ಹಾಲಿವುಡ್​​ಗೆ ಹೊರಟರಾ ಬಾಲಿವುಡ್ ನಟ ಹೃತಿಕ್ ರೋಷನ್?

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಸ್ಪುರದ್ರೂಪಿ, ಫ್ಲೆಕ್ಸಿಬಲ್ ನಟ ಹೃತಿಕ್ ರೋಷನ್. ಇದೇ ಕಾರಣಕ್ಕೆ ಅವರನ್ನು ‘ಗ್ರೀಕ್ ಗಾಡ್’ ಎಂದು ಸಹ ಕರೆಯಲಾಗುತ್ತದೆ. ಹಾಲಿವುಡ್​​ನ ಸ್ಟಾರ್ ನಟರನ್ನೂ ಸಹ ಅಂದದ ವಿಷಯದಲ್ಲಿ ಹೃತಿಕ್ ಮುಂದೆ ನಿವಾಳಿಸಿ ಎಸೆಯಬಹುದು. ಆದರೆ ಇದೀಗ ಹೃತಿಕ್ ಖುದ್ದು ಹಾಲಿವುಡ್​​ಗೆ ಕಾಲಿಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಹಾಲಿವುಡ್​​ಗೆ ಹೊರಟರಾ ಬಾಲಿವುಡ್ ನಟ ಹೃತಿಕ್ ರೋಷನ್?
Hritik Roshan

Updated on: Nov 09, 2026 | 3:26 PM

ಮುಖ್ಯಾಂಶಗಳು

  • ಹಾಲಿವುಡ್​​ಗೆ ಹೋಗಲಿದ್ದಾರೆಯೇ ಹೃತಿಕ್ ರೋಷನ್
  • ಹೃತಿಕ್ ರೋಷನ್ ಇಂಗ್ಲೀಷ್ ಸಿನಿಮಾನಲ್ಲಿ?
  • ಹಾಲಿವುಡ್ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್

ಹೃತಿಕ್ ರೋಷನ್, ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಇತ್ತೀಚೆಗಷ್ಟೆ ತಮಿಳಿನ ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಅತಿಥಿ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಸ್ಪುರದ್ರೂಪಿ, ಫ್ಲೆಕ್ಸಿಬಲ್ ನಟ ಹೃತಿಕ್ ರೋಷನ್. ಇದೇ ಕಾರಣಕ್ಕೆ ಅವರನ್ನು ‘ಗ್ರೀಕ್ ಗಾಡ್’ ಎಂದು ಸಹ ಕರೆಯಲಾಗುತ್ತದೆ. ಹಾಲಿವುಡ್​​ನ ಸ್ಟಾರ್ ನಟರನ್ನೂ ಸಹ ಅಂದದ ವಿಷಯದಲ್ಲಿ ಹೃತಿಕ್ ಮುಂದೆ ನಿವಾಳಿಸಿ ಎಸೆಯಬಹುದು. ಆದರೆ ಇದೀಗ ಹೃತಿಕ್ ಖುದ್ದು ಹಾಲಿವುಡ್​​ಗೆ ಕಾಲಿಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಹೃತಿಕ್ ರೋಷನ್ ಅವರು ಇದೀಗ ಹಾಲಿವುಡ್​​ನ ಕೆಲ ಜನಪ್ರಿಯ ನಿರ್ದೇಶಕರುಗಳೊಟ್ಟಿಗೆ ಕಾಣಿಸಿಕೊಂಡಿದ್ದು, ಹೃತಿಕ್ ಹಾಲಿವುಡ್​​ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಗೆ ಕಾರಣವಾಗಿದೆ. ಹೃತಿಕ್ ರೋಷನ್ ಅವರು ಆಸ್ಕರ್ ವಿಜೇತ ಸಿನಿಮಾ ‘ಡ್ಯೂನ್’ನ ನಿರ್ದೇಶಕ ಡೆನ್ನಿಸ್ ವಿಲೆನ್ಯೂ ಅವರೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರೊಟ್ಟಿಗೆ ಮಾತ್ರವೇ ಅಲ್ಲದೆ ಇನ್ನೂ ಕೆಲವು ಜನಪ್ರಿಯ ಹಾಲಿವುಡ್ ನಟ, ನಟಿಯರನ್ನು ಸಹ ಹೃತಿಕ್ ರೋಷನ್ ಭೇಟಿ ಆಗಿದ್ದಾರೆ.

Loading...

ಹೃತಿಕ್ ರೋಷನ್ ಅವರು ಬಲು ಜನಪ್ರಿಯ ಎಲ್​​ಎಎಂಸಿಎ ಆರ್ಟ್ ಮತ್ತು ಫಿಲಮ್ಸ್ ಗಾಲಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಲಾಸ್ ಏಂಜಲ್ಸ್​​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಲಿವುಡ್​​ನ ಹಲವು ಹೆಸರಾಂತ ನಟ, ನಟಿಯರು ಮತ್ತು ನಿರ್ದೇಶಕರುಗಳು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರು ‘ಡ್ಯೂನ್’ ಸಿನಿಮಾದ ನಿರ್ದೇಶಕ ಡೆನ್ನಿಸ್ ಅವರನ್ನು ಭೇಟಿ ಆಗಿ ಅವರೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಮಾತ್ರವಲ್ಲದೆ ಖ್ಯಾತ ಹಾಲಿವುಡ್ ನಟಿ ನಿಕೋಲ್ ಕಿಡ್​​ಮನ್​ ಅವರೊಟ್ಟಿಗೂ ಸಹ ಫೋಟೊ ತೆಗೆಸಿಕೊಂಡಿದ್ದಾರೆ.

ಇದನ್ನೂ ಓದಿ:ಹೃತಿಕ್ ರೋಷನ್ ಸಿನಿಮಾ ನಿರ್ದೇಶಿಸಲಿರುವ ದಕ್ಷಿಣದ ನಿರ್ದೇಶಕ

ಇವರು ಮಾತ್ರವೇ ಅಲ್ಲದೆ ಆಸ್ಕರ್ ವಿಜೇತ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋ, ಟಿಮಟಿ ಷಲಮೆ ಇನ್ನೂ ಹಲವಾರು ಖ್ಯಾತನಾಮ ನಟರನ್ನು ಹೃತಿಕ್ ರೋಷನ್ ಭೇಟಿ ಆಗಿದ್ದಾರೆ. ಈ ಕಾರ್ಯಕ್ರಮದ ಫೋಟೊಗಳು, ವಿಡಿಯೋಗಳನ್ನು ನೋಡಿದ ಭಾರತೀಯ ಸಿನಿಮಾ ಪ್ರೇಮಿಗಳು ಹೃತಿಕ್ ಅವರು ಹಾಲಿವುಡ್​​ ಹಾರುತ್ತಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಹೃತಿಕ್​​ಗೆ ಹಾಲಿವುಡ್​ ಯೋಗ್ಯವಾದ ಸ್ಥಳ, ಅಲ್ಲಿ ಅವರು ಒಂದು ಪ್ರಯತ್ನ ಮಾಡಬೇಕು ಎಂದು ಸಹ ಸಲಹೆ ನೀಡಿದ್ದಾರೆ.

ಹೃತಿಕ್ ರೋಷನ್ ಪ್ರಸ್ತುತ ‘ಕ್ರಿಶ್ 4’ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾ ಅನ್ನು ಖುದ್ದು ಹೃತಿಕ್ ಅವರೇ ನಿರ್ದೇಶನ ಸಹ ಮಾಡಲಿದ್ದಾರೆ. ಇದರ ಜೊತೆಗೆ ದಕ್ಷಿಣದ ನಿರ್ದೇಶಕನ ಸಿನಿಮಾನಲ್ಲಿಯೂ ಸಹ ಹೃತಿಕ್ ರೋಷನ್ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us