Suniel Shetty: ‘ಮದುವೆ ಬಳಿಕ ಕೆಎಲ್​ ರಾಹುಲ್​, ಅಥಿಯಾ ಶೆಟ್ಟಿ ಪೋಸ್​ ಕೊಡ್ತಾರೆ’; ಪಾಪರಾಜಿಗಳಿಗೆ ಸುನೀಲ್​ ಶೆಟ್ಟಿ ಭರವಸೆ

Athiya Shetty KL Rahul Marriage: ಸುನೀಲ್​ ಶೆಟ್ಟಿ ಅವರ ಫಾರ್ಮ್​ ಹೌಸ್​ನಲ್ಲಿ ಕೆಎಲ್​ ರಾಹುಲ್​-ಅಥಿಯಾ ಶೆಟ್ಟಿ ಮದುವೆ ನಡೆಯುತ್ತಿದೆ. ಫಾರ್ಮ್​ ಹೌಸ್​ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ.

Suniel Shetty: ‘ಮದುವೆ ಬಳಿಕ ಕೆಎಲ್​ ರಾಹುಲ್​, ಅಥಿಯಾ ಶೆಟ್ಟಿ ಪೋಸ್​ ಕೊಡ್ತಾರೆ’; ಪಾಪರಾಜಿಗಳಿಗೆ ಸುನೀಲ್​ ಶೆಟ್ಟಿ ಭರವಸೆ
ಅಥಿಯಾ ಶೆಟ್ಟಿ, ಕೆಎಲ್​ ರಾಹುಲ್​, ಸುನೀಲ್​ ಶೆಟ್ಟಿ

Updated on: Jan 22, 2023 | 6:37 PM

ಬಾಲಿವುಡ್​ನ ಖ್ಯಾತ ನಟ ಸುನೀಲ್​ ಶೆಟ್ಟಿ ಅವರ ಕುಟುಂಬದಲ್ಲಿ ಶುಭಕಾರ್ಯ ನಡೆಯುತ್ತಿದೆ. ಅವರ ಪುತ್ರಿ ಅಥಿಯಾ ಶೆಟ್ಟಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕ್ರಿಕೆಟರ್​ ಕೆಎಲ್​ ರಾಹುಲ್​ ಜೊತೆ ಅಥಿಯಾ ಶೆಟ್ಟಿ ವಿವಾಹ (Athiya Shetty Marriage) ನೆರವೇರುತ್ತಿದೆ. ಹಲವು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈಗ ಹಸೆಮಣೆ ಏರುವ ಮೂಲಕ ಅವರ ಪ್ರೀತಿಗೆ ಅಧಿಕೃತ ಮುದ್ರೆ ಬೀಳುತ್ತಿದೆ. ಮಗಳ ವಿವಾಹ ಕಾರ್ಯದ ಕೊನೇ ಕ್ಷಣದ ತಯಾರಿಯಲ್ಲಿ ಸುನೀಲ್​ ಶೆಟ್ಟಿ ಬ್ಯುಸಿ ಆಗಿದ್ದಾರೆ. ಸೋಮವಾರ (ಜ.23) ಕೆಎಲ್​ ರಾಹುಲ್​ (KL Rahul) ಹಾಗೂ ಅಥಿಯಾ ಶೆಟ್ಟಿ ಮದುವೆ ನಡೆಯಲಿದೆ. ಮದುವೆ ಆಗುತ್ತಿದ್ದಂತೆಯೇ ಅವರು ಪಾಪರಾಜಿಗಳ ಕ್ಯಾಮೆರಾಗಳಿಗೆ ಪೋಸ್​ ಕೊಡುತ್ತಾರೆ ಎಂದು ಸುನೀಲ್​ ಶೆಟ್ಟಿ (Suniel Shetty) ಭರವಸೆ ನೀಡಿದ್ದಾರೆ.

ಖಂಡಾಲದಲ್ಲಿ ಇರುವ ಸುನೀಲ್​ ಶೆಟ್ಟಿ ಅವರ ಫಾರ್ಮ್​ ಹೌಸ್​ನಲ್ಲಿ ಮದುವೆ ಕಾರ್ಯಗಳು ನಡೆಯುತ್ತಿವೆ. ಫಾರ್ಮ್​ ಹೌಸ್​ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಅವರನ್ನು ನೋಡಿದ ಸುನೀಲ್​ ಶೆಟ್ಟಿ ಅವರು ಕಾರಿನಿಂದ ಕೆಳಗೆ ಇಳಿದುಬಂದು ಮಾತನಾಡಿದ್ದಾರೆ. ‘ನಾವು ನಾಳೆ ಬರುತ್ತೇವೆ. ಮಕ್ಕಳನ್ನು ನಾನು ಕರೆದುಕೊಂಡು ಬರುತ್ತೇನೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಇದನ್ನೂ ಓದಿ: Suniel Shetty: ‘ನಾವು ದಿನವಿಡೀ ಡ್ರಗ್ಸ್​ ತಗೊಳಲ್ಲ’: ಬಾಲಿವುಡ್​ ಉಳಿಸಲು ಯೋಗಿ, ಮೋದಿಗೆ ಸುನೀಲ್​ ಶೆಟ್ಟಿ ಮನವಿ

ಮಗಳ ಮದುವೆ ಮಾಡುತ್ತಿರುವ ಸುನೀಲ್​ ಶೆಟ್ಟಿಗೆ ಪಾಪರಾಜಿಗಳು ಅಭಿನಂದನೆ ತಿಳಿಸಿದ್ದಾರೆ. ಅವರೆಲ್ಲರಿಗೂ ಸುನೀಲ್​ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ‘ನಮ್ಮ ಮೇಲೆ ನೀವೆಲ್ಲ ಪ್ರೀತಿ ತೋರಿಸಿದ್ದಕ್ಕೆ ಬಹಳ ಥ್ಯಾಂಕ್ಸ್​’ ಎಂದು ಅವರು ಹೇಳಿದ್ದಾರೆ. ಪಾಪರಾಜಿಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರು ಕಮೆಂಟ್​ಗಳ ಮೂಲಕ ಸುನೀಲ್​ ಶೆಟ್ಟಿ ಕುಟುಂಬಕ್ಕೆ ಶುಭ ಕೋರುತ್ತಿದ್ದಾರೆ.

ಇದನ್ನೂ ಓದಿ: ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ

ಕೆಎಲ್​ ರಾಹುಲ್​ ಮತ್ತು ಅಥಿಯಾ ಶೆಟ್ಟಿ ಅವರು ಹಲವು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಅವರಿಬ್ಬರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳನ್ನು ಗಮನಿಸಿದರೆ ಪ್ರೀತಿಯ ವಿಚಾರ ಖಚಿತವಾಗುವಂತಿತ್ತು. ಮದುವೆ ಬಗ್ಗೆ ಅನೇಕ ಬಾರಿ ಸುದ್ದಿ ಕೇಳಿಬಂದಿತ್ತು. ಅಂತೂ ಈಗ ಅದು ನಿಜವಾಗುತ್ತಿದೆ. ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆಯುತ್ತಿದೆ.

ತಂದೆಯ ರೀತಿಯೇ ಬಾಲಿವುಡ್​ನಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಅಥಿಯಾ ಶೆಟ್ಟಿ ಅವರು ‘ಹೀರೋ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಆದರೆ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:49 pm, Sun, 22 January 23