‘ದೇವರ 2’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್​ಗೆ ರಗಡ್ ಲುಕ್ 

ಜಾನ್ವಿ ಕಪೂರ್ ಅವರ 28ನೇ ಹುಟ್ಟುಹಬ್ಬದ ಪ್ರಯುಕ್ತ, "ದೇವರ" ಚಿತ್ರದ ಎರಡನೇ ಭಾಗದ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ಭಾಗದ ಯಶಸ್ಸಿನ ನಂತರ, ಈ ಪೋಸ್ಟರ್ "ದೇವರ 2" ಚಿತ್ರ ನಿರ್ಮಾಣದಲ್ಲಿರುವುದನ್ನು ದೃಢಪಡಿಸಿದೆ. ಜಾನ್ವಿ ಕಪೂರ್ ಅವರ ಪಾತ್ರಕ್ಕೆ ಈ ಬಾರಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

‘ದೇವರ 2’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್​ಗೆ ರಗಡ್ ಲುಕ್ 
ಜಾನ್ವಿ ಕಪೂರ್
Edited By:

Updated on: Mar 07, 2025 | 11:31 AM

ಕಳೆದ ವರ್ಷ ಯಂಗ್ ಟೈಗರ್ ಎನ್​ಟಿಆರ್ (JR NTR) ನಟಿಸಿದ ದೇವರ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಗೊತ್ತೇ ಇದೆ. ಮ್ಯಾನ್ ಆಫ್ ಮಾಸಸ್ ನಟಿಸಿದ ಈ ಚಿತ್ರವನ್ನು ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಭಾಗ ದಸರಾ ಉಡುಗೊರೆಯಾಗಿ ಬಿಡುಗಡೆಯಾಗಿ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ತಾರಕ್​ಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಟಿಸಿದ್ದಾರೆ. ಈಗ ಅವರ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ‘ದೇವರ 2’ ಸಿನಿಮಾ ಬರಲ್ಲ ಎನ್ನುವವರ ಬಾಯಿ ಮುಚ್ಚಿಸಿದಂತೆ ಆಗಿದೆ.

‘ದೇವರ’ ಚಿತ್ರದ ಮೂಲಕ ಜಾನ್ವಿ ತೆಲುಗು ಪರದೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ, ಅವರು ತೆಲುಗು ಹಳ್ಳಿಯ ವಿಶಿಷ್ಟ ಹುಡುಗಿಯಾಗಿ ಕಾಣಿಸಿಕೊಂಡರು ಮತ್ತು ತಮ್ಮ ಸೌಂದರ್ಯ ಮತ್ತು ನಟನೆಯಿಂದ ಜನರನ್ನು ಆಕರ್ಷಿಸಿದರು. ಸದ್ಯ ‘ದೇವರ’ ಚಿತ್ರದ  ಎರಡನೇ ಭಾಗದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಾರ್ಚ್ 6 ಜಾನ್ವಿ ಕಪೂರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಚಿತ್ರತಂಡವು ‘ದೇವರ’ ಚಿತ್ರದ ಮತ್ತೊಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ
ಅಂದವಾಗಿ ಕಾಣಲು ಜಾನ್ವಿ ಕಪೂರ್ ಈ ಭಾಗಗಳಿಗೆ ಮಾಡಿಸಿಕೊಂಡಿದ್ದಾರೆ ಸರ್ಜರಿ?
ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಂದ ಟಾಕ್ಸಿಕ್ ನಟಿ ಕಿಯಾರಾ?
ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?

blockquote class=”twitter-tweet”>

Wishing our Thangam #JanhviKapoor a very happy birthday ❤️#Devara pic.twitter.com/D7FlHsu6Mq

— Devara (@DevaraMovie) March 6, 2025

ಮಾರ್ಚ್ 6 ರಂದು ಜಾನ್ವಿ ಕಪೂರ್ ಅವರ 28 ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಅಲ್ಲದೆ, ಆರ್‌ಸಿ 16 ಚಿತ್ರದ ಜಾನ್ವಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ‘ದೇವರ’ ತಂಡವು ಜಾನ್ವಿ ಪಾತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಅವರಿಗೆ ಶುಭ ಹಾರೈಸಿದೆ. ಇದರಲ್ಲಿ ಜಾನ್ವಿ ಕಪೂರ್ ಭುಜದ ಮೇಲೆ ಮೀನನ್ನು ಹೊತ್ತುಕೊಂಡು ಬಾಯಿಯಲ್ಲಿ ಚಾಕುವನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ.

ಇದನ್ನೂ ಓದಿ: ಅಂದವಾಗಿ ಕಾಣಲು ಜಾನ್ವಿ ಕಪೂರ್ ಈ ಭಾಗಗಳಿಗೆ ಮಾಡಿಸಿಕೊಂಡಿದ್ದಾರೆ ಸರ್ಜರಿ ?

ಮೊದಲ ಭಾಗದಲ್ಲಿ ಜಾನ್ವಿ ಕಪೂರ್​ಗೆ ಹೆಚ್ಚಿನ ಸ್ಕೋಪ್ ಇರಲಿಲ್ಲ. ಹೀಗಾಗಿ, ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗೋ ಸಾಧ್ಯತೆ ಇದೆ. ಸದ್ಯದ ಪೋಸ್ಟರ್ ‘ದೇವರ ಭಾಗ 2’ನಲ್ಲಿ ಜಾನ್ವಿ ಪಾತ್ರದ ಬಗ್ಗೆ ಹೆಚ್ಚಿನ ಕುತೂಹಲವನ್ನು ಸೃಷ್ಟಿಸಿದೆ. ನಿರ್ದೇಶಕ ಕೊರಟಾಲ ಪ್ರಸ್ತುತ ದೇವರ ಭಾಗ 2 ರ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.