AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

38 ವರ್ಷಗಳ ಬಳಿಕ ಕಾಶ್ಮೀರದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್: ‘ಗ್ರೌಂಡ್ ಜೀರೋ’ ಸಾಧನೆ

Ground Zero Movie: ಜಮ್ಮು ಕಾಶ್ಮೀರ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಸಾಕಷ್ಟು ಬದಲಾವಣೆಗಳು ಕಣಿವೆ ರಾಜ್ಯದಲ್ಲಿ ಆಗುತ್ತಿವೆ. ಹಿಂದಿ ಸಿನಿಮಾ ‘ಗ್ರೌಂಡ್ ಜೀರೋ’ನ ರೆಡ್ ಕಾರ್ಪೆಟ್ ಪ್ರೀಮಿಯರ್ ಶ್ರೀನಗರದಲ್ಲಿ ನಡೆಯುತ್ತಿದೆ. 38 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥಹಾ ಅಪರೂಪದ ಕಾರ್ಯಕ್ರಮವೊಂದು ಕಣಿವೆ ರಾಜ್ಯದಲ್ಲಿ ನಡೆಯುತ್ತಿದೆ.

38 ವರ್ಷಗಳ ಬಳಿಕ ಕಾಶ್ಮೀರದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್: ‘ಗ್ರೌಂಡ್ ಜೀರೋ’ ಸಾಧನೆ
Ground Zero
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:Apr 15, 2025 | 3:57 PM

Share

ಇಮ್ರಾನ್ ಹಷ್ಮಿ (Emraan Hashmi) ಅವರು ಸೀರಿಯಲ್ ಕಿಸ್ಸರ್ (serial kisser) ಎಂಬ ಪಟ್ಟ ಪಡೆದುಕೊಂಡಿದ್ದಾರೆ. ಇದರಿಂದ ಹೊರ ಬರಲು ಅವರು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅವರು ವಿಲನ್ ಹಾಗೂ ಹೀರೋ ಪಾತ್ರ ಮಾಡುತ್ತಾ ಇದ್ದಾರೆ. ಈಗ ‘ಗ್ರೌಂಡ್ ಜೀರೋ’ ಹೆಸರಿನ ಸಿನಿಮಾ ಮಾಡಿದ್ದು, ಇದರಲ್ಲಿ ಅವರು ಬಿಎಸ್ಎಫ್ ಯೋಧನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ರೆಡ್ ಕಾರ್ಪೆಟ್ ಪ್ರೀಮಿಯರ್ ಶೋ ಶ್ರೀನಗರದಲ್ಲಿ ನಡೆಯುತ್ತಿದೆ. 38 ವರ್ಷಗಳ ಬಳಿಕ ಈ ರೀತಿಯ ಅಪರೂಪದ ಘಟನೆಗೆ ಶ್ರೀನಗರ ಸಾಕ್ಷಿ ಆಗುತ್ತಿದೆ.

ಶ್ರೀನಗರದಲ್ಲಿ ಸಿನಿಮಾ ಪ್ರದರ್ಶನ ಮಾಡಲು ಸಾಕಷ್ಟು ಅಡೆತಡೆಗಳು ಇದ್ದವು. ಆದರೆ, ಈಗ ಅದು ಬದಲಾಗುತ್ತಿದೆ. ಈಗ ‘ಗ್ರೌಂಡ್ ಜೀರೋ’ ಸಿನಿಮಾದ ರೆಡ್ ಕಾರ್ಪೆಟ್ ಪ್ರೀಮಿಯರ್ ಏಪ್ರಿಲ್ 18ರಂದು ಶ್ರೀನಗರದಲ್ಲಿ ನಡೆಯುತ್ತಿದೆ. ಏಪ್ರಿಲ್ 25ರಂದು ಸಿನಿಮಾ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ. ಭಾರತೀಯ ಸೇನೆ ಹಾಗೂ ಬಿಎಸ್ಎಫ್ ಸೈನಿಕರಿಗೆ ಗೌರವ ಸಲ್ಲಿಸಲು ಈ ಶೋ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ:‘ನನಗೆ ಅವರೇ ಸ್ಪೂರ್ತಿ’, ಪುನೀತ್ ರಾಜ್​ಕುಮಾರ್ ನೆನಪು ಮಾಡಿಕೊಂಡ ಬಾಲಿವುಡ್ ನಟಿ

ತೇಜಸ್ ದೇಸ್ಕರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಖ್ತರ್ ಬಂಡವಾಳ ಹೂಡಿದ್ದಾರೆ. ತಮ್ಮ ಎಕ್ಸೆಲ್ ಎಂಟರ್ಟೇನ್ಮೆಂಟ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಇಮ್ರಾನ್ ಹಷ್ಮಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ. ಬಿಎಸ್ಎಫ್ ಕಮಾಂಡರ್ ನರೇಂದ್ರ ನಾಥ್ ಧಾರ್ ದುಬೆ ಪಾತ್ರದಲ್ಲಿ ಇಮ್ರಾನ್ ನಟಿಸಿದ್ದಾರೆ. ಜೈಷ್ ಎ ಮೊಹ್ಮದ್ ಸಂಘಟನೆಯ ಉಗ್ರ ಹಾಗೂ ಸಂಸತ್ತಿನ ಮೇಲೆ ದಾಳಿ ಮಾಡಿದ ಪ್ರಕರಣದ ಮಾಸ್ಟರ್ ಮೈಂಡ್ ಘಾಜಿ ಬಾಬಾ ಅವರನ್ನು ಹತ್ಯೆ ಮಾಡುವಲ್ಲಿ ನರೇಂದ್ರ ನಾಥ್ ಧಾರ್ ದುಬೆ ಪ್ರಮುಖ ಪಾತ್ರವಹಿಸಿದ್ದರು. ಅದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ.

ಈಗಾಗಲೇ ‘ಗ್ರೌಂಡ್ ಜೀರೋ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಶ್ರೀನಗರದಲ್ಲಿ ನಡೆಯೋದು ಸಂಪೂರ್ಣವಾಗಿ ಪ್ರಮೋಷನಲ್ ಕಾರ್ಯಕ್ರಮ. ಆದಾಗ್ಯೂ ಈ ಭಾಗದ್ದೇ ಕಥೆ ಆಗಿರುವುದರಿಂದ ಇದು ವಿಶೇಷ ಎನಿಸಿಕೊಂಡಿದೆ. ಈ ಮೊದಲು 38 ವರ್ಷಗಳ ಹಿಂದೆ ಈ ರೀತಿಯ ಅಪರೂಪದ ಘಟನೆ ಕಾಶ್ಮೀರದಲ್ಲಿ ನಡೆದಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Tue, 15 April 25