ಆಸ್ಪತ್ರೆ ಎದುರು ಕಾಣಿಸಿಕೊಂಡ ದೀಪಿಕಾ-ರಣವೀರ್​; ಪ್ರೆಗ್ನೆಂಟ್​ ಎಂಬ ಸಂತಸವೋ, ಅನಾರೋಗ್ಯದ ಆತಂಕವೋ?

| Updated By: ಮದನ್​ ಕುಮಾರ್​

Updated on: Aug 01, 2021 | 8:51 AM

ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಬಂದು ಹೋದ ಬಳಿಕ ಅವರ ಪ್ರೆಗ್ನೆನ್ಸಿ ಕುರಿತು ಸುದ್ದಿ ಹರಿದಾಡುತ್ತಿದೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಆಸ್ಪತ್ರೆ ಎದುರು ಕಾಣಿಸಿಕೊಂಡ ದೀಪಿಕಾ-ರಣವೀರ್​; ಪ್ರೆಗ್ನೆಂಟ್​ ಎಂಬ ಸಂತಸವೋ, ಅನಾರೋಗ್ಯದ ಆತಂಕವೋ?
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ
Follow us on

ಭಾರತೀಯ ಚಿತ್ರರಂಗದಲ್ಲಿ ರಣವೀರ್​ ಸಿಂಗ್​ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿ, ಬಳಿಕ ಪತಿ-ಪತ್ನಿಯಾದರು. ಇಬ್ಬರೂ ಈಗ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ರಣವೀರ್​ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಏಕಕಾಲಕ್ಕೆ ಸಂತಸ ಮತ್ತು ಆತಂಕ ಶುರುವಾಗಿದೆ. ಈ ಸ್ಟಾರ್​ ದಂಪತಿ ಮುಂಬೈನ ಖಾಸಗಿ ಆಸ್ಪತ್ರೆಯ ಎದುರು ಕಾಣಿಸಿಕೊಂಡಿದ್ದೇ ಅದಕ್ಕೆ ಕಾರಣ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಬಂದು ಹೋಗಿದ್ದಾರೆ. ಆದರೂ ಕೂಡ ಅವರು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೀಗೆ ಏಕಾಏಕಿ ಈ ಜೋಡಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಲ್ಲಿ ಅನುಮಾನ ಮೂಡಲಾರಂಭಿಸಿದೆ. ಎರಡು ಸಾಧ್ಯತೆಗಳನ್ನು ಫ್ಯಾನ್ಸ್​ ಊಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪ್ರೆಗ್ನೆಂಟ್​ ಆಗಿರಬಹುದು ಎಂದು ಒಂದು ವರ್ಗದ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಯಾವುದೋ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ಭೇಟಿ ನೀಡಿರಬಹುದು ಎಂದು ಇನ್ನೂ ಕೆಲವರು ಕಮೆಂಟ್​ ಮಾಡುತ್ತಿದ್ದಾರೆ.

ದೀಪಿಕಾ ಹೀಗೆ ಆಸ್ಪತ್ರೆಗೆ ಬಂದು ಹೋದ ಬಳಿಕ ಅವರ ಪ್ರೆಗ್ನೆನ್ಸಿ ಕುರಿತು ಸುದ್ದಿ ಹರಿದಾಡುತ್ತಿದೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ‘ರಾಮ್​ಲೀಲಾ’, ‘ಬಾಜಿರಾವ್​ ಮಸ್ತಾನಿ’, ‘ಪದ್ಮಾವತ್’ ರೀತಿಯ ಸೂಪರ್​ ಹಿಟ್​ ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್​ ಜೊತೆಯಾಗಿ ನಟಿಸಿದರು. ಇಬ್ಬರ ನಡುವಿನ ಒಡನಾಟ ಪ್ರೀತಿಗೆ ತಿರುಗಿತು. 2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮದುವೆ ಆಗಿ ಎರಡೂವರೆ ವರ್ಷ ಕಳೆದಿದೆ. ಪದೇ ಪದೇ ಜಾರಿ ಆಗುತ್ತಿರುವ ಲಾಕ್​ಡೌನ್​ನಿಂದಾಗಿ ಚಿತ್ರೀಕರಣದಲ್ಲೂ ಏರುಪೇರು ಆಗುತ್ತಿದೆ. ಹಾಗಾಗಿ ಮೊದಲ ಮಗು ಪಡೆಯಲು ಇದು ಸೂಕ್ತ ಸಮಯ ಎಂದು ಈ ದಂಪತಿ ನಿರ್ಧರಿಸಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ ತಯಾರಾಗಿದೆ. ಅದರಲ್ಲಿ ಕಪಿಲ್​ ದೇವ್​ ಪಾತ್ರಕ್ಕೆ ರಣವೀರ್​ ಸಿಂಗ್​ ಬಣ್ಣ ಹಚ್ಚಿದ್ದು, ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿರುವುದು ವಿಶೇಷ. ಲಾಕ್​ಡೌನ್​ ಕಾರಣದಿಂದಾಗಿ ಈ ಸಿನಿಮಾದ ರಿಲೀಸ್​ ವಿಳಂಬ ಆಗುತ್ತಿದೆ.

ಇದನ್ನೂ ಓದಿ:

‘ಅಂದುಕೊಳ್ಳೋದು ಒಂದು, ಆಗೋದೇ ಇನ್ನೊಂದು’; ದೀಪಿಕಾ ಪಡುಕೋಣೆ ಹೊಸ ಪೋಸ್ಟ್​ ನೋಡಿ

ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?