AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gehana Vasisth: ಪ್ರಿಯಕರ ಫೈಜನ್​ ಅನ್ಸಾರಿ ಜತೆ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಟಿ

Gehana Vasisth Marriage: ಫೈಜನ್​ ಅನ್ಸಾರಿ ಮತ್ತು ಗೆಹನಾ ವಸಿಷ್ಠ್​ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಗೆಹನಾ ಈಗ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು, ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ.

Gehana Vasisth: ಪ್ರಿಯಕರ ಫೈಜನ್​ ಅನ್ಸಾರಿ ಜತೆ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಟಿ
ಗೆಹನಾ ವಸಿಷ್ಠ್​, ಫೈಜನ್​ ಅನ್ಸಾರಿ
ಮದನ್​ ಕುಮಾರ್​
|

Updated on: Jun 11, 2023 | 11:23 AM

Share

ಹಲವು ಕಾರಣಗಳಿಂದ ನಟಿ ಗೆಹನಾ ವಸಿಷ್ಠ್​ (Gehana Vasisth) ಅವರು ಸುದ್ದಿ ಆಗಿದ್ದರು. ಈಗ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಯಾಕೆಂದರೆ ಅವರದ್ದು ಅಂತರ್​ಧರ್ಮೀಯ ವಿವಾಹ. ಹೌದು, ಗೆಹನಾ ವಸಿಷ್ಠ ಅವರು ಪ್ರಿಯಕರ ಫೈಜನ್​ ಅನ್ಸಾರಿ ಜೊತೆ ಮದುವೆ ಆಗಿದ್ದಾರೆ. ಅಲ್ಲದೇ ಅವರು ಇಸ್ಲಾಂ (Islam) ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ವರದಿ ಕೂಡ ಪ್ರಕಟ ಆಗಿದೆ. ಮುಸ್ಲಿಂ ಸಂಪ್ರದಾಯದ ರೀತಿಯಲ್ಲೇ ಮದುವೆ ನಡೆದಿದೆ. ನಿಖಾ ಸಮಾರಂಭದ ಫೋಟೋಗಳು ಕೂಡ ವೈರಲ್​ ಆಗಿವೆ. ಗೆಹನಾ ವಸಿಷ್ಠ್​ ಮತ್ತು ಫೈಜನ್​ ಅನ್ಸಾರಿಯ ಮದುವೆ (Gehana Vasisth Marriage) ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಫೈಜನ್​ ಅನ್ಸಾರಿ ಮತ್ತು ಗೆಹನಾ ವಸಿಷ್ಠ್​ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯ ಕಾರಣಕ್ಕಾಗಿ ಅವರು ಮತಾಂತರ ಆಗಿಲ್ಲ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ. ಸೋಶಿಯಲ್​ ಮೀಡಿಯಾ ಇನ್​ಫ್ಲೂಯನ್ಸರ್​ ಆಗಿ ಫೈಜನ್​ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ. ಇಬ್ಬರ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಗೆಹನಾ ವಸಿಷ್ಠ್​ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಅವರು ಚತ್ತೀಸ್​ಗಡದವರು. ಮಾಡೆಲ್​ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಐಟಂ ಡ್ಯಾನ್ಸರ್​ ಆಗಿಯೂ ಕಾಣಿಸಿಕೊಂಡು ಖ್ಯಾತಿ ಪಡೆದಿದ್ದಾರೆ. ಹಿಂದಿ ಕಿರುತೆರೆಯಲ್ಲೂ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೇ ವೆಬ್​ ಸಿರೀಸ್​ಗಳಲ್ಲಿ ಕೂಡ ಗೆಹನಾ ವಸಿಷ್ಠ್​ ಅಭಿನಯಿಸಿದ್ದಾರೆ. ಅವರು ನಟಿಸಿದ ‘ಗಂದಿ ಬಾತ್​ 3’ ವೆಬ್​ ಸರಣಿ ಸಾಕಷ್ಟು ಸದ್ದು ಮಾಡಿತು. ಕಿರುತೆರೆಯಲ್ಲಿ ನಿರೂಪಕಿ ಆಗಿಯೂ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಮಾದಕ ಚಿತ್ರ ಹಂಚಿಕೊಂಡು ರಾಜ್ ಕುಂದ್ರಾರನ್ನು ಸ್ವಾಗತಿಸಿದ ಗೆಹನಾ; ರಾಜ್​ಗೆ ಧೈರ್ಯಶಾಲಿ ಎಂದು ಹೊಗಳಿದ ನಟಿ

ಜನಪ್ರಿಯತೆ ಮಾತ್ರವಲ್ಲದೇ ಸಾಕಷ್ಟು ಕುಖ್ಯಾತಿ ಪಡೆಯುವ ಮೂಲಕವೂ ಗೆಹನಾ ವಸಿಷ್ಠ್​ ಸುದ್ದಿ ಆಗಿದ್ದುಂಟು. ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್​ನಲ್ಲಿ ಗೆಹನಾ ಅರೆಸ್ಟ್​ ಆಗಿದ್ದರು. ನಂತರ ಅವರು ಜಾಮೀನು ಪಡೆದು ಹೊರಬಂದರು. ರಾಜ್​ ಕುಂದ್ರಾ ಅರೆಸ್ಟ್​ ಆಗಿದ್ದಾಗ ಅದನ್ನು ಖಂಡಿಸಿ ಗೆಹನಾ ವಸಿಷ್ಠ್​ ಪ್ರತಿಭಟನೆ ಮಾಡಿದ್ದರು. ತಾನು ನಟಿಸಿರುವುದು ಬೋಲ್ಡ್​ ಸಿನಿಮಾಗಳೇ ಹೊರತು ಅಶ್ಲೀಲ ಸಿನಿಮಾಗಳಲ್ಲ ಎಂಬುದು ಗೆಹನಾ ವಾದ. ಅದನ್ನೇ ಸಾಬೀತುಪಡಿಸುವ ಸಲುವಾಗಿ ಅವರು 2021ರಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಜನರಿಗೆ ಸವಾಲು ಹಾಕಿದ್ದರು.

ಇದನ್ನೂ ಓದಿ: ‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ

‘ಬಟ್ಟೆಗಳನ್ನು ಧರಿಸದೇ ನಾನು ಲೈವ್​ ಬಂದಿದ್ದೇನೆ. ಆದರೂ ಕೂಡ ಇದನ್ನು ಅಶ್ಲೀಲ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬಟ್ಟೆ ಧರಿಸಿ ನಟಿಸಿದಾಗ ಅದನ್ನು ಕೆಲವರು ಅಶ್ಲೀಲ ಸಿನಿಮಾ ಎನ್ನುತ್ತಾರೆ. ಇದು ಬೂಟಾಟಿಕೆಯ ಉತ್ತುಂಗ’ ಎಂಬ ಕ್ಯಾಪ್ಷನ್​ನೊಂದಿಗೆ ಗೆಹನಾ ವಸಿಷ್ಠ್​ ಅವರು ಲೈವ್​ ಬಂದಿದ್ದರು. ಮೂರು ನಿಮಿಷಗಳ ಕಾಲ ಜನರ ಜೊತೆ ಅವರು ಮಾತುಕತೆ ನಡೆಸಿದ್ದರು. ‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್ ಬಂದಿದ್ದೇನೆ. ನಿಮ್ಮ ಕಣ್ಣಿಗೆ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ? ಇದನ್ನು ಅಶ್ಲೀಲ ಸಿನಿಮಾ​ ಎನ್ನಲಾಗುತ್ತಾ? ನಾನು ಏನೂ ಧರಿಸಿಲ್ಲ. ಆದರೂ ಇದನ್ನು ಅಶ್ಲೀಲ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬೇರೆ ವಿಡಿಯೋಗಳಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಅದು ತಪ್ಪಲ್ಲವೇ? ಎಲ್ಲರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಬೂಟಾಟಿಕೆಗೂ ಒಂದು ಮಿತಿ ಇರಬೇಕು’ ಎಂದು ಗೆಹನಾ ಲೈವ್​ನಲ್ಲಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.