
‘ಹೇರಾ ಫೇರಿ’ (Hera Pheri) ಚಿತ್ರದ ಮೂರನೇ ಭಾಗದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಏಕೆಂದರೆ ನಟ ಪರೇಶ್ ರಾವಲ್ ಚಿತ್ರದ ಪ್ರೋಮೋ ಚಿತ್ರೀಕರಣದ ನಂತರ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದರು. ನಟರಾದ ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಪರೇಶ್ ರಾವಲ್ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಎರಡು ಭಾಗಗಳಲ್ಲಿ ಈ ಚಿತ್ರ ಅಭಿಮಾನಿಗಳನ್ನು ನಗಿಸಿತು. ಆದರೆ ಮೂರನೇ ಭಾಗದಲ್ಲಿ ಕೆಲಸ ಮಾಡಲು ನಿರಾಕರಿಸಿದ ನಂತರ, ಪರೇಶ್ ರಾವಲ್ ಅವರ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಆದರೆ ಪರೇಶ್ ರಾವಲ್ ಕೊನೆಗೂ ಸಿನಿಮಾದಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಪರೇಶ್ ರಾವಲ್ ಸಿನಿಮಾದಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದು, ಎಲ್ಲಾ ವಿವಾದಗಳು ಬಗೆಹರಿದಿವೆ ಎಂದಿದ್ದಾರೆ. ಬಾಲಿವುಡ್ ನಟ ಹಾಗೂ ಸ್ವಘೋಷಿತ ವಿಮರ್ಶಕ ಕೆಆರ್‌ಕೆ ಪರೇಶ್ ರಾವಲ್ ಅವರನ್ನು ರಾಖಿ ಸಾವಂತ್‌ಗೆ ಹೋಲಿಸಿದರು.
ಕೆಆರ್‌ಕೆ ಅವರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪರೇಶ್ ರಾವಲ್ ‘ಹೇರಾ ಫೆರಿ 3′ ಚಿತ್ರದಲ್ಲಿ ಮತ್ತೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ‘ಎಲ್ಲಾ ಸಮಸ್ಯೆಗಳನ್ನು ಪರಿಹಾರ ಗೊಂಡಿದೆ’ ಎಂದು ಪರೇಶ್ ರಾವಲ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ಇದಾದ ಬಳಿಕ ಕೆಆರ್‌ಕೆ ಮಾತನಾಡಿದ್ದಾರೆ.
‘ವಿವಾದ ಎದ್ದ ಬಳಿಕ ನಾನು ಆ ಬಗ್ಗೆ ಹೇಳಿದ್ದೆ. ಪರೇಶ್ ರಾವಲ್ ಸಿನಿಮಾ ಬಿಡಲು ಸಾಧ್ಯವಿಲ್ಲ ಮತ್ತು ಅವರ ವಿರುದ್ಧ ಅಕ್ಷಯ್ ಕುಮಾರ್ ಕ್ರಮ ಕೈಗೊಳ್ಳಲೂ ಸಾಧ್ಯವಿಲ್ಲ. ಬಾಲಿವುಡ್ ಬಗ್ಗೆ ನನಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ, ನಾನು ಏನಾದರೂ ಹೇಳಿದ ನಂತರ ಜನರು ನನ್ನನ್ನು ನಂಬಬೇಕು’ ಎಂದಿದ್ದಾರೆ ಕೆಆರ್‌ಕೆ.
ಇದನ್ನೂ ಓದಿ: ‘ಹೇರಾ ಪೇರಿ 3’: ಮುನಿಸು ಮರೆತು ಅಕ್ಷಯ್ ಜೊತೆ ಕೈಜೋಡಿಸಿದ ಪರೇಶ್ ರಾವಲ್
‘ತನ್ನದೇ ಮೂತ್ರ ಕುಡಿದು ಬದುಕುವ ವ್ಯಕ್ತಿ ಖ್ಯಾತಿಗಾಗಿ ಏನು ಬೇಕಾದರೂ ಮಾಡಬಹುದು. ಪರೇಶ್ ರಾವಲ್ ಬಾಲಿವುಡ್‌ನ ಅತಿದೊಡ್ಡ ನಾಟಕಕಾರ. ನಾವು ಅವರನ್ನು ರಾಖಿ ಸಾವಂತ್ ಎಂದೂ ಕರೆಯಬಹುದು’ ಎಂದು ಕೆಆರ್‌ಕೆ ಹೇಳಿದರು. ಪ್ರಸ್ತುತ, ಕೆಆರ್‌ಕೆ ಅವರ ಟ್ವೀಟ್ ವೈರಲ್ ಆಗುತ್ತಿದೆ. ಅನೇಕರು ಕೆಆರ್ಕೆಗೆ ಛೀಮಾರಿ ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.