ಕಿಯಾರಾ ಅಡ್ವಾಣಿ ಮದುವೆ ಆಗಿದ್ದು ಈ ಕಾರಣಕ್ಕೆ; ಮೊದಲೇ ರಿವೀಲ್ ಮಾಡಿದ್ದ ನಟಿ
ಹಲವರು ಹಣಕ್ಕಾಗಿ ಮದುವೆ ಆಗುತ್ತಾರೆ. ಹೀರೋಯಿನ್ಗಳು ಉದ್ಯಮಿಗಳನ್ನು ಪ್ರೀತಿಸಿ ಮದುವೆ ಆದ ಬಳಿಕ ಇದೇ ರೀತಿಯ ಆರೋಪಗಳು ಎದುರಾಗುತ್ತವೆ. ಕಿಯಾರಾ ಅವರು ಈ ವಿಚಾರದಲ್ಲಿ ಮೊದಲೇ ಮಾತನಾಡಿದ್ದರು.
ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮದುವೆ ಆಗಿ ತಮ್ಮ ಮನೆಗೆ ಮರಳಿದ್ದಾರೆ. ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ (Jaisalmer) ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿದೆ. ಫೆಬ್ರವರಿ 8ರಂದು ದೆಹಲಿ ಏರ್ಪೋರ್ಟ್ನಲ್ಲಿ ಇವರು ಪರಸ್ಪರ ಕೈ ಹಿಡಿದು ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮದುವೆಗೂ ಮೊದಲು ಕಿಯಾರಾ ಮದುವೆ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು. ಈ ವೇಳೆ ‘ನಾನು ಪ್ರೀತಿಗಾಗಿ ಮಾತ್ರ ಮದುವೆ ಆಗುತ್ತೇನೆ’ ಎಂದು ಹೇಳಿದ್ದರು.
ಹಲವರು ಹಣಕ್ಕಾಗಿ ಮದುವೆ ಆಗುತ್ತಾರೆ. ಹೀರೋಯಿನ್ಗಳು ಉದ್ಯಮಿಗಳನ್ನು ಪ್ರೀತಿಸಿ ಮದುವೆ ಆದ ಬಳಿಕ ಇದೇ ರೀತಿಯ ಆರೋಪಗಳು ಎದುರಾಗುತ್ತವೆ. ಕಿಯಾರಾ ಅವರು ಈ ವಿಚಾರದಲ್ಲಿ ಮೊದಲೇ ಮಾತನಾಡಿದ್ದರು. ತಾವು ಮದುವೆ ಆಗುತ್ತಿರೋದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದರು.
ಬಾಲಿವುಡ್ ಬಬಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಿಯಾರಾ, ‘ನಾನು ಪ್ರೀತಿಗಾಗಿ ಮಾತ್ರ ಮದುವೆ ಆಗುತ್ತೇನೆ. ನಾನು ವಿವಾಹ ಆದೆ ಎಂದರೆ ಅದಕ್ಕೆ ಕಾರಣ ಪ್ರೀತಿಯೇ ಆಗಿರುತ್ತದೆ. ಪ್ರೀತಿ ಜೀವನಕ್ಕೆ ಗಟ್ಟಿ ಅಡಿಪಾಯ. ಅದರ ಮೇಲೆ ಎಲ್ಲವೂ ನಿರ್ಮಾಣ ಆಗುತ್ತದೆ’ ಎಂದು ಹೇಳಿದ್ದರು.
ದೆಹಲಿ ವಿಮಾನ ನಿಲ್ದಾಣದಲ್ಲಿ ನವ ದಂಪತಿ
ಸಿದ್ದಾರ್ಥ್ ದೆಹಲಿಯಲ್ಲಿ ಮನೆ ಹೊಂದಿದ್ದಾರೆ. ಹೀಗಾಗಿ, ಮದುವೆ ಆದ ಬಳಿಕ ದಂಪತಿ ದೆಹಲಿಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಸಾಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಯೂಟ್ ಜೋಡಿ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿದ್ದಾರ್ಥ್ ಹಾಗೂ ಕಿಯಾರಾ ಮುಂಬೈನಲ್ಲೇ ಸೆಟಲ್ ಆಗಿದ್ದಾರೆ. ಈಗ ಇಬ್ಬರೂ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.
View this post on Instagram
ಇದನ್ನೂ ಓದಿ: ಸಿದ್ದಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?
ಪ್ರೀತಿ ಹುಟ್ಟಿದ್ದು ಹೇಗೆ
‘ಲಸ್ಟ್ ಸ್ಟೋರಿಸ್’ ಶೂಟಿಂಗ್ ಸೆಟ್ಗೆ ಸಿದ್ದಾರ್ಥ್ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಆ ಬಳಿಕ ಇಬ್ಬರೂ ‘ಶೇರ್ಷಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಪ್ರೀತಿ ಹುಟ್ಟಿ ಹಲವು ವರ್ಷಗಳು ಕಳೆದಿವೆ. ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಕಳೆದ ವರ್ಷ ಇವರ ಸಂಬಂಧ ಮುರಿದುಬಿತ್ತು ಎನ್ನಲಾಗಿತ್ತು. ಆದರೆ, ಈ ವರ್ಷ ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Thu, 9 February 23