AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್-ಅನುಷ್ಕಾ ಭಾರತ ತೊರೆಯಲು ಕಾರಣ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಪತಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಲು ಕಾರಣ ಬಹಿರಂಗವಾಗಿದೆ. ಸದಾ ಸಾರ್ವಜನಿಕರ ಗಮನ ಮತ್ತು ಪ್ರಚಾರದಿಂದ ದೂರವಿದ್ದು, ತಮ್ಮ ಮಕ್ಕಳನ್ನು ಸಾಮಾನ್ಯ ವಾತಾವರಣದಲ್ಲಿ ಬೆಳೆಸುವ ಉದ್ದೇಶದಿಂದ ಈ ಜೋಡಿ ಲಂಡನ್‌ಗೆ ಶಿಫ್ಟ್ ಆಗಿದೆ ಎಂದು ಡಾ. ಶ್ರೀರಾಮ್ ನೇನೆ ತಿಳಿಸಿದ್ದಾರೆ.

ವಿರಾಟ್-ಅನುಷ್ಕಾ ಭಾರತ ತೊರೆಯಲು ಕಾರಣ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಪತಿ
ವಿರಾಟ್-ಅನುಷ್ಕಾ ಭಾರತ ತೊರೆಯಲು ಕಾರಣ ಬಿಚ್ಚಿಟ್ಟ ಮಾಧರಿ ದೀಕ್ಷಿತ್ ಪತಿImage Credit source: Virat And madhuri Dixit Instagram
ರಾಜೇಶ್ ದುಗ್ಗುಮನೆ
|

Updated on: Sep 02, 2026 | 2:52 PM

Share

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ. ಸದಾ ಕ್ಯಾಮೆರಾ ಕಣ್ಣುಗಳ ನಡುವೆ ಬದುಕುವ ಬದಲು ಶಾಂತಿಯುತ ಜೀವನ ನಡೆಸಲು ಈ ದಂಪತಿ ಬಯಸಿದ್ದಾರೆ. ತಮ್ಮ ಮಕ್ಕಳನ್ನು ಸಾಮಾನ್ಯ ವಾತಾವರಣದಲ್ಲಿ ಬೆಳೆಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೇನೆ ಬಹಿರಂಗಪಡಿಸಿದ್ದಾರೆ.

ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಅವರೊಂದಿಗಿನ ಸಂವಾದದಲ್ಲಿ ಡಾ. ಶ್ರೀರಾಮ್ ಈ ಬಗ್ಗೆ ಮಾತನಾಡಿದ್ದಾರೆ. ‘ವಿರಾಟ್ ಕೊಹ್ಲಿ ಅತ್ಯಂತ ಸರಳ ಹಾಗೂ ಉತ್ತಮ ವ್ಯಕ್ತಿ. ಭಾರತದಲ್ಲಿ ಎಲ್ಲೇ ಹೋದರೂ ಅಭಿಮಾನಿಗಳ ಗಮನ ಹಾಗೂ ಸೆಲ್ಫಿ ವಿನಂತಿಗಳು ಹೆಚ್ಚಿರುತ್ತವೆ. ಪ್ರತಿಯೊಂದು ಕ್ಷಣವೂ ಸಾರ್ವಜನಿಕವಾಗಿ ಗಮನ ಸೆಳೆಯುವುದರಿಂದ ಸ್ವತಂತ್ರವಾಗಿ ಜೀವಿಸಲು ಕಷ್ಟವಾಗುತ್ತದೆ. ಈ ನಿರಂತರ ಒತ್ತಡದಿಂದಾಗಿ ಅನುಷ್ಕಾ ಮತ್ತು ವಿರಾಟ್ ಲಂಡನ್‌ಗೆ ತೆರಳಲು ನಿರ್ಧರಿಸಿದರು’ ಎಂದು ಮಾಧುರಿ ಹೇಳಿದ್ದಾರೆ.

ಜನಪ್ರಿಯತೆಯ ನಡುವೆ ಬದುಕೋದು ದೊಡ್ಡ ಸವಾಲು ಎಂದು ಡಾ. ನೇನೆ ಅವರು ಹೇಳಿದ್ದಾರೆ. ಪತ್ನಿ ಮಾಧುರಿ ದೀಕ್ಷಿತ್ ಅವರ ಜನಪ್ರಿಯತೆಯಿಂದ ಎದುರಾಗುವ ಸವಾಲುಗಳನ್ನು ನೆನಪಿಸಿಕೊಂಡಿದ್ದಾರೆ. ‘ಅಮೆರಿಕದಿಂದ ಭಾರತಕ್ಕೆ ಬಂದಾಗ ನನಗಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡೆ. ಊಟ ಮಾಡಲು ಎಲ್ಲಾದರೂ ಹೊರ ಹೋದಾಗ ಜನರು ತೋರುವ ಪ್ರೀತಿ ಕೆಲವೊಮ್ಮೆ ಕಿರಿಕಿರಿಯನ್ನು ಉಂಟುಮಾಡಬಹುದು. ಹೀಗಾಗಿ ವಿರಾಟ್ ಮತ್ತು ಅನುಷ್ಕಾ ತಮ್ಮ ಮಕ್ಕಳಾದ ವಮಿಕಾ ಮತ್ತು ಅಕಾಯ್ ಅವರನ್ನು ಸಾಮಾನ್ಯರಂತೆ ಬೆಳೆಸಲು ನಿರ್ಧರಿಸಿದ್ದಾರೆ’ ಎಂದಿದ್ದಾರೆ ಶ್ರೀರಾಮ್.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು. 2021ರಲ್ಲಿ ಮಗಳು ವಾಮಿಕಾ ಹಾಗೂ 2024ರಲ್ಲಿ ಮಗ ಅಕಾಯ್ ಜನಿಸಿದರು. ಪ್ರಸ್ತುತ ಇಡೀ ಕುಟುಂಬ ಲಂಡನ್‌ನಲ್ಲಿ ನೆಲೆಸಿದ್ದು, ಅಲ್ಲಿ ಅವರ ಹಲವು ಫೋಟೋಗಳು ವೈರಲ್ ಆಗಿವೆ. ಅನುಷ್ಕಾ ಶರ್ಮಾ 2018ರ ‘ಜೀರೋ’ ಸಿನಿಮಾದ ನಂತರ ನಟನೆಯಿಂದ ದೂರ ಉಳಿದಿದ್ದಾರೆ. ಅವರ ‘ಚಕ್ದಾ ಎಕ್ಸ್‌ಪ್ರೆಸ್’ ಚಿತ್ರ ಶೂಟಿಂಗ್ ಮುಗಿದಿದ್ದರೂ ರಿಲೀಸ್ ಆಗಿಲ್ಲ.

ಇದನ್ನೂ ಓದಿ: ಹೊಸ ಶೋ ಮೂಲಕ ಬರ್ತಿದ್ದಾರೆ ರೋಹಿತ್ ಶರ್ಮಾ, ಅಜಯ್ ದೇವಗನ್, ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೇನೆ 1999ರಲ್ಲಿ ವಿವಾಹವಾದದರು. ಅವರು ಡೆನ್ವರ್‌ನಲ್ಲಿ ಹಲವು ವರ್ಷ ನೆಲೆಸಿ 2011ರಲ್ಲಿ ಭಾರತಕ್ಕೆ ಮರಳಿದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us