Deepika Padukone: ದೀಪಿಕಾ ಧರಿಸಿರುವ ವಾಚ್ನ ಬೆಲೆಗೆ ಒಂದು 30-40 ಸೈಟು ಖರೀದಿಸಬಹುದು
Deepika Pdukone: ನಟಿ ದೀಪಿಕಾ ಪಡುಕೋಣೆ ಧರಿಸುವ ಕೈಗಡಿಯಾರದ ಬೆಲೆ ಅಬ್ಬಬಾ! ವಾಚ್ನ ಬೆಲೆಗೆ ಒಂದು 30-40 ಸೈಟು ಖರೀದಿಸಬಹುದು.
ಸ್ಟಾರ್ ನಟ-ನಟಿಯರದ್ದು ಬಹು ಐಶಾರಾಮಿ ಜೀವನ ಶೈಲಿ. ಸಾಮಾನ್ಯರಿಗೆ ಸಾಮಾನ್ಯ ಎನಿಸುವ ಸಂಗತಿಗಳಿಗೂ ಭಾರಿ ಮೊತ್ತದ ಹಣವನ್ನು ಖರ್ಚು ಮಾಡುತ್ತಾರೆ. ಅದರಲ್ಲಿಯೂ ಸ್ಟಾರ್ ನಟಿಯರಂತೂ ಪ್ರಪಂಚದ ಅತ್ಯುತ್ತಮ ಬ್ರ್ಯಾಂಡ್ನ ಬಟ್ಟೆ, ಆಭರಣಗಳನ್ನೇ ಹುಡುಕಿ ತೊಟ್ಟು ಮೆರೆಯುತ್ತಾರೆ. ಬಾಲಿವುಡ್ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸಹ ಇದಕ್ಕೆ ಹೊರತಲ್ಲ. ಕೈಗಡಿಯಾರಕ್ಕೆ ಎಷ್ಟು ಖರ್ಚು ಮಾಡಬಹುದು ಹೆಚ್ಚೆಂದರೆ ಐದು ಸಾವಿರ, ಬೇಡ ಐವತ್ತು ಸಾವಿರ ಆದರೆ ದೀಪಿಕಾ ಪಡುಕೋಣೆ (Deepika Padukone) ಧರಿಸಿರುವ ಕೈಕಡಿಯಾರದ ಬೆಲೆಗೆ ಒಂದು 30-40 ಸೈಟು ಖರೀದಿ ಮಾಡಿಬಿಡಬಹುದು.
ದೀಪಿಕಾ ಪಡುಕೋಣೆ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಾಗ ಅವರು ತೊಟ್ಟಿದ್ದ ಹಳದಿ ಬಣ್ಣದ ಉದ್ದನೆಯ ಕುರ್ತಾ ಮಾದರಿಯ ಡ್ರೆಸ್ ಗಮನ ಸೆಳೆದಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿಗೆ ಗಮನ ಸೆಳೆದಿದ್ದು ದೀಪಿಕಾ ಧರಿಸಿದ್ದ ಕೈಗಡಿಯಾರ. ಚಿನ್ನದ ಬಣ್ಣದ ಬೆಲ್ಟ್ ಹೊಂದಿರುವ, ಒಳಗೆ ಬಿಳಿ ಬಣ್ಣದ ಡಯಲ್ ಹೊಂದಿರುವ ಸಾಮಾನ್ಯ ಎಚ್ಎಂಟಿ ವಾಚಿನಂತೆ ಮೇಲ್ನೋಟಕ್ಕೆ ಕಾಣುವ ವಾಚ್ ಅನ್ನು ದೀಪಿಕಾ ಪಡುಕೋಣೆ ಧರಿಸಿದ್ದರು. ಆದರೆ ಅದು ಸಾಮಾನ್ಯ ವಾಚ್ ಅಲ್ಲ ಬದಲಿಗೆ ಕಾರ್ಟಿಯರ್ ಹೆಸರಿನ ಐಶಾರಾಮಿ ಬ್ರ್ಯಾಂಡ್ನ ಬಹುದುಬಾರಿ ವಾಚ್.
ದೀಪಿಕಾ ಪಡುಕೋಣೆ ಧರಿಸಿದ್ದು, ಕಾರ್ಟಿಯರ್ ಬ್ರ್ಯಾಂಡ್ನ ಫ್ಯಾಂಥರ್ ದೆ ಕಾರ್ಟಿಯರ್ ಹೆಸರಿನ ವಾಚು. ಆ ವಾಚಿನ ಬೆಲೆ ಬರೋಬ್ಬರಿ 21.65 ಲಕ್ಷ ರುಪಾಯಿಗಳು. ಈ ಬೆಲೆಗೆ ಟೈರ್ 2 ನಗರದಲ್ಲೊಂದು 30-40 ಸೈಟು ಬರುತ್ತದೆ. ಅಷ್ಟು ದುಬಾರಿ ಬೆಲೆಯ ವಾಚ್ ಅನ್ನು ದೀಪಿಕಾ ಧರಿಸಿದ್ದರು. ಇದೊಂದೆ ಅಲ್ಲ ದೀಪಿಕಾ ಬಳಿ ಐಶಾರಾಮಿ ಬ್ರ್ಯಾಂಡ್ನ ಹಲವು ಕೈಗಡಿಯಾರಗಳಿವೆ. ಅಂದಿನ ತಮ್ಮ ಉಡುಪಿಗೆ ಒಪ್ಪುವಂಥಹಾ ವಾಚ್ ಅನ್ನು ಧರಿಸಿ ಹೊರಬರುತ್ತಾರೆ ಈ ಬೆಡಗಿ.
ದೀಪಿಕಾ ಧರಿಸಿದ್ದ ಕಾರ್ಟಿಯರ್ ಬ್ರ್ಯಾಂಡ್ನ ಫ್ಯಾಂಥರ್ ದೆ ಕಾರ್ಟಿಯರ್ ವಾಚಿನ ವಿಶೇಷತೆ ಏನೆಂದರೆ, 18 ಕ್ಯಾರೆಟ್ ಚಿನ್ನದ ಬೆಲ್ಟ್ ಅನ್ನು ಹೊಂದಿದೆ. ಒಳಗೆ ಬೆಳ್ಳಿಯ ಡಯಲ್ ಅಳವಡಿಸಲಾಗಿದೆ. ಇದರ ಸಂಖ್ಯೆಗಳು ರೋಮನ್ನಲ್ಲಿವೆ, ವಿಶೇಷ ಹೊಳೆಯುವ ಲೋಹದಿಂದ ಮಾಡಲಾದ ಎರಡು ಮುಳ್ಳುಗಳಷ್ಟೆ ಇವೆ. ಅತ್ಯಂತ ಗಟ್ಟಿಯಾದ ವಾಚ್ ಇದಾಗಿದ್ದು ಸ್ಕ್ರಾಚ್ ಪ್ರೂಫ್ ಹಾಗೂ ವಾಟರ್ ಪ್ರೂಫ್ ಆಗಿದೆ. ನೀರಿನ ಒಳಗೆ ನೂರು ಅಡಿ ಆಳದಲ್ಲಿಟ್ಟರೂ ಈ ವಾಚಿನ ಒಳಕ್ಕೆ ಒಂದು ಹನಿ ನೀರು ಸಹ ಪ್ರವೇಶಿಸಲಾರದು.
ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ನ ಟಾಪ್ ನಟಿ. ಶಾರುಖ್ ಖಾನ್ ಜೊತೆ ನಟಿಸಿದ್ದ ಪಠಾಣ್ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಇದೀಗ ಹೃತಿಕ್ ರೋಷನ್ ಜೊತೆಗೆ ಫೈಟರ್ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿಯೂ ದೀಪಿಕಾ ನಟಿಸುತ್ತಿದ್ದಾರೆ. ಶಾರುಖ್ ಖಾನ್ರ ಮತ್ತೊಂದು ಹೊಸ ಸಿನಿಮಾ ಜವಾನ್ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ. ಮತ್ತೊಂದು ಹೊಸ ಸಿನಿಮಾವನ್ನು ನಿರ್ಮಾಣ ಸಹ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ