ಬಾಲಿವುಡ್ನಲ್ಲಿ ಶಾರುಖ್ ಖಾನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶಾರುಖ್ ಪುತ್ರ ಆರ್ಯನ್ ಖಾನ್ ನಟನೆ ಬದಲಿಗೆ ನಿರ್ದೇಶನದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಅವರು ನಿರ್ದೇಶಕನ ಚೇರ್ನಲ್ಲಿ ಕುಳಿತಿದ್ದಾರೆ. ಆದರೆ ನೋಡಲು ಅಪ್ಪನ ರೀತಿಯೇ ಹೀರೋ ಲುಕ್ ಹೊಂದಿರುವ ಆರ್ಯನ್ ಖಾನ್ನನ್ನು ಹೀರೋ ಆಗಿ ಲಾಂಚ್ ಮಾಡಬೇಕು ಎಂದು ಅನೇಕ ನಿರ್ಮಾಪಕರು ಕಾಯುತ್ತಿದ್ದಾರೆ.
ಶಾರುಖ್ ಖಾನ್ ಮಗನನ್ನು ಲಾಂಚ್ ಮಾಡುವುದು ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ. ಅದು ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು. ಹಾಗಾಗಿ ಅಂಥ ದೊಡ್ಡ ಅವಕಾಶ ಯಾರಿಗೆ ಸಿಗಲಿದೆ ಎಂಬ ಕೌತುಕ ಮೂಡಿದೆ. ವರದಿಗಳ ಪ್ರಕಾರ, ಬಾಲಿವುಡ್ ಘಟಾನುಘಟಿ ನಿರ್ಮಾಪಕರು ಎನಿಸಿಕೊಂಡ ಕರಣ್ ಜೋಹರ್, ಆದಿತ್ಯ ಚೋಪ್ರಾ, ಫರ್ಹಾ ಖಾನ್, ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮುಂತಾದವರು ಈಗಾಗಲೇ ಶಾರುಖ್ ಖಾನ್ ಬಳಿ ಈ ಬಗ್ಗೆ ಮಾತನಾಡಿದ್ದಾರಂತೆ.
ಇದನ್ನೂ ಓದಿ: ವಿದೇಶಿ ಬಂಗಾರದ ನಾಣ್ಯದ ಮೇಲೆ ಶಾರುಖ್ ಖಾನ್ ಹೆಸರು, ಚಿತ್ರ: ಇದು ವಿಶೇಷ ಗೌರವ
‘ನಿಮ್ಮ ಮಗ ಆರ್ಯನ್ ಖಾನ್ನನ್ನು ನಾವು ಹೀರೋ ಆಗಿ ಲಾಂಚ್ ಮಾಡುತ್ತೇವೆ’ ಎಂದು ದೊಡ್ಡ ದೊಡ್ಡ ನಿರ್ಮಾಪಕರು ಶಾರುಖ್ ಖಾನ್ ಬಳಿ ಬಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್ ಖಾನ್ ಅವರು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಯಾಕೆಂದರೆ, ಮಗ ‘ಸ್ಟಾರ್ಡಮ್’ ವೆಬ್ಸರಣಿಯ ನಿರ್ದೇಶನದ ಕೆಲಸವನ್ನು ಮೊದಲು ಮುಗಿಸಲಿ ಎಂಬುದು ಅವರ ಉದ್ದೇಶ.
ಇದನ್ನೂ ಓದಿ: ಶಾರುಖ್, ಸಲ್ಮಾನ್, ಆಮಿರ್ ಜೊತೆ ಯಾಕೆ ನಟಿಸಿಲ್ಲ? ಅಸಲಿ ಕಾರಣ ತಿಳಿಸಿದ ಶ್ರದ್ಧಾ ಕಪೂರ್
ಆರ್ಯನ್ ಖಾನ್ ನಿರ್ದೇಶನ ಮಾಡುತ್ತಿರುವ ವೆಬ್ ಸಿರೀಸ್ ಎಂಬ ಕಾರಣದಿಂದ ‘ಸ್ಟಾರ್ಡಮ್’ ಬಗ್ಗೆ ಸಖತ್ ನಿರೀಕ್ಷೆ ಮೂಡಿದೆ. 2025ರಲ್ಲಿ ಇದು ರಿಲೀಸ್ ಆಗಲಿದೆ. ಇನ್ನು, ಶಾರುಖ್ ಖಾನ್ ಅವರು ‘ಕಿಂಗ್’ ಸಿನಿಮಾದ ಶೂಟಿಂಗ್ ಆರಂಭಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ಸುಜಯ್ ಘೋಷ್ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಸುಹಾನಾ ಖಾನ್ ಕೂಡ ಅಭಿನಯಿಸುತ್ತಾರೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.