ಸಖತ್ ಚಿಲ್ ಆಗಿದೆ ‘ಬ್ಯಾಡ್ಸ್ ಆಫ್ ಬಾಲಿವುಡ್’; ಹೈಲೈಟ್ಸ್ ಏನು?

ಆರ್ಯನ್ ಖಾನ್ ನಿರ್ದೇಶನದ ಹೊಸ ವೆಬ್ ಸರಣಿಯು ಮೆಚ್ಚುಗೆ ಪಡೆಯುತ್ತಿದೆ. ಸ್ಟಾರ್ ಮಕ್ಕಳಲ್ಲದವರು ಚಿತ್ರರಂಗಕ್ಕೆ ಪ್ರವೇಶಿಸುವುದು ಹೇಗೆ, ಬಾಲಿವುಡ್‌ನಲ್ಲಿನ ಸ್ಪರ್ಧೆ ಮತ್ತು ಅಡೆತಡೆಗಳು, ಹಾಗೂ ಅದರಲ್ಲಿನ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಚಿತ್ರಿಸಲಾಗಿದೆ. ಹಾಸ್ಯ ಮತ್ತು ಥ್ರಿಲ್ಲರ್‌ನ ಸಂಯೋಜನೆಯೊಂದಿಗೆ, ಈ ಸರಣಿಯು ಅನಿರೀಕ್ಷಿತ ಟ್ವಿಸ್ಟ್‌ನೊಂದಿಗೆ ಕೊನೆಗೊಳ್ಳುತ್ತದೆ.

ಸಖತ್ ಚಿಲ್ ಆಗಿದೆ ‘ಬ್ಯಾಡ್ಸ್ ಆಫ್ ಬಾಲಿವುಡ್’; ಹೈಲೈಟ್ಸ್ ಏನು?
ಬ್ಯಾಡ್ಸ್ ಆಫ್ ಬಾಲಿವುಡ್

Updated on: Sep 20, 2025 | 1:21 PM

ಸೆಲೆಬ್ರಿಟಿ ಮಕ್ಕಳು ಹೀರೋ ಆಗಿ, ಹೀರೋಯಿನ್ ಆಗಿ ಚಿತ್ರರಂಗಕ್ಕೆ ಕಾಲಿಡೋದು ಸರ್ವೇ ಸಾಮಾನ್ಯ. ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಕೂಡ ಇದನ್ನೇ ಮಾಡಬಹುದಿತ್ತು. ಆದರೆ, ಅವರ ಆಯ್ಕೆ ಬೇರೆಯದೇ ಆಗಿತ್ತು. ಅವರು ನಿರ್ದೇಶನ ಆಯ್ಕೆ ಮಾಡಿಕೊಂಡರು. ಇಡೀ ಕುಟುಂಬ ಬಾಲಿವುಡ್​ನ ಹತ್ತಿರದಿಂದ ನೋಡಿರುವುದರಿಂದ ಅವರು ಇದೇ ವಿಚಾರ ಇಟ್ಟುಕೊಂಡು ವೆಬ್ ಸೀರಿಸ್ ಮಾಡಿದ್ದಾರೆ. ಈ ಸರಣಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ.

ಆಸ್ಮಾನ್ ಸಿಂಗ್ (ಲಕ್ಷ್ಯ ಲಾಲ್ವಾನಿ) ಬಾಲಿವುಡ್​ನಲ್ಲಿ ಸಿನಿಮಾ ಮಾಡಬೇಕು ಎಂದು ಕನಸು ಕಂಡಿರುತ್ತಾನೆ. ಆತ ಬಾಲಿವುಡ್​ನ ಯಾವುದೇ ಸೆಲೆಬ್ರಿಟಿ ಮಗನಲ್ಲ. ಆದರೂ ಕಷ್ಟಪಟ್ಟು ಅವಕಾಶ ಪಡೆಯುತ್ತಾನೆ. ಸ್ಟಾರ್ ಹೀರೋ ಅಜಯ್ ತಲ್ವಾರ್ (ಬಾಬಿ ಡಿಯೋಲ್) ಮಗಳು ಸಾನ್ಯಾ (ಅನ್ಯಾ ಸಿಂಗ್) ಜೊತೆ ಸಿನಿಮಾ ಸಹಿ ಮಾಡುತ್ತಾನೆ ಆಸ್ಮಾನ್. ಅಲ್ಲಿಂದ ಆಸ್ಮಾನ್ ಒದ್ದಾಟ ಶುರು. ಆಸ್ಮಾನ್ ವಿರುದ್ಧ ಅಜಯ್ ಅಷ್ಟು ದ್ವೇಷ ಸಾಧಿಸೋದು ಏಕೆ? ಆಸ್ಮಾನ್ ಏನೆಲ್ಲ ಸಮಸ್ಯೆ ಎದುರಿಸುತ್ತಾನೆ ಎಂಬಿತ್ಯಾದಿ ವಿಚಾರಗಳನ್ನು ಸರಣಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ
ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ ತನುಶ್ರೀ ದತ್ತಾ
ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ?
ಬದಲಾಗೋದೇ ಇಲ್ಲ ಅಕ್ಷಯ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
‘ಕಲ್ಕಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ

ಅನನ್ಯಾ ಪಾಂಡೆ ಅವರು ತಾವು ತುಂಬಾನೇ ಸ್ಟ್ರಗಲ್ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆರ್ಯನ್ ಖಾನ್ ಅವರನ್ನು ಉದ್ದೇಶ ಪೂರ್ವಕವಾಗಿ ಡ್ರಗ್ ಕೇಸ್​ನಲ್ಲಿ ಅರೆಸ್ಟ್ ಮಾಡಿಸಲಾಗಿತ್ತು ಎಂಬ ಮಾತಿದೆ. ಈ ರೀತಿಯ ಹಲವು ವಿಚಾರಗಳನ್ನು ಈ ವೆಬ್ ಸರಣಿಯಲ್ಲಿ ಸೇರಿಸಲಾಗಿದೆ. ಸಾಕಷ್ಟು ಹಾಸ್ಯ ಭರಿತವಾಗಿ ಸರಣಿ ಮೂಡಿ ಬಂದಿದೆ.

ಹಾಗಾಂತ ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಬಾಲಿವುಡ್​ನ ಹೊಲಸುತನ, ಒಳ್ಳೆಯ ತನ, ಅಂಡರ್​ವರ್ಲ್ಡ್ ಮಾಫಿಯಾ, ಸೆಲೆಬ್ರಿಟಿಗಳ ಅಫೇರ್ ಬಗ್ಗೆಯೂ ಹೇಳಲಾಗಿದೆ. ಸರಣಿಯ ಕೊನೆಯಲ್ಲಿ ಸಿಗೋ ದೊಡ್ಡ ಟ್ವಿಸ್ಟ್​ನ ಯಾರೂ ಊಹಿಸಲು ಸಾಧ್ಯವಿಲ್ಲ. ಇಡೀ ವೆಬ್ ಸೀರಿಸ್ ದಿಕ್ಕನ್ನು ಆ ಟ್ವಿಸ್ಟ್ ಬದಲಿಸುತ್ತದೆ.

ಇದನ್ನೂ ಓದಿ: ಇವರೇ ಶಾರುಖ್ ಖಾನ್ ಸೊಸೆ? ಈ ಮಾಡೆಲ್ ಆರ್ಯನ್ ಖಾನ್ ಮನದರಸಿ

ರಾಘವ್ ಜುರೇಲ್, ಸಾನ್ಯಾ, ಲಕ್ಷ್ಯ್​ಗೆ ತೂಕದ ಪಾತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಸೆಲೆಬ್ರಿಟಿಗಳ ದಂಡೇ ಬಂದು ಹೋಗುತ್ತದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಬಾದ್​​ಶಾ, ರಣವೀರ್ ಸಿಂಗ್ ಮೊದಲಾದ ಸ್ಟಾರ್​ಗಳು ಹೀಗೆ ಬಂದು ಹಾಗೆ ಹೋಗುತ್ತಾರೆ. ಕರಣ್ ಜೋಹರ್ ನಿರ್ಮಾಪಕನಾಗಿಯೇ ಕಾಣಿಸಿಕೊಂಡಿದ್ದರೆ. ಕೆಲವು ಅತಿಥಿ ಪಾತ್ರಗಳು ವೇಸ್ಟ್ ಅನಿಸುತ್ತವೆ.  ಆರ್ಯನ್ ಖಾನ್ ಅವರು ಮೊದಲ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ. ಅವರು ಸ್ಕ್ರಿಪ್ಟ್​ಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವರ ಉತ್ತಮ ಬರವಣಿಗೆ ಎದ್ದು ಕಾಣಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.