Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದವಾಗಿ ಕಾಣಲು ಜಾನ್ವಿ ಕಪೂರ್ ಈ ಭಾಗಗಳಿಗೆ ಮಾಡಿಸಿಕೊಂಡಿದ್ದಾರೆ ಸರ್ಜರಿ ?

ಜಾನ್ವಿ ಕಪೂರ್ ಅವರ ಮೂಗಿನ ಶಸ್ತ್ರಚಿಕಿತ್ಸೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಸಹೋದರಿ ಖುಷಿ ಕಪೂರ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಜಾನ್ವಿ ಅವರ ಚಲನಚಿತ್ರ ವೃತ್ತಿ ಇನ್ನೂ ಯಶಸ್ಸನ್ನು ಕಾಣದಿದ್ದರೂ, ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಅಂದವಾಗಿ ಕಾಣಲು ಜಾನ್ವಿ ಕಪೂರ್ ಈ ಭಾಗಗಳಿಗೆ ಮಾಡಿಸಿಕೊಂಡಿದ್ದಾರೆ ಸರ್ಜರಿ ?
ಜಾನ್ವಿ ಕಪೂರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 06, 2025 | 8:03 AM

ಸೆಲೆಬ್ರಿಟಿ ಆದ ಬಳಿಕ ಪ್ಲಾಸ್ಟಿಕ್ ಸರ್ಜರಿ, ಚೆನ್ನಾಗಿಲ್ಲದ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳೋದು ಸರ್ವೇ ಸಾಮಾನ್ಯ. ಇದನ್ನು ಕೆಲವರು ಒಪ್ಪಿಕೊಂಡರೆ ಇನ್ನೂ ಕೆಲವರು ಅಲ್ಲಗಳೆಯುತ್ತಾರೆ. ನಟಿ ಜಾನ್ವಿ ಕಪೂರ್ ವಿರುದ್ಧವೂ ಈ ರೀತಿಯ ಆರೋಪಗಳು ಎದುರಾಗಿದ್ದು ಇದೆ. ಜಾನ್ವಿ ಕಪೂರ್ (Jahnvi Kapoor) ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಮೂಗಿನ ಸರ್ಜರಿ ಮಾಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ನಟಿ ಜಾನ್ವಿ ಕಪೂರ್ ಇದನ್ನು ಒಪ್ಪಿಕೊಂಡಿಲ್ಲ.

ಜಾನ್ವಿ ಕಪೂರ್ ಅವರಿಗೆ ಇಂದು (ಮಾರ್ಚ್ 6) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಜಾನ್ವಿ ಕಪೂರ್ ಅವರ ಅಭಿಮಾನಿ ಬಳಗ ನಿಧಾನವಾಗಿ ಹಿರಿದಾಗುತ್ತಿದೆ. ಆದರೆ, ಸಿನಿಮಾ ಮಾತ್ರ ಯಶಸ್ಸು ಕಾಣುತ್ತಿಲ್ಲ. ಶ್ರೀದೇವಿ ಮಗಳಾದರೂ ಜಾನ್ವಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರ ಮೂಗಿನ ಸರ್ಜರಿ ವಿಚಾರ ಗಮನ ಸೆಳೆಯುತ್ತಿದೆ.

ಜಾನ್ವಿ ಕಪೂರ್ ಅವರ ಮೂಗು ಮೊದಲು ಈ ರೀತಿ ಇರಲಿಲ್ಲ. ಅವರ ಮೂಗು ತುಂಬಾನೇ ದೊಡ್ಡದಾಗಿತ್ತು. ಇದರಿಂದ ಅವರು ಇಷ್ಟು ಅಂದವಾಗಿ ಕಾಣುತ್ತಾ ಇರಲಿಲ್ಲ. ಆದರೆ, ಜಾನ್ವಿ ಕಪೂರ್ ಅವರ ಅಂದವನ್ನು ಹೆಚ್ಚಿಸುವಂತೆ ಮಾಡಿದ್ದು ಅವರ ಮೂಗಿಗೆ ಮಾಡಲಾದ ಸರ್ಜರಿ ಎನ್ನಲಾಗಿದೆ.

ಇದನ್ನೂ ಓದಿ
Image
ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಂದ ಟಾಕ್ಸಿಕ್ ನಟಿ ಕಿಯಾರಾ?
Image
ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್
Image
ತೆಲುಗಿನಲ್ಲೂ ಧೂಳೆಬ್ಬಿಸಲಿದೆ ‘ಛಾವ’ ಸಿನಿಮಾ; ರಶ್ಮಿಕಾ ಅಭಿಮಾನಿಗಳಿಗೆ ಖುಷಿ
Image
ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?

ಇನ್ನು ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಅವರು ಈ ವಿಚಾರದ ಬಗ್ಗೆ ಓಪನ್ ಆಗಿ ಮಾತನಾಡಿದ್ದರು. ಜಾನ್ವಿ ಕಪೂರ್ ಸರ್ಜರಿ ವಿಚಾರವನ್ನು ಒಪ್ಪಿಕೊಂಡಿದ್ದರು. ಆ ಬಗ್ಗೆ ಹೇಳಿಕೊಳ್ಳಲು ನನಗೇನು ಅಭ್ಯಂತರ ಇಲ್ಲ ಎಂದು ಹೇಳಿದ್ದರು. ಕೆಲವರು ಟ್ರೋಲ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಈ ಬಗ್ಗೆ ಭಯ ವ್ಯಕ್ತಪಡಿಸುತ್ತಾರೆ. ಆದರೆ, ಖುಷಿ ಕಪೂರ್​ಗೆ ಈ ಬಗ್ಗೆ ಭಯ ಇಲ್ಲ.

ಇದನ್ನೂ ಓದಿ: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್

ಜಾನ್ವಿ ಕಪೂರ್ ಅವರು ‘ಧಡಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರೂ ಗೆಲುವು ಸಿಗಲೇ ಇಲ್ಲ. ಅವರು ಈಗ ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ. ದೇವರ ಚಿತ್ರಕ್ಕೆ ಅವರು ನಾಯಕಿ ಆಗಿದ್ದರು. ರಾಮ್ ಚರಣ್ ನಟನೆಯ ‘ಆರ್​ಸಿ 16’ಗೆ ಜಾನ್ವಿ ಹೀರೋಯಿನ್. ಅಲ್ಲು ಅರ್ಜುನ್ ಹಾಗೂ ಅಟ್ಲಿ ಚಿತ್ರಕ್ಕೂ ಅವರು ಹೀರೋಯಿನ್ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.