Lala Amarnath: ಖ್ಯಾತ ಕ್ರಿಕೆಟರ್​ ಬಯೋಪಿಕ್​ ಮಾಡಲು ಮುಂದಾದ ನಿರ್ದೇಶಕ ರಾಜ್​ಕುಮಾರ್​ ಹಿರಾನಿ

|

Updated on: Feb 09, 2023 | 5:36 PM

Rajkumar Hirani | Lala Amarnath Biopic: ಲಾಲಾ​ ಅಮರನಾಥ್​ ಬದುಕಿನ ಕಥೆಯನ್ನು ಬೇರೆಯದೇ ಫ್ಲೇವರ್​ನಲ್ಲಿ ತೆರೆಗೆ ತರಲು ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಈ ಬಗ್ಗೆ ವರದಿ ಆಗಿದೆ.

Lala Amarnath: ಖ್ಯಾತ ಕ್ರಿಕೆಟರ್​ ಬಯೋಪಿಕ್​ ಮಾಡಲು ಮುಂದಾದ ನಿರ್ದೇಶಕ ರಾಜ್​ಕುಮಾರ್​ ಹಿರಾನಿ
ರಾಜ್ಕುಮಾರ್ ಹಿರಾನಿ
Follow us on

ಬಾಲಿವುಡ್​ನಲ್ಲಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಅವರ ಕೆಲಸದ ಬಗ್ಗೆ ಸಿನಿಪ್ರಿಯರಿಗೆ ತುಂಬ ಭರವಸೆ ಇದೆ. ‘3 ಈಡಿಯಟ್ಸ್​’, ‘ಸಂಜು’, ‘ಮುನ್ನಾಭಾಯ್​ ಎಂಬಿಬಿಎಸ್​’, ‘ಲಗೇರಹೋ ಮುನ್ನಾಭಾಯ್​’, ‘ಪಿಕೆ’ ಸಿನಿಮಾ ಮಾಡಿ ರಾಜ್​ಕುಮಾರ್​ ಹಿರಾನಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಶಾರುಖ್​ ಖಾನ್​ ಜೊತೆ ‘ಡಂಕಿ’ (Dunki Movie) ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಳಿಕ ಅವರು ಯಾವ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಬಗ್ಗೆ ಸುದ್ದಿ ಕೇಳಿಬಂದಿದೆ. ಮಾಜಿ ಕ್ರಿಕೆಟರ್​ ಲಾಲಾ​ ಅಮರನಾಥ್​ (Lala Amarnath) ಜೀವನದ ಕುರಿತು ರಾಜ್​ಕುಮಾರ್​ ಹಿರಾನಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಯೋಪಿಕ್​ ತುಂಬ ಡಿಫರೆಂಟ್​ ಆಗಿ ಮೂಡಿಬರಲಿದೆ.

ಈವರೆಗಿನ ತಮ್ಮ ವೃತ್ತಿಜೀವನದಲ್ಲಿ ರಾಜ್​ಕುಮಾರ್​ ಹಿರಾನಿ ಅವರು ಮಾಡಿದ ಏಕೈಕ ಬಯೋಪಿಕ್​ ಎಂದರೆ ‘ಸಂಜು’. ಖ್ಯಾತ ನಟ ಸಂಜಯ್​ ದತ್​ ಅವರ ಜೀವನಾಧಾರಿತ ಆ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ಅವರು ಲಾಲಾ​ ಅಮರ​ನಾಥ್​ ಕುರಿತು ಸಿನಿಮಾ ಮಾಡುವ ಉತ್ಸಾಹದಲ್ಲಿ ಇದ್ದಾರೆ. ಹಾಗಂತ ಅವರ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕೆ ಇದು ಕೇವಲ ಅಂತೆ-ಕಂತೆ ಹಂತದಲ್ಲಿದೆ.

ಇದನ್ನೂ ಓದಿ: ತೆರೆ ಮೇಲೆ ಶೋಯೆಬ್ ಅಖ್ತರ್ ಜೀವನ ಚರಿತ್ರೆ; ನನ್ನ ಬಯೋಪಿಕ್​ಗೆ ಸಲ್ಮಾನ್ ಖಾನ್ ಸೂಕ್ತ ಎಂದ ಪಾಕ್ ಬೌಲರ್

ಇದನ್ನೂ ಓದಿ
ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು
ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ
ದ್ರಾವಿಡ್​ ಬಯೋಪಿಕ್​ನಲ್ಲಿ ಸುದೀಪ್ ಮುಖ್ಯಭೂಮಿಕೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್​ ಖಾನ್
ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ

ಭಾರತಕ್ಕಾಗಿ 24 ಟೆಸ್ಟ್​ ಪಂದ್ಯಗಳನ್ನು ಆಡಿದ ಕೀರ್ತಿ ಲಾಲಾ​ ಅಮರ​ನಾಥ್​ ಅವರಿಗೆ ಸಲ್ಲುತ್ತದೆ. ಮಾಮೂಲಿ ಕ್ರೀಡಾಧಾರಿತ ಸಿನಿಮಾ ರೀತಿಯಲ್ಲಿ ಅವರ ಬದುಕಿನ ಕಥೆಯನ್ನು ಕಟ್ಟಿಕೊಡುವ ಬದಲು ಬೇರೆಯದೇ ಫ್ಲೇವರ್​ನಲ್ಲಿ ಈ ಸಿನಿಮಾವನ್ನು ನಿರ್ದೇಶಿಸಲು ರಾಜ್​ಕುಮಾರ್​ ಹಿರಾನಿ ಪ್ಲ್ಯಾನ್​ ಮಾಡಿಕೊಂಡಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ.

ಇದನ್ನೂ ಓದಿ: Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​

ಲಾಲಾ​ ಅಮರನಾಥ್​ ಬದುಕಿನ ವಿವರಗಳಿಂದ ರಾಜ್​ಕುಮಾರ್​ ಹಿರಾನಿ ಪ್ರೇರೇಪಿತರಾಗಿದ್ದಾರೆ. ಹಾಗಾಗಿ ಈ ಸ್ಕ್ರಿಪ್ಟ್​ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಒಂದು ಮೂಲದ ಪ್ರಕಾರ, ಇದೇ ಕಥೆಯನ್ನು ಅವರು ಶಾರುಖ್​ ಖಾನ್​ಗೆ ಹೇಳಿದ್ದರು. ಆದರೆ ಶಾರುಖ್​ ಖಾನ್​ ಒಪ್ಪಿಕೊಂಡಿಲ್ಲ. ಅದರ ಬದಲು ಅವರಿಬ್ಬರು ಈಗ ‘ಡಂಕಿ’ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಕೆಲಗಳು ಪೂರ್ಣಗೊಂಡ ಬಳಿಕ ಲಾಲಾ​ ಅಮರನಾಥ್​ ಬಯೋಪಿಕ್​ ಕೆಲಸಗಳು ಆರಂಭ ಆಗಲಿವೆ.

ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲಿ ಒಂದಿಲ್ಲೊಂದು ವಿಶೇಷವನ್ನು ಅಭಿಮಾನಿಗಳಿಗೆ ಪರಿಚಯಿಸುತ್ತಾರೆ. ಸಿನಿಮಾ ಮಾಡಲು ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಲೇಟ್​ ಆದ್ರೂ ಲೇಟೆಸ್ಟ್​ ಆಗಿ ಜನರ ಮುಂದೆ ಬರಬೇಕು ಎಂಬ ನಿಯಮ ಅವರದ್ದು. ಹಾಗಾಗಿ ‘ಡಂಕಿ’ ಚಿತ್ರ ಕೂಡ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:36 pm, Thu, 9 February 23