ ವೀಕ್ಷಿಸಲು ನಟಿ ಹಾಗೂ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ ಕೂಡ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇತ್ತೀಚೆಗೆ ಟೀಂ ಇಂಡಿಯಾ ಮ್ಯಾಚ್ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಆಗಮಿಸಿರಲಿಲ್ಲ. ಅವರು ಪ್ರೆಗ್ನೆಂಟ್ ಎನ್ನುವ ಕಾರಣಕ್ಕೆ ಪಂದ್ಯ ವೀಕ್ಷಣೆಗೆ ಬರುತ್ತಿಲ್ಲ ಎಂದು ಅನೇಕರು ಊಹಿಸಿದ್ದರು. ಆದರೆ, ಇದನ್ನು ಅನುಷ್ಕಾ ಶರ್ಮಾ ಸುಳ್ಳು ಮಾಡಿದ್ದಾರೆ. ಫ್ಲೈಟ್​ನಲ್ಲಿ ಅನುಷ್ಕಾ, ಸಚಿನ್ ತೆಂಡೂಲ್ಕರ್ ಹಾಗೂ ದಿನೇಶ್ ಕಾರ್ತಿಕ್ ಪೋಸ್ ನೀಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಇನ್ನು, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಹೊರ ಬರುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಎಲ್ಲರ ಕಣ್ಣು ಅನುಷ್ಕಾ ಶರ್ಮಾ ಅವರ ಹೊಟ್ಟೆಯ ಮೇಲೇ ಇತ್ತು. ಆದರೆ, ಯಾವುದೇ ಬೇಬಿ ಬಂಪ್ ಕಾಣಿಸಲಿಲ್ಲ. ಈ ಮೂಲಕ ಎದ್ದಿರುವ ವದಂತಿಗೆ ಅವರು ಫುಲ್​ಸ್ಟಾಪ್ ಏಳೆದಂತೆ ಆಗಿದೆ.

ಇದನ್ನೂ ಓದಿ: ಕೊನೆಯಾಯಿತು ಅನುಷ್ಕಾ ಶರ್ಮಾ ತಮ್ಮನ ಲವ್ ಸ್ಟೋರಿ; ಯುವ ನಟಿಯ ಜೊತೆ ಬ್ರೇಕಪ್

ಅನುಷ್ಕಾ ಶರ್ಮಾ ಜೊತೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಈ ಪಂದ್ಯ ವೀಕ್ಷಿಸಲು ಅಹಮದಾಬಾದ್​ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿಗೆ ಈ ಪಂದ್ಯದ ಟಿಕೆಟ್​ಗಳು ಮಾರಾಟ ಆಗಿವೆ. ಈ ಪಂದ್ಯ ಸಾಕಷ್ಟು ಹೈವೋಲ್ಟೇಜ್​ನಿಂದ ಕೂಡಿರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು