ಎರಡು ತಿಂಗಳು ಹನಿಮೂನ್​ಗೆ ಹೋಗಿದ್ದ ಅಜಯ್-ಕಾಜೋಲ್​; ಅಲ್ಲಾಗಿದ್ದೇ ಬೇರೆ

ಅಜಯ್ ದೇವಗನ್ ಮತ್ತು ಕಾಜೋಲ್ ಮದುವೆ ಆದ ಬಳಿಕ ಎರಡು ತಿಂಗಳ ಹನಿಮೂನ್ ಪ್ಲ್ಯಾನ್ ಮಾಡಿದ್ದರು. ಆದರೆ ಅಜಯ್ ಅವರ ಹೋಮ್ ಸಿಕ್‌ನಿಂದ ಹನಿಮೂನ್ ಅವಧಿ ಕಡಿಮೆ ಆಯಿತು ಎಂದು ಕಾಜೋಲ್ ಒಂದು ವೈರಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಮದುವೆಗೆ ಮೊದಲು ಕಾಜೋಲ್ ದೀರ್ಘ ಹನಿಮೂನ್‌ಗೆ ಷರತ್ತು ಹಾಕಿದ್ದರು.

ಎರಡು ತಿಂಗಳು ಹನಿಮೂನ್​ಗೆ ಹೋಗಿದ್ದ ಅಜಯ್-ಕಾಜೋಲ್​; ಅಲ್ಲಾಗಿದ್ದೇ ಬೇರೆ
ಕಾಜೋಲ್-ಅಜಯ್
Edited By:

Updated on: May 16, 2025 | 7:59 AM

ಅಜಯ್ ದೇವಗನ್ (Ajay Devgn) ಹಾಗೂ ಕಾಜೋಲ್ ಲವ್​ಸ್ಟೋರಿ ‘ಹಲ್​ಚಲ್’ ಸಿನಿಮಾ ಮೂಲಕ ಆರಂಭ ಆಯಿತು. 1995ರಲ್ಲಿ ಈ ಚಿತ್ರ ಬಿಡುಗಡೆ ಆಯಿತು. ಆರಂಭದಲ್ಲಿ ಗೆಳೆತನ ಇತ್ತು. ಆ ಬಳಿಕ ಅದು ಪ್ರೀತಿ ಆಗಿ ಬದಲಾಯಿತು. 1999ರಲ್ಲಿ ಇವರು ವಿವಾಹ ಆದರು. ಈಗ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಹನಿಮೂನ್ ಸಮಯಕ್ಕೆ ಬ್ರೇಕ್ ಹಾಕಿ ಇವರು ಮಧ್ಯದಲ್ಲೇ ಬರಬೇಕಾಯಿತು. ಇದಕ್ಕೆ ಅಜಯ್ ದೇವಗನ್ ಅವರ ಹೋಮ್​ಸಿಕ್ ಕಾರಣ ಎಂದು ಕಾಜೋಲ್ ಹೇಳಿದ್ದರು.

ಮದುವೆಗೂ ಮೊದಲು ಅಜಯ್ ದೇವಗನ್ ಬಳಿ ಕಾಜೋಲ್ ಅವರು ಒಂದು ಷರತ್ತನ್ನು ಹಾಕಿದ್ದರು. ಅದುವೇ ದೀರ್ಘ ಹನಿಮೂನ್ ಟೈಮ್. ಈ ಕಾರಣಕ್ಕೆ ಅಜಯ್ ಹಾಗೂ ಕಾಜೋಲ್ ಅವರು ಎರಡು ತಿಂಗಳ ಕಾಲ ಮಧುಚಂದ್ರಕೆ ಸಿದ್ಧತೆ ಮಾಡಿಕೊಂಡರು. ಲಾಸ್ ಏಂಜಲೀಸ್, ಲಾಸ್ ವೇಗಸ್, ಆಸ್ಟ್ರೇಲಿಯಾದಲ್ಲಿ ಸುತ್ತಾಡುವುದು ಇವರ ಪ್ಲ್ಯಾನ್ ಆಗಿತ್ತು.

‘ಹನಿಮೂನ್ ಸಂದರ್ಭದಲ್ಲಿ ವಿಶ್ವ ಸುತ್ತಾಟ ನಡೆಸೋದು ನನ್ನ ಆಲೋಚನೆ ಆಗಿತ್ತು. ನಾವು ಟಿಕೆಟ್ ಬುಕ್ ಮಾಡಿದೆವು. ಮೊದಲು ಆಸ್ಟ್ರೇಲಿಯಾಗೆ ಹೋಗಿ ಆ ಬಳಿಕ ಲಾಸ್ ಏಂಜಲೀಸ್ ಅಲ್ಲಿಂದ ಲಾಸ್ ವೇಗಸ್​ಗೆ ಹೋಗುವ ಪ್ಲ್ಯಾನ್ ಇತ್ತು’ ಎಂದು ಕಾಜೋಲ್ ಅವರು ವಿವರಿಸಿದ್ದರು.

ಇದನ್ನೂ ಓದಿ
ಕತ್ರಿನಾ ಜೊತೆ ವಿಕ್ಕಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಇಲ್ಲಿದೆ ವಿವರ
VIDEO: ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ
‘ನೀವು ಹೇಗೆ ಎಂದು ಎಲ್ಲರಿಗೂ ಗೊತ್ತು’; ಚೈತ್ರಾಗೆ ನೇರವಾಗಿ ಹೇಳಿದ ಅಭಿಮಾನಿ
ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ

ಇದನ್ನೂ ಓದಿ: ಅಜಯ್ ದೇವಗನ್ ಕುಡಿಯೋ ವಿಸ್ಕಿ ಬೆಲೆ ಎಷ್ಟು? ಆ ದುಡ್ಡಲ್ಲಿ ಒಂದು ಬೈಕ್ ಖರೀದಿಸಬಹುದು

‘ನಾವು ಗ್ರೀಸ್‌ನಲ್ಲಿದ್ದೆವು. ಆಗಲೇ 40 ದಿನಗಳು ಕಳೆದಿದ್ದವು. ಆಗ ಅಜಯ್ ತುಂಬಾ ದಣಿದಿದ್ದ. ಒಂದು ದಿನ ಬೆಳಿಗ್ಗೆ ಅವನು ಎಚ್ಚರಗೊಂಡು ತನಗೆ ಜ್ವರ ಮತ್ತು ತಲೆನೋವು ಇದೆ ಎಂದು ಹೇಳಿದ. ಹಾಗಾಗಿ ನಾನು ಅವನಿಗೆ ಔಷಧಿಗಳನ್ನು ತರುತ್ತೇನೆ ಎಂದು ಹೇಳಿದೆ. ಆದರೆ ಅವನು ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಲೇ ಇದ್ದನು. ಏನು ಮಾಡಬಹುದು ಎಂದು ನಾನು ಅವನನ್ನು ಕೇಳಿದಾಗ, ಅವನು ‘ಮನೆಗೆ ಹೋಗೋಣ’ ಎಂದು ಹೇಳಿದನು. ನಾನು ಅವನನ್ನು ಕೇಳಿದೆ, ‘ಮನೆಗೆ? ತಲೆನೋವಿಗೆ’ ಎಂದು ಕೇಳಿದೆ. ಅವನು, ‘ನನಗೆ ನಿಜವಾಗಿಯೂ ದಣಿವಾಗಿದೆ ಎಂದು ಹೇಳಿದನು’ ಎಂದು ಆ ಘಟನೆ ನೆಪಿಸಿದ್ದಾರೆ.  ಈ ದಂಪತಿಗೆ ನೈಸಾ ಹಾಗೂ ಯುಗ್ ದೇವನ್ ಹೆಸರಿನ ಮಕ್ಕಳು ಇದ್ದಾರೆ. ಅಜಯ್-ಕಾಜೋಲ್ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.