AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಬಲ ಕೋರಿದ ಗೋವಿಂದ: ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಮಾರ್ಮಿಕ ನುಡಿ

ನಟ ಗೋವಿಂದ ಅವರು ಹೊಸ ನಟಿ ಕೋಮಲ್ ರಾಣಿ ಜೊತೆ ಆಪ್ತವಾಗಿದ್ದಾರೆ. ಇದರಿಂದ ಗೋವಿಂದ ಪತ್ನಿ ಸುನೀತಾ ಅಹುಜಾ ಅವರು ಗರಂ ಆಗಿದ್ದಾರೆ. ಇಬ್ಬರ ನಡುವೆ ಬಿರುಕು ಮೂಡಿದೆ. ಈಗ ಗೋವಿಂದ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. ಎಲ್ಲವೂ ಸದ್ಯದಲ್ಲೇ ಸರಿಯಾಗಲಿದ್ದು ಅಭಿಮಾನಿಗಳ ಬೆಂಬಲ ಬೇಕು ಎಂದು ಅವರು ಹೇಳಿದ್ದಾರೆ.

ಬೆಂಬಲ ಕೋರಿದ ಗೋವಿಂದ: ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಮಾರ್ಮಿಕ ನುಡಿ
Govinda, Sunita Ahuja
ಮದನ್​ ಕುಮಾರ್​
|

Updated on: Sep 06, 2026 | 11:41 AM

Share

ಬಾಲಿವುಡ್ ಹಿರಿಯ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ವೈವಾಹಿಕ ಜೀವನದ ಬಿರುಕು ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ತೀವ್ರ ಚರ್ಚೆ ಆಗುತ್ತಿದೆ. ಅನೈತಿಕ ಸಂಬಂಧ ಹಾಗೂ ವಿಚ್ಛೇದನ ವದಂತಿಗಳ ನಡುವೆಯೇ ನಟ ಗೋವಿಂದ ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಅವರ ಮಾತಿನ ಅರ್ಥ ಏನು? ಅವರೇನಾದರೂ ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

ಶನಿವಾರ (ಸೆಪ್ಟೆಂಬರ್ 7) ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋವಿಂದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಪತ್ನಿ ಸುನೀತಾ ಅವರ ಹೆಸರನ್ನು ಎತ್ತದೆ ಅಥವಾ ಅವರ ನೇರ ಆರೋಪಗಳಿಗೆ ಸ್ಪಷ್ಟನೆ ನೀಡದೆ, ‘ಆಕಾಶದಲ್ಲಿ ಹಲವು ವಿಷಯಗಳು ಬರೆಯಲ್ಪಟ್ಟಿವೆ. ಅವೆಲ್ಲವೂ ಬೇಗನೆ ಕ್ಲಿಯರ್ ಆಗಲಿ ಹಾಗೂ ನನಗೆ ಅದನ್ನು ಸರಿಪಡಿಸಲು ಸಾಧ್ಯವಾಗಲಿ ಎಂದು ನಾನು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಅಲ್ಲದೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ ಅವರು, ‘ನನಗೆ ನಿಮ್ಮ ಬೆಂಬಲ ಮತ್ತು ಸಹಕಾರ ಬೇಕು. ಇಲ್ಲಿ ನೆರೆದಿರುವ ಜನಸ್ತೋಮದಲ್ಲಿ ಕಾಣುತ್ತಿರುವಷ್ಟೇ ಪ್ರೀತಿ-ಸಹಕಾರ ನನಗೆ ಮುಂದೆಯೂ ಸಿಗಲಿ’ ಎಂದು ಕೇಳಿಕೊಂಡಿದ್ದಾರೆ. ಇದೇ ವೇಳೆ, ತಾವು ‘ರೂಪಾ’ ಮತ್ತು ‘ದುನಿಯಾದಾರಿ’ ಎಂಬ ಎರಡು ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವುದಾಗಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಗೋವಿಂದ ಮತ್ತು ಸುನೀತಾ 1987ರ ಮಾರ್ಚ್ 11ರಂದು ವಿವಾಹವಾಗಿದ್ದು, ಟೀನಾ ಹಾಗೂ ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಿನಿಮಾ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ತಮ್ಮ ಮದುವೆಯನ್ನು ನಾಲ್ಕು ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು. ನಂತರ ಅದು ಎಲ್ಲರಿಗೂ ತಿಳಿಯಿತು. ಈಗ ಅವರ ಸಂಸಾರದಲ್ಲಿ ಬಿರುಕು ದೊಡ್ಡದಾಗಿದೆ.

ಇದನ್ನೂ ಓದಿ: ಗೋವಿಂದ 2ನೇ ಮದುವೆ ವದಂತಿ ಸುಳ್ಳು: ಸುನೀತಾ ವಿರುದ್ಧ ನಟನ ಮ್ಯಾನೇಜರ್ ಗರಂ

ಇತ್ತೀಚೆಗೆ ನಟಿ ಕೋಮಲ್ ರಾಣಿ ಸ್ವರ್ಣಕರ್ ಜೊತೆ ಗೋವಿಂದ ಸುತ್ತಾಡುತ್ತಿದ್ದಾರೆ ಎಂಬ ವದಂತಿ ಬೆನ್ನಲ್ಲೇ, ಪತ್ನಿ ಸುನೀತಾ ವಿಚ್ಛೇದನ ಅರ್ಜಿಯ ವಿಚಾರವಾಗಿ ಸುದ್ದಿಯಲ್ಲಿದ್ದರು. ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದ ಸುನೀತಾ, ‘ಗೋವಿಂದಗೆ ಜೀವನದಲ್ಲಿ ಸಾಲು ಸಾಲು ಅಫೇರ್‌ಗಳಿದ್ದವು, ಆದರೆ ಕೊನೆಗೆ ಅವರು ನನ್ನ ಬಳಿಗೇ ಹಿಂತಿರುಗುತ್ತಾರೆ’ ಎಂದು ಹೇಳಿಕೆ ನೀಡಿದ್ದರು. ಕೋಮಲ್ ರಾಣಿ ಸ್ವರ್ಣಕರ್ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದ ಗೋವಿಂದ, ಸುನೀತಾ ಅವರಿಗೆ ‘ಮಿತಿ ಮೀರಬೇಡಿ’ ಎಂದು ಸಾರ್ವಜನಿಕವಾಗಿ ಖಡಕ್ ಎಚ್ಚರಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us