ಆಮಿರ್ ಖಾನ್​ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು; ಹೃತಿಕ್ ರೋಷನ್​ಗೆ ಎದುರಾಯ್ತು ಸಂಕಷ್ಟ

ಆಮಿರ್ ಖಾನ್​ ಅವರನ್ನು ಬೆಂಬಲಿಸಿದ ಕಾರಣದಿಂದ ಹೃತಿಕ್ ಸಿನಿಮಾವನ್ನು ಬ್ಯಾನ್ ಮಾಡುವ ಎಚ್ಚರಿಕೆಯನ್ನು ಕೆಲವರು ನೀಡಿದ್ದಾರೆ.

ಆಮಿರ್ ಖಾನ್​ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು; ಹೃತಿಕ್ ರೋಷನ್​ಗೆ ಎದುರಾಯ್ತು ಸಂಕಷ್ಟ
ಆಮಿರ್-ವಿಕ್ರಮ್ ವೇದ
Edited By:

Updated on: Aug 15, 2022 | 5:21 PM

ಆಮಿರ್ ಖಾನ್ (Aamir Khan) ಅವರು ಇತ್ತೀಚೆಗೆ ಏನೇ ಮಾಡಿದರೂ ಅದು ತಪ್ಪಾಗುತ್ತಿದೆ. ಅವರು ದೇಶದ ಬಗ್ಗೆ ಎಷ್ಟೇ ಪ್ರೀತಿ ತೋರಿಸಿದರೂ ಅದು ನಕಲಿ ಎಂದು ಒಂದು ವರ್ಗದ ಜನರು ಆರೋಪಿಸುತ್ತಿದ್ದಾರೆ. ‘ದೇಶದಲ್ಲಿ ಅಸಹಿಷ್ಣುತೆ ಇದೆ’ ಎಂದು ಕೆಲ ವರ್ಷಗಳ ಹಿಂದೆ ಅವರು ನೀಡಿದ ಹೇಳಿಕೆಯೇ ಇದಕ್ಕೆ ಕಾರಣ. ಆಮಿರ್ ಖಾನ್ ಸಿನಿಮಾಗಳಿಗೂ ಇದರ ಪ್ರಭಾವ ತಟ್ಟುತ್ತಿದೆ. ಅವರ ಪ್ರತಿ ಚಿತ್ರಗಳ ರಿಲೀಸ್​ ಸಂದರ್ಭದಲ್ಲಿ ಬೈಕಾಟ್ ಟ್ರೆಂಡ್ ಶುರು ಆಗುತ್ತದೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸಂದರ್ಭದಲ್ಲೂ ಇದು ಮರುಕಳಿಸಿದೆ. ಅವರ ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು. ಇದನ್ನು ಹೃತಿಕ್ ರೋಷನ್ (Hrithik Roshan ) ವಿರೋಧಿಸಿ, ಆಮಿರ್ ಖಾನ್ ಅವರನ್ನು ಬೆಂಬಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಹೃತಿಕ್​​ಗೂ ಸಂಕಷ್ಟ ಎದುರಾಗಿದೆ.

‘ವಿಕ್ರಮ್ ವೇದ’ ಚಿತ್ರದಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾರೆ. ತಮಿಳಿನ ‘ವಿಕ್ರಮ್​ ವೇದ’ ಚಿತ್ರದ ರಿಮೇಕ್ ಇದಾಗಿದೆ. ಈ ಚಿತ್ರದಲ್ಲಿ ವೇದ ಪಾತ್ರವನ್ನು ಹೃತಿಕ್ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಸೈಫ್ ಅಲಿ ಖಾನ್ ಅವರು ಈ ಚಿತ್ರದಲ್ಲಿ ವಿಕ್ರಮ್ ಪಾತ್ರ ಮಾಡುತ್ತಿದ್ದಾರೆ. ಈಗ ಆಮಿರ್ ಖಾನ್​ ಅವರನ್ನು ಬೆಂಬಲಿಸಿದ ಕಾರಣದಿಂದ ಹೃತಿಕ್ ಸಿನಿಮಾವನ್ನು ಬ್ಯಾನ್ ಮಾಡುವ ಎಚ್ಚರಿಕೆಯನ್ನು ಕೆಲವರು ನೀಡಿದ್ದಾರೆ.

‘ವಿಕ್ರಮ್ ವೇದ’ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಶೀಘ್ರವೇ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸಿನಿಮಾಗೆ ಬೈಕಾಟ್​​ ಎಚ್ಚರಿಕೆ ಬಂದಿರುವುದು ಅವರನ್ನು ಚಿಂತೆಗೀಡು ಮಾಡಿದೆ. ಮುಂದಿನ ದಿನಗಳಲ್ಲಿ ಈ ಹೇಳಿಕೆಯಿಂದ ಹೃತಿಕ್ ಚಿತ್ರಕ್ಕೂ ಇದರಿಂದ ಸಂಕಷ್ಟ ಎದುರಾದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ
Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ
Rakhi Sawant: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​

ಇದನ್ನೂ ಓದಿ: ಇಂಡಿಯನ್​ ಆರ್ಮಿಗೆ ಆಮಿರ್ ಖಾನ್​ ಅವಮಾನ? ‘ಲಾಲ್​ ಸಿಂಗ್​ ಚಡ್ಡಾ’ ವಿರುದ್ಧ ದೂರು ದಾಖಲು

ಈಗಾಗಲೇ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ತೊಂದರೆಗೆ ಸಿಲುಕಿದೆ. ಈ ಸಿನಿಮಾ ಮೊದಲ ವಾರ ಮೋಡಿ ಮಾಡುವಲ್ಲಿ ವಿಫಲ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ತಗ್ಗುವ ಸಾಧ್ಯತೆ ಇದೆ. ಆಮಿರ್ ಖಾನ್ ಅವರು ಅಸಹಿಷ್ಣುತೆ ಹೇಳಿಕೆ ಕುರಿತಂತೆ ಕ್ಷಮೆ ಕೂಡ ಕೇಳಿದ್ದಾರೆ. ಅವರ ಕ್ಷಮೆಯನ್ನು ಜನರು ಒಪ್ಪಿಕೊಳ್ಳುತ್ತಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿರುವ ಕಾರಣಕ್ಕೂ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗುತ್ತಿಲ್ಲ.

 

Published On - 5:19 pm, Mon, 15 August 22