ಮಹೇಶ್ ಬಾಬು ಅಂದು ಹೇಳಿದ್ದು ನಿಜವಾಯ್ತು; ‘ವಾರ್ 2’ ಕಳಪೆ ವಿಮರ್ಶೆ ಬೆನ್ನಲ್ಲೇ ಹಳೆಯ ಹೇಳಿಕೆ ವೈರಲ್

ಜೂನಿಯರ್ ಎನ್​​ಟಿಆರ್ ಅವರ ‘ವಾರ್ 2’ ಸಿನಿಮಾ ನಿರೀಕ್ಷೆಯಂತೆ ಯಶಸ್ಸು ಕಂಡಿಲ್ಲ.ಈ ಬೆನ್ನಲ್ಲೇ ಮಹೇಶ್ ಬಾಬು ಅವರ ಹಿಂದಿನ ಹೇಳಿಕೆಯು ಈಗ ಮತ್ತೆ ವೈರಲ್ ಆಗಿದೆ. ಬಾಲಿವುಡ್ ನಿರ್ದೇಶಕರು ದಕ್ಷಿಣ ನಟರಿಗೆ ಸೂಕ್ತ ಪಾತ್ರಗಳನ್ನು ಸೃಷ್ಟಿಸಲು ವಿಫಲರಾಗುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಮಹೇಶ್ ಬಾಬು ಅಂದು ಹೇಳಿದ್ದು ನಿಜವಾಯ್ತು; ‘ವಾರ್ 2’ ಕಳಪೆ ವಿಮರ್ಶೆ ಬೆನ್ನಲ್ಲೇ ಹಳೆಯ ಹೇಳಿಕೆ ವೈರಲ್
ಮಹೇಶ್ ಬಾಬು- ಜೂ.ಎನ್​ಟಿಆರ್​
Updated By: ರಾಜೇಶ್ ದುಗ್ಗುಮನೆ

Updated on: Aug 26, 2025 | 7:39 AM

ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ (War 2 Movie) ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಬಗ್ಗೆ ತೆಲುಗು ಮಂದಿ ಬೇಸರ ಹೊರಹಾಕಿದ್ದಾರೆ. ಜೂನಿಯರ್ ಎನ್​ಟಿಆರ್ ಅವರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಹೀಗಿರುವಾಗಲೇ ಮಹೇಶ್ ಬಾಬು ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ತೆಲುಗಿನ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿವೆ. ‘ಬಾಹುಬಲಿ’, ‘ಬಾಹುಬಲಿ 2’, ‘ಪುಷ್ಪ 2’ ರೀತಿಯ ಸಿನಿಮಾಗಳು ಹಿಂದಿಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿವೆ. ಆದರೆ, ತೆಲುಗು ಸ್ಟಾರ್​ಗಳು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ ಸೋಲು ಕಂಡಿದ್ದೇ ಹೆಚ್ಚು.

ರಾಮ್ ಚರಣ್ ನಟನೆಯ ‘ಜಂಜೀರ್’, ಪ್ರಭಾಸ್ ನಟನೆಯ ‘ಆದಿಪುರುಷ್’, ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಸಿನಿಮಾಗಳು ಹಿಂದಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಅವರಿಗೆ ಹಿಂದಿಯಲ್ಲಿ ಒಳ್ಳೆಯ ಆಫರ್ ಸಿಕ್ಕಿಲ್ಲ. ಇಲ್ಲಿ ದೊಡ್ಡ ಜನಪ್ರಿಯತೆ ಪಡೆದ ಹೊರತಾಗಿಯೂ ಬಾಲಿವುಡ್​ನಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿಲ್ಲ. ಹೀಗಿರುವಾಗ ಮಹೇಶ್ ಬಾಬು ಹೇಳಿದ ಹಳೆಯ ಹೇಳಿಕೆ ಮತ್ತೆ ವೈರಲ್ ಆಗಿದೆ.

ಇದನ್ನೂ ಓದಿ
ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ
ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದೆ ಸೆನ್ಸೇಷನ್ ಸೃಷ್ಟಿಸಿದ ಜೋಡಿ
ಬಜೆಟ್​ಗಿಂತ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

‘ನಾನು ನಿಮಗೆ ಅರೋಗಂಟ್ ರೀತಿ ಕಾಣಿಸಬಹುದು. ನನಗೆ ಸಾಕಷ್ಟು ಹಿಂದಿ ಆಫರ್​ಗಳು ಬಂದಿವೆ. ಆದರೆ, ಅವರು ನನ್ನನ್ನು ಭರಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ನನಗೆ ನನ್ನ ಸಮಯ ಹಾಳು ಮಾಡಲು ಇಷ್ಟ ಇಲ್ಲ’ ಎಂದಿದ್ದರು.

ಇದನ್ನೂ ಓದಿ: ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ

ಇದನ್ನು ಅನೇಕರು ಈಗ ಒಪ್ಪಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಚಿತ್ರಕ್ಕಾಗಿ ಎರಡು ವರ್ಷ ವ್ಯಯಿಸಿದ್ದಾರೆ. ಆದರೆ, ಅದು ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಬಾಲಿವುಡ್ ನಿರ್ದೇಶಕರು ಸೌತ್ ಸ್ಟಾರ್ಸ್​ಗಾಗಿ ಒಳ್ಳೆಯ ಕಥೆ ಹೆಣೆಯಲು, ಒಳ್ಳೆಯ ಪಾತ್ರ ಸೃಷ್ಟಿ ಮಾಡಲು ವಿಫಲರಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ, ಮಹೇಶ್ ಬಾಬು ಹೇಳಿದ್ದರಲ್ಲಿ ಅರ್ಥವಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Tue, 19 August 25