ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ಆಗಿದೆ; ಹೇಮಾ ಮಾಲಿನಿ ಆರೋಪ
ನಟ ಧರ್ಮೇಂದ್ರ ನಿಧನದ ಹಿನ್ನೆಲೆಯಲ್ಲಿ, ಹೇಮಾ ಮಾಲಿನಿ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತು ಮನೆಗೆ ಕರೆತಂದಾಗಲೂ ಮಾಧ್ಯಮಗಳು ಕುಟುಂಬವನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದವು. ಸನ್ನಿ ಡಿಯೋಲ್ ಕೂಡ ಇದರಿಂದ ಆಕ್ರೋಶಗೊಂಡಿದ್ದರು. ಇದು ಕುಟುಂಬಕ್ಕೆ ಅಪಾರ ದುಃಖ ಮತ್ತು ಭಾವನಾತ್ಮಕ ನೋವು ತಂದಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ನವೆಂಬರ್ 24 ರಂದು ನಿಧನರಾದರು. ಅದಕ್ಕೂ ಮೊದಲು ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಸ್ಪತ್ರೆಯ ಹೊರಗೆ ಪಾಪರಾಜಿಗಳು ನಿರಂತರವಾಗಿ ಇದ್ದ ಕಾರಣ, ಡಿಯೋಲ್ ಕುಟುಂಬವು ಅಂತಿಮವಾಗಿ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ನಿರ್ಧರಿಸಿತು. ಧರ್ಮೇಂದ್ರ ಅವರನ್ನು ಮನೆಗೆ ಕರೆತಂದ ನಂತರವೂ, ಪಾಪರಾಜಿಗಳು ಮನೆಯ ಹೊರಗೆ ನಿಲ್ಲುತ್ತಿದ್ದರು. ಇದರಿಂದ ಕಿರುಕುಳ ಉಂಟಾಗಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ಆಸ್ಪತ್ರೆ ಹೊರಗೆ ಹಾಗೂ ಡಿಯೋಲ್ ಕುಟುಂಬದ ಹಿಂದೆ ಪಾಪರಾಜಿಗಳು ಇದ್ದರು. ಇದು ಸನ್ನಿ ಡಿಯೋಲ್ಗೆ ಕೋಪ ತರಿಸಿತ್ತು. ಅವರು ಕೂಗಾಡಿದ್ದರು. ಈ ಬಗ್ಗೆ ಸನ್ನಿ ಡಿಯೋಲ್ ಮಲತಾಯಿ ಹೇಮಾ ಮಾಲಿನಿ ಮಾತನಾಡಿದರು.
‘ಸನ್ನಿ ತುಂಬಾ ಅಸಮಾಧಾನಗೊಂಡಿದ್ದರು ಮತ್ತು ಅವರು ತುಂಬಾ ಕೋಪಗೊಂಡಿದ್ದರು. ಏಕೆಂದರೆ ಆ ಸಮಯದಲ್ಲಿ ನಾವೆಲ್ಲರೂ ತುಂಬಾ ಭಾವನಾತ್ಮಕ ಹಂತದ ಮೂಲಕ ಸಾಗುತ್ತಿದ್ದೆವು. ಆ ಸ್ಥಿತಿಯಲ್ಲಿಯೂ ಸಹ, ಮಾಧ್ಯಮಗಳು ಮತ್ತು ಪಾಪರಾಜಿಗಳು ನಮ್ಮನ್ನು ಮತ್ತು ನಮ್ಮ ಕಾರುಗಳನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದರು. ಆ ಸಮಯದಲ್ಲಿ ನಮಗೆ ಸಾಕಷ್ಟು ಕಿರುಕುಳ ನೀಡಲಾಯಿತು’ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ
‘ಧರ್ಮೇಂದ್ರ ಅವರ ನಿಧನದಿಂದ ಎಲ್ಲರೂ ದುಃಖಿತರಾಗಿದ್ದಾರೆ. ಏಕೆಂದರೆ ನಾವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಕಷ್ಟಪಡುತ್ತಿದ್ದೆವು. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೆವು. ನಾವೆಲ್ಲರೂ ಅಲ್ಲಿದ್ದೆವು. ಧರ್ಮೇಂದ್ರ ಅವರನ್ನು ಈ ಮೊದಲು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಿ ಬಾರಿ ಅವರು ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದರು. ಅವರು ಈ ಬಾರಿಯೂ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಆಶಿಸಿದ್ದೆವು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



