ಅಕ್ಷಯ್ ಕುಮಾರ್, ಕೃತಿ ಸನೋನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ‘ಬಚ್ಚನ್ ಪಾಂಡೆ’ (Bachchhan Paandey) ಶುಕ್ರವಾರ ಅಂದರೆ ಹೋಳಿ ಹಬ್ಬದಂದು ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಅಕ್ಷಯ್ (Akshay Kumar) ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಮೂಡಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಚಿತ್ರ ನಿರೀಕ್ಷಿಸಿದಷ್ಟು ಗಳಿಸುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ಹಾಗೆಂದು ಅಕ್ಷಯ್ ಚಿತ್ರ ಗಳಿಕೆಯಲ್ಲಿ ಹಿಂದೆ ಬಿದ್ದಿದೆಯೇ ಎಂದರೆ ಅದಕ್ಕೂ ಇಲ್ಲ ಎನ್ನುವ ಉತ್ತರವೇ ಬಾಲಿವುಡ್ ಅಂಗಳದಿಂದ ಬರುತ್ತದೆ. ಅಕ್ಷಯ್ ನಟನೆಯ ಹಿಂದಿನ ಚಿತ್ರ ‘ಸೂರ್ಯವಂಶಿ’ಯಷ್ಟು ‘ಬಚ್ಚನ್ ಪಾಂಡೆ’ ಗಳಿಸುತ್ತಿಲ್ಲ. ಹಾಗಾಗಿ ಕಲೆಕ್ಷನ್ ಸಾಧಾರಣ ಮಟ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಚಿತ್ರ ಗಳಿಸಿದ್ದೆಷ್ಟು ಎನ್ನುವ ಪ್ರಶ್ನೆಗೆ ಟ್ರೇಡ್ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ನಲ್ಲಿ ಉತ್ತರವಿದೆ. ಒಂದು ಅಂದಾಜಿನ ಪ್ರಕಾರ ‘ಬಚ್ಚನ್ ಪಾಂಡೆ’ ಮೊದಲ ದಿನ ಗಳಿಸಿದ್ದು ಸುಮಾರು 13.25 ಕೋಟಿ ರೂಗಳು. ವೀಕೆಂಡ್ ಆರಂಭವಾಗುವುದರಿಂದ ಕಲೆಕ್ಷನ್ ಏರಲಿದೆ ಎನ್ನಲಾಗಿತ್ತು. ಆದರೆ ಎರಡನೇ ದಿನ ಕಲೆಕ್ಷನ್ ಕಡಿಮೆಯಾಗಿದೆ.
‘ಬಚ್ಚನ್ ಪಾಂಡೆ’ ಎರಡನೇ ದಿನ ಸುಮಾರು 12 ಕೋಟಿ ರೂ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ರೂ ದಾಟಿದೆ. ಅಕ್ಷಯ್ ನಟನೆಯ ‘ಸೂರ್ಯವಂಶಿ’ ಕಳೆದ ಕೆಲವು ತಿಂಗಳುಗಳ ಹಿಂದೆ ರಿಲೀಸ್ ಆಗಿತ್ತು. ಅದು ರಿಲೀಸ್ ಆದ ಮೊದಲ ದಿನವೇ 26 ಕೋಟಿ ರೂ ಬಾಚಿಕೊಂಡಿತ್ತು. ಇದಕ್ಕೆ ಹೋಲಿಸಿದಾಗ ‘ಬಚ್ಚನ್ ಪಾಂಡೆ’ ನಿರೀಕ್ಷಿತ ಮಟ್ಟದಲ್ಲಿ ಗಳಿಸುತ್ತಿಲ್ಲ. ಅದಾಗ್ಯೂ ಇಂದು (ಭಾನುವಾರ) ಚಿತ್ರದ ಕಲೆಕ್ಷನ್ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
‘ಬಚ್ಚನ್ ಪಾಂಡೆ’ ಕಲೆಕ್ಷನ್ ಕುರಿತ ಟ್ವೀಟ್:
#BachchhanPaandey gets hit by the unprecedented #TKF wave across the country… Mass circuits are steady, but plexes remain low on Day 2… Needs to improve its performance on Day 3… Fri 13.25 cr, Sat 12 cr. Total: ₹ 25.25 cr. #India biz. pic.twitter.com/bnStlDFKg6
— taran adarsh (@taran_adarsh) March 20, 2022
ಫರ್ಹಾದ್ ಸಮ್ಜಿ ‘ಬಚ್ಚನ್ ಪಾಂಡೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ಚಿತ್ರವನ್ನು ನಿರ್ಮಿಸಿದ್ದಾರೆ. 2014ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜಿಗರ್ಥಂಡ’ದ ರಿಮೇಕ್ ಬಚ್ಚನ್ ಪಾಂಡೆ. ಗ್ಯಾಂಗ್ಸ್ಟರ್ ಪಾತ್ರದಲ್ಲಿ ಅಕ್ಷಯ್ ನಟಿಸಿದ್ದಾರೆ. ಮೂಲ ಚಿತ್ರಕ್ಕೂ ಹಿಂದಿಗೂ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದ್ದು, ತಮಿಳಿನಲ್ಲಿ ಸಿದ್ಧಾರ್ಥ್ ನಟಿಸಿದ್ದ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಯಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ
‘ದಿ ಕಾಶ್ಮೀರ್ ಫೈಲ್ಸ್’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ್ದೇ ಆರ್ಭಟ