‘ಅದು ಮುರಿದುಬಿದ್ದ ಮನೆ’; ಗೋವಿಂದ-ಸುನೀತಾ ಸಂಸಾರದ ಬಗ್ಗೆ ಕೋಮಲ್ ರಾನಿ ತಿರುಗೇಟು

ನಟ ಗೋವಿಂದ ಹಾಗೂ ಪತ್ನಿ ಸುನೀತಾ ನಡುವಿನ ಕೌಟುಂಬಿಕ ವಿವಾದಕ್ಕೆ ನಟಿ ಕೋಮಲ್ ರಾನಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಮುರಿದುಬಿದ್ದ ಮನೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದಿರುವ ಅವರು, ಸುನೀತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನುಕಂಪ ಗಿಟ್ಟಿಸಲು ಸಾರ್ವಜನಿಕವಾಗಿ ನಾಟಕವಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಅದು ಮುರಿದುಬಿದ್ದ ಮನೆ’; ಗೋವಿಂದ-ಸುನೀತಾ ಸಂಸಾರದ ಬಗ್ಗೆ ಕೋಮಲ್ ರಾನಿ ತಿರುಗೇಟು
ಕೋಮಲ್, ಗೋವಿಂದ, ಸುನಿತಾ
Edited By:

Updated on: Sep 26, 2026 | 10:04 PM

ಮುಖ್ಯಾಂಶಗಳು

  • ಮುರಿದ ಬಿದ್ದ ಮನೆಗೆ ನಾನೇಕೆ ಕಾರಣ?
  • ಗಂಡನಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ
  • ಅನುಕಂಪಕ್ಕಾಗಿ ಸಾರ್ವಜನಿಕ ನಾಟಕ

ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಈಗ ಮತ್ತೊಂದು ಹಂತ ತಲುಪಿದೆ. ಸುನೀತಾ ಮಾಡಿದ ಗಂಭೀರ ಆರೋಪಗಳಿಗೆ ನಟಿ ಕೋಮಲ್ ರಾನಿ ಇನ್‌ಸ್ಟಾಗ್ರಾಮ್‌ನಲ್ಲಿ ತಿರುಗೇಟು ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ಅವರು, ಸುನೀತಾ ವಿರುದ್ಧ ಕಟು ಮಾತುಗಳಿಂದ ವಾಗ್ದಾಳಿ ನಡೆಸಿದ್ದಾರೆ. ಈ ವಿವಾದ ಈಗ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸುನೀತಾ ವಿರುದ್ಧ ವಾಗ್ದಾಳಿ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುನೀತಾ ಹೆಸರು ಪ್ರಸ್ತಾಪಿಸದೇ ಕೋಮಲ್ ಸುದೀರ್ಘ ಬರಹ ಹಂಚಿಕೊಂಡಿದ್ದಾರೆ. ‘ಸ್ವಂತ ಗಂಡನನ್ನೇ ಕೊಲ್ಲಲು ಯತ್ನಿಸುವ ಮಹಿಳೆಯರ ಶಾಪ ಯಾರಿಗೂ ತಗಲುವುದಿಲ್ಲ. ಈಗಾಗಲೇ ಒಡೆದು ಹೋಗಿರುವ ಮನೆಯನ್ನು ಯಾರೂ ಹೊಸದಾಗಿ ಮುರಿಯಲು ಸಾಧ್ಯವಿಲ್ಲ. ದೇಶದ ಜನ ಯಾರೋ ಹೇಳಿದ ಮಾತನ್ನು ಕುರುಡಾಗಿ ನಂಬುವಷ್ಟು ದಡ್ಡರಲ್ಲ’ ಎಂದು ಹೇಳಿದ್ದಾರೆ.

ಖಾಸಗಿ ವಿಚಾರದ ಪ್ರದರ್ಶನ

‘ತನ್ನ ಗಂಡನನ್ನು ಮನೆಯಲ್ಲೇ ಕೂರಿಸಿ, ಕೆಲಸ ಮಾಡದಂತೆ ತಡೆದು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಗಂಡನಿಗೆ ಒಂಟಿತನ ಕಾಡುವಂತೆ ಮಾಡಿ ಸಾವಿನ ಅಂಚಿಗೆ ತಳ್ಳಲಾಗುತ್ತಿದೆ. ಮನೆಯೊಳಗಿನ ಖಾಸಗಿ ಸಮಸ್ಯೆಯನ್ನು ರಸ್ತೆಗೆ ತಂದು ಸಾಹಸ ಪ್ರದರ್ಶನ ಮಾಡಲಾಗುತ್ತಿದೆ. ಯಾವುದೇ ಒಳ್ಳೆಯ ಹೆಂಡತಿ ತನ್ನ ಗಂಡನಿಗೆ ಈ ರೀತಿ ಕಿರುಕುಳ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಕಂಪ ಗಿಟ್ಟಿಸುವ ತಂತ್ರ

‘ಸುನೀತಾ ಅವರು ಅನುಕಂಪ ಗಿಟ್ಟಿಸಿಕೊಳ್ಳಲು ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಸ್ವಂತ ಅಜೆಂಡಾ ಹಾಗೂ ಕಾರ್ಯಸಾಧನೆಗಾಗಿ ತಮ್ಮ ಹೆಸರನ್ನು ಬಳಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ. ಇಂತಹ ಚಾಲಾಕಿ ಮಹಿಳೆಯರಿಂದ ದೇವರೆ ಪ್ರತಿಯೊಬ್ಬ ಒಳ್ಳೆಯ ಗಂಡಸನ್ನು ಕಾಪಾಡಲಿ ಎಂದು ಆಶಿಸಿದ್ದಾರೆ. ಗಂಡನನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ’ ಎಂದು ಸುದೀಪ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಂಬಲ ಕೋರಿದ ಗೋವಿಂದ: ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಮಾರ್ಮಿಕ ನುಡಿ

ವಿವಾದದ ಹಿನ್ನೆಲೆ

ಆಗಸ್ಟ್‌ನಲ್ಲಿ ಗೋವಿಂದ ಮತ್ತು ಕೋಮಲ್ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಸುನೀತಾ ಅವರು ತಮ್ಮ ಗಂಡ ಮತ್ತು ಕೋಮಲ್ ನಡುವೆ ಅಕ್ರಮ ಬಾಂಧವ್ಯವಿದೆ ಎಂದು ಆರೋಪಿಸುತ್ತಿದ್ದರು. ಇತ್ತೀಚೆಗೆ ದಕ್ಷಿಣೇಶ್ವರ ಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದ ಸುನೀತಾ, ತಮ್ಮ ಸಂಸಾರ ಉಳಿಸಿಕೊಡುವಂತೆ ಜೆನ್-ಝಿ ಯುವಜನತೆ ಮತ್ತು ಮಹಿಳೆಯರಲ್ಲಿ ಬೆಂಬಲ ಕೋರಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಕೋಮಲ್ ಈಗ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us