ಶೂಟಿಂಗ್ ವೇಳೆ ಕೆಟ್ಟದಾಗಿ ಪ್ರ್ಯಾಂಕ್ ಮಾಡಿ ನಟಿಗೆ ಆಘಾತ ಉಂಟುಮಾಡಿದ್ದ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ಅವರು ಜಾಲಿ ಸ್ವಭಾವದ ವ್ಯಕ್ತಿ. ಸಿನಿಮಾ ಸೆಟ್​​ನಲ್ಲಿ ಅವರು ತಮಾಷೆಯಾಗಿ ಇರುತ್ತಾರೆ. ಆದರೆ ಆ ತಮಾಷೆಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಆಘಾತ ಆಗಿತ್ತು. ಆ ಬಗ್ಗೆ ‘ವೀಲ್ ಆಫ್ ಫಾರ್ಚೂನ್’ ರಿಯಾಲಿಟಿ ಶೋನಲ್ಲಿ ಅವರು ಮಾತನಾಡಿದ್ದಾರೆ.

ಶೂಟಿಂಗ್ ವೇಳೆ ಕೆಟ್ಟದಾಗಿ ಪ್ರ್ಯಾಂಕ್ ಮಾಡಿ ನಟಿಗೆ ಆಘಾತ ಉಂಟುಮಾಡಿದ್ದ ಅಕ್ಷಯ್ ಕುಮಾರ್
Akshay Kumar, Jacqueline Fernandez

Updated on: Apr 28, 2026 | 7:08 PM

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜನಪ್ರಿಯ ರಿಯಾಲಿಟಿ ಗೇಮ್ ಶೋ ‘ವೀಲ್ ಆಫ್ ಫಾರ್ಚೂನ್’ (Wheel of Fortune) ಏಪ್ರಿಲ್ 27ರಂದು ಮುಕ್ತಾಯವಾಗಿದೆ. ಈ ಫಿನಾಲೆ ಸಂಚಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರು ಈ ಹಿಂದೆ ತಮಗೆ ಮಾಡಿದ್ದ ಒಂದು ಕೆಟ್ಟ ಪ್ರ್ಯಾಂಕ್ ಬಗ್ಗೆ ಈಗ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಬಾಯಿ ಬಿಟ್ಟಿದ್ದಾರೆ. ಆ ಪ್ರ್ಯಾಂಕ್​ನಿಂದ ತಮಗೆ ಆಘಾತ ಆಗಿತ್ತು ಎಂದು ಅವರು ಹೇಳಿದ್ದಾರೆ.

‘ಹೌಸ್‌ಫುಲ್’ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು. ‘ಅದು ನನ್ನ ಮೊದಲ ಐಟಂ ಸಾಂಗ್ ಆಗಿತ್ತು. ಸೆಟ್‌ನಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇದ್ದರು. ಇದನ್ನು ಗಮನಿಸಿದ ಅಕ್ಷಯ್ ನನ್ನ ಬಳಿ ಬಂದು, ನೀನು ಏನೋ ತಪ್ಪು ಮಾಡಿದ್ದೀಯಾ ಅನ್ಸುತ್ತೆ, ನೋಡು ಪೊಲೀಸರು ನಿನ್ನನ್ನೇ ಹುಡುಕಿಕೊಂಡು ಬಂದಿದ್ದಾರೆ. ಶೂಟಿಂಗ್ ಮುಗಿದ ಕೂಡಲೇ ನಿನ್ನನ್ನು ಸ್ಟೇಷನ್‌ಗೆ ಕರೆದೊಯ್ಯುತ್ತಾರೆ ಅಂತ ಗಂಭೀರವಾಗಿ ಸುಳ್ಳು ಹೇಳಿದ್ದರು’ ಎಂದಿದ್ದಾರೆ ಜಾಕ್ವೆಲಿನ್.

ಅಕ್ಷಯ್ ಅವರ ಈ ಮಾತನ್ನು ನಿಜವೆಂದು ನಂಬಿದ್ದ ಜಾಕ್ವೆಲಿನ್, ಇಡೀ ಹಾಡಿನ ಚಿತ್ರೀಕರಣದುದ್ದಕ್ಕೂ ಭಯದಲ್ಲೇ ನಟಿಸಿದ್ದರಂತೆ. ‘ಆ ಪ್ರ್ಯಾಂಕ್ ನನಗೆ ನಿಜಕ್ಕೂ ಆಘಾತ ಉಂಟುಮಾಡಿತ್ತು’ ಎಂದು ಅವರು ನಗುತ್ತಲೇ ನೆನಪಿಸಿಕೊಂಡರು. ಜಾಕ್ವೆಲಿನ್ ಅವರು ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಹಾಗಾಗಿ ಅವರು ಪೊಲೀಸರಿಗೆ ಹೆದರಿರುವ ಸಾಧ್ಯತೆ ಇದೆ.

ರಿಯಾಲಿಟಿ ಶೋನಲ್ಲಿ ಜಾಕ್ವೆಲಿನ್ ಅವರ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, ‘ನೀವು ಪೊಲೀಸರಿಗೆ ಹೆದರಿದ್ದಲ್ಲ, ಆ ಸಮಯದಲ್ಲಿ ನಿಮ್ಮ ಬಳಿ ಸರಿಯಾದ ವೀಸಾ ಇರಲಿಲ್ಲ. ಅದಕ್ಕೆ ಅಷ್ಟು ಹೆದರಿದ್ದು’ ಎಂದು ಕಾಲೆಳೆದರು. ಬಳಿಕ ಅಕ್ಷಯ್ ಅವರು ತಮ್ಮ ಈ ತಮಾಷೆಗಾಗಿ ಜಾಕ್ವೆಲಿನ್ ಅವರಲ್ಲಿ ಕ್ಷಮೆಯನ್ನೂ ಕೇಳಿದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಇದೇ ವೇಳೆ ನಟಿ ಭೂಮಿ ಪೆಡ್ನೇಕರ್ ಕೂಡ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಶೂಟಿಂಗ್ ವೇಳೆ ಅಕ್ಷಯ್ ತಮ್ಮನ್ನು ಬೈಕ್‌ನಲ್ಲಿ ಕೂರಿಸಿಕೊಂಡು ವೇಗವಾಗಿ ಹೋಗಿ ಹೇಗೆ ಹೆದರಿಸಿದ್ದರು ಎಂದು ಹಂಚಿಕೊಂಡರು. ಇನ್ನು, ನಿರ್ದೇಶಕಿ ಫರ್ಹಾ ಖಾನ್ ಅವರನ್ನು ಅಕ್ಷಯ್ ಕೆಣಕಿದಾಗ, ‘ನನ್ನ ಜೊತೆ ನೀವು ತೀಸ್ ಮಾರ್ ಖಾನ್ ಮತ್ತು ಜೋಕರ್ ಅಂತಹ ಫ್ಲಾಪ್ ಸಿನಿಮಾಗಳನ್ನು ಮಾಡಿದ್ದೇ ದೊಡ್ಡ ಪ್ರ್ಯಾಂಕ್, ಅದಕ್ಕಿಂತ ದೊಡ್ಡದು ಯಾವುದಿದೆ’ ಎಂದು ತಿರುಗೇಟು ನೀಡಿ ತಮಾಷೆ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us