AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಜ್ ಕಿ ರಾತ್ ಹಾಡು ನೋಡಿದ್ರೆ ಮಾತ್ರ ಆ ಮಕ್ಕಳು ಊಟ ಮಾಡ್ತಾರೆ’; ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಅವರ ‘ಆಜ್ ಕಿ ರಾತ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಾಡು 'ಸ್ತ್ರೀ 2' ಚಿತ್ರದಲ್ಲಿದೆ. ಆದರೆ ಆಶ್ಚರ್ಯಕರವಾಗಿ ಚಿಕ್ಕ ಮಕ್ಕಳು ಕೂಡ ಈ ಹಾಡನ್ನು ಇಷ್ಟಪಟ್ಟಿದ್ದಾರೆ ಎಂದು ತಮನ್ನಾ ಹೇಳಿದ್ದಾರೆ. ಮಕ್ಕಳು ಈ ಹಾಡನ್ನು ಕೇಳಿ ಊಟ ಮಾಡುತ್ತಾರೆ ಎಂದು ಅನೇಕ ತಾಯಂದಿರು ಹೇಳಿದ್ದಾರಂತೆ.

‘ಆಜ್ ಕಿ ರಾತ್ ಹಾಡು ನೋಡಿದ್ರೆ ಮಾತ್ರ ಆ ಮಕ್ಕಳು ಊಟ ಮಾಡ್ತಾರೆ’; ತಮನ್ನಾ ಭಾಟಿಯಾ
ತಮನ್ನಾ
ರಾಜೇಶ್ ದುಗ್ಗುಮನೆ
|

Updated on: Aug 04, 2025 | 2:50 PM

Share

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ ‘ಆಜ್ ಕಿ ರಾತ್..’ ಹಾಡು ಸಖತ್ ವೈರಲ್ ಆಗಿತ್ತು. ‘ಸ್ತ್ರೀ 2’ ಚಿತ್ರದ ಈ ಹಾಡು ಪಡ್ಡೆಗಳ ಕಣ್ಣು ಕುಕ್ಕಿತ್ತು. ಈ ಸಿನಿಮಾ ಗೆಲ್ಲುವಲ್ಲಿ ಈ ಚಿತ್ರದ ಪಾಲೂ ಕೂಡ ಇತ್ತು. ಈ ಹಾಡನ್ನು ಯವ ಜನತೆ ಇಷ್ಟಪಟ್ಟಿದ್ದು ಗೊತ್ತೇ ಇದೆ. ಆದರೆ, ಈ ಚಿತ್ರವನ್ನು ಸಣ್ಣ ಮಕ್ಕಳು ಕೂಡ ಇಷ್ಟಪಟ್ಟಿದ್ದಾರೆ ಎಂಬ ವಿಷಯ ಗೊತ್ತೇ? ಸ್ವತಃ ನಟಿ ತಮನ್ನಾ ಭಾಟಿಯಾ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ.

ಲಲ್ಲನ್​ಟಾಪ್ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಮನ್ನಾ ಮಾತನಾಡಿದರು. ಪಾತ್ರಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ತಮನ್ನಾಗೆ ಕೇಳಲಾಯಿತು. ಆಗ ಅವರು ಪಾತ್ರ ಅಥವಾ ಹಾಡು ಕೇವಲ ಮನರಂಜನೆ ನೀಡೋದು ಮಾತ್ರವಲ್ಲ, ಜನರ ಮೇಲೆ ಪ್ರಭಾವ ಬೀರಬೇಕು ಎಂದು ಹೇಳಿದರು. ಈ ವೇಳೆ ‘ಆಜ್ ಕಿ ರಾತ್’ ಹಾಡಿನ ಒಂದು ವೈಶಿಷ್ಟ್ಯದ ಬಗ್ಗೆ ಹೇಳಿದರು.

‘ನನ್ನ ಮಕ್ಕಳು ಆಜ್ ಕಿ ರಾತ್ ಹಾಡು ಕೇಳಿದ ಬಳಿಕವೇ ಊಟ ಮಾಡುತ್ತಾರೆ ಎಂದು ನನಗೆ ಅನೇಕ ತಾಯಂದಿರು ಕರೆ ಮಾಡಿ ಹೇಳಿದ್ದಾರೆ’ ಎಂದು ತಮನ್ನಾ ವಿವರಿಸಿದರು. ಬಾಲ್ಯದಲ್ಲಿ ನೋಡುವಂತಹ ಹಾಡು ಇದಲ್ಲ ಎಂಬ ಚರ್ಚೆಯೂ ಹುಟ್ಟುಕೊಂಡಿತು. ಇದಕ್ಕೆ ತಮನ್ನಾ ಉತ್ತರಿಸಿದ್ದಾರೆ.

ಇದನ್ನೂ ಓದಿ
Image
ಸಿನಿಮಾ ಗೆಲ್ಲದಿದ್ದರೂ 500 ಕೋಟಿ ರೂ. ಒಡೆಯ ಅರ್ಬಾಜ್ ಖಾನ್
Image
ಲಾಭದಲ್ಲೇ ಇದೆ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ?
Image
ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

‘ಮಕ್ಕಳು ಊಟ ಮಾಡುತ್ತಿಲ್ಲ ಎಂಬುದಷ್ಟೇ ತಾಯಂದಿರ ಚಿಂತೆ ಆಗಿರುತ್ತದೆ. ಚಿಕ್ಕ ಮಕ್ಕಳಿಗೆ ಆ ಹಾಡಿನ ಅರ್ಥ ಗೊತ್ತಾಗಲು ಹೇಗೆ ಸಾಧ್ಯ? ಒಂದು ಮ್ಯೂಸಿಕ್ ಇದೆ. ಅದು ಇಷ್ಟ ಆಗುತ್ತದೆ. ನಾವು ಸಿನಿಮಾ ಮರೆಯುತ್ತೇವೆ. ಆದರೆ, ಹಾಡುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಇದು ಸತ್ಯ’ ಎಂದಿದ್ದಾರೆ ತಮನ್ನಾ.

ಇದನ್ನೂ ಓದಿ: ಬ್ರೇಕಪ್ ಅಪ್ ಬಳಿಕ ಗೊಂದಲದಲ್ಲಿದ್ದಾರಂತೆ ನಟಿ ತಮನ್ನಾ ಭಾಟಿಯಾ

‘ಆಜ್ ಕಿ ರಾತ್’ ಎಂಬುದು ‘ಸ್ತ್ರೀ 2’ ಚಿತ್ರದ ಬೋಲ್ಡ್ ಸಾಂಗ್. ಈ ಸಿನಿಮಾ ಹಾಡಿಗೆ ತಮನ್ನಾ ಅವರು ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದರು. ಅಮರ್ ಕೌಶಿಕ್ ಅವರು ‘ಸ್ತ್ರೀ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಪಂಕಜ್ ತ್ರಿಪಾಟಿ, ಅಭಿಷೇಕ್ ಬ್ಯಾನರ್ಜಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ 900 ಕೊಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ