ಸತತ ಮೂರನೇ ವೀಕೆಂಡ್ನಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಅಬ್ಬರಿಸುತ್ತಿದೆ. ಸುದೀಪ್ತೋ ಸೇನ್ ನಿರ್ದೇಶನ ಮಾಡಿರುವ ಈ ಸಿನಿಮಾ 200 ಕೋಟಿ ರೂಪಾಯಿ ಗಡಿ ಮುಟ್ಟಲು ಕೆಲವೇ ಕೋಟಿ ರೂಪಾಯಿ ಬಾಕಿ ಇದೆ. ಒಟ್ಟು 17 ದಿನಗಳ ಕಾಲ ಈ ಚಿತ್ರ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಪರಿಣಾಮವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ದ್ವಿಶಕತ ಬಾರಿಸಲು ಸಜ್ಜಾಗಿದೆ. 16 ದಿನಗಳ ಭರ್ಜರಿ ಪ್ರದರ್ಶನದ ಬಳಿಕ ಈ ಸಿನಿಮಾದ ಒಟ್ಟು ಕಲೆಕ್ಷನ್ 187.47 ಕೋಟಿ ರೂಪಾಯಿ ಆಗಿದೆ. ನಟಿ ಅದಾ ಶರ್ಮಾ (Adah Sharma) ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರ ಖ್ಯಾತಿ ಕೂಡ ಹೆಚ್ಚಿದೆ. ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ ಬೇಡಿಕೆ ಬಂದಿದೆ.
ಮೊದಲ ವೀಕೆಂಡ್ನಲ್ಲಿ ಅಬ್ಬರಿಸಿದ ಸಿನಿಮಾ 2ನೇ ವೀಕೆಂಡ್ನಲ್ಲೂ ಉತ್ತಮ ಫಾರ್ಮ್ ಕಾಯ್ದುಕೊಂಡರೆ ನಿರ್ಮಾಪಕರಿಗೆ ಖುಷಿ ಆಗುತ್ತದೆ. ‘ದಿ ಕೇರಳ ಸ್ಟೋರಿ’ ಸಿನಿಮಾ 3ನೇ ವೀಕೆಂಡ್ನಲ್ಲೂ ಹವಾ ಮಾಡುತ್ತಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿದೆ. ಇನ್ನೂ ಕೆಲವು ದಿನಗಳ ಕಾಲ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ.
ಇದನ್ನೂ ಓದಿ: ಅಜ್ಜಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಲು ಭಯಬಿದ್ದ ನಟಿ ಅದಾ ಶರ್ಮಾ; ನಂತರ ಏನಾಯ್ತು?
ಕಾರಣಾಂತರಗಳಿಂದ ಈ ಸಿನಿಮಾ ವಿವಾದ ಸೃಷ್ಟಿಸಿತ್ತು. ಕಾಂಟ್ರವರ್ಸಿ ಮಾಡಿಕೊಂಡ ಸಿನಿಮಾದ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುವುದು ಸಹಜ. ‘ದಿ ಕೇರಳ ಸ್ಟೋರಿ’ ವಿಚಾರದಲ್ಲೂ ಹಾಗೆಯೇ ಆಯಿತು. ಟೀಸರ್ ರಿಲೀಸ್ ಆದಾಗಲೇ ಈ ಚಿತ್ರಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಸಿನಿಮಾ ಬಿಡುಗಡೆ ಆದಾಗ ವಿವಾದ ಜೋರಾಯಿತು. ಚಿತ್ರಕ್ಕೆ ಪ್ರಚಾರ ಸಿಗಲು ಇದೆಲ್ಲದೂ ಕಾರಣ ಆಯಿತು.
#TheKeralaStory shows its strength on [third] Sat… Biz jumps yet again [+38.64%]… Should hit double digits today [Sun], taking it closer to ₹ 200 cr… [Week 3] Fri 6.60 cr, Sat 9.15 cr. Total: ₹ 187.47 cr. #India biz. #Boxoffice pic.twitter.com/2Tap8DS1K7
— taran adarsh (@taran_adarsh) May 21, 2023
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.
10ನೇ ದಿನ: 23.75 ಕೋಟಿ ರೂ.
11ನೇ ದಿನ: 10.30 ಕೋಟಿ ರೂ.
12ನೇ ದಿನ: 9.65 ಕೋಟಿ ರೂ.
13ನೇ ದಿನ: 8.03 ಕೋಟಿ ರೂ.
14ನೇ ದಿನ: 7 ಕೋಟಿ ರೂ.
15ನೇ ದಿನ: 6.60 ಕೋಟಿ ರೂ.
16ನೇ ದಿನ: 9.15 ಕೋಟಿ ರೂ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:56 pm, Sun, 21 May 23