ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ (Kamaal R Khan) ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರಿವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿದ್ದಕ್ಕಾಗಿ ಅವರು ಈಗಾಗಲೇ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಹಾಗಿದ್ದರೂ ಕೂಡ ಅವರು ಸುಮ್ಮನಾಗಿಲ್ಲ. ಒಂದಷ್ಟು ದಿನ ಸೈಲೆಂಟ್ ಆಗಿದ್ದ ಅವರು ಈಗ ಮತ್ತೆ ಎಲ್ಲರ ಬಗ್ಗೆಯೂ ನಾಲಿಗೆ ಹರಿಬಿಡಲು ಆರಂಭಿಸಿದ್ದಾರೆ. ಸದ್ಯ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಈತ ಹೆಚ್ಚು ಹತಾಶೆಗೆ ಒಳಗಾದ ವ್ಯಕ್ತಿ’ ಎಂದು ವಿವೇಕ್ ಅಗ್ನಿಹೋತ್ರಿ ಬಗ್ಗೆ ಕೆಆರ್ಕೆ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆಯೂ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕಮಾಲ್ ಆರ್. ಖಾನ್ ಅವರು ಮಾಡಿದ ಸರಣಿ ಟ್ವೀಟ್ಗಳು ವೈರಲ್ ಆಗಿದೆ. ಆ ಮೂಲಕ ಅವರು ಮತ್ತೆ ಸುದ್ದಿ ಆಗುತ್ತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಿದ ಬಳಿಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಅವರ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇಂದಿಗೂ ಆ ಚಿತ್ರದ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸುತ್ತಲೇ ಇದ್ದಾರೆ. ಈಗ ಕಮಾಲ್ ಆರ್. ಖಾನ್ ಅವರು ವಿವೇಕ್ ಅಗ್ನಿಹೋತ್ರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್ ಆರ್. ಖಾನ್
‘ಈತ ಬಾಲಿವುಡ್ನಲ್ಲಿ ಅತಿ ಹೆಚ್ಚು ಹತಾಶೆಗೆ ಒಳಗಾದ ವ್ಯಕ್ತಿ. ಜೀವನದಲ್ಲಿ ಬರೀ ಕೆಟ್ಟ ಸಿನಿಮಾಗಳನ್ನು ಮಾಡಿದ. ಹಾಗಾಗಿ ಈತನನ್ನು ಬಾಲಿವುಡ್ನವರು ದೊಡ್ಡ ನಿರ್ದೇಶಕ ಅಂತ ಗುರುತಿಸಲಿಲ್ಲ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಿಸಿದ ನಂತರವೂ ಇವನಿಗೆ ಬಾಲಿವುಡ್ನವರು ಮನ್ನಣೆ ನೀಡಿಲ್ಲ. ಹಾಗಾಗಿ ಇನ್ನೂ ಹೆಚ್ಚು ಹತಾಶೆಗೆ ಒಳಗಾಗಿದ್ದಾನೆ’ ಎಂದು ಕಮಾಲ್ ಆರ್. ಖಾನ್ ಅವರು ಟ್ವೀಟ್ ಮಾಡಿದ್ದಾರೆ.
This guy @vivekagnihotri is most frustrated person in the Bollywood. He made all crap films in his life, so Bollywood didn’t recognise him as a big director. And After film #KashmirFiles also Bollywood ppl are not ready to give him any BHAAO! So he has become more frustrated.??
— KRK (@kamaalrkhan) May 9, 2023
ಇನ್ನು, ದೇಶಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಚರ್ಚೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಕಮಾಲ್ ಆರ್. ಖಾನ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ದಿ ಕೇರಳ ಸ್ಟೋರಿ ಸಿನಿಮಾದ ಬಿಡುಗಡೆಗಿಂತ ಕೇವಲ 9 ದಿನ ಮುಂಚೆ ನಿರ್ಮಾಪಕರು ಟ್ರೇಲರ್ ರಿಲೀಸ್ ಮಾಡಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ನಗರಗಳಿಗೆ ತೆರಳಿ ಭಿಕ್ಷೆ ಬೇಡುವುದರಿಂದ ಸಿನಿಮಾ ಹಿಟ್ ಆಗಲ್ಲ ಎಂಬುದಕ್ಕೆ ಇದು ಸಾಕ್ಷಿ. ಕಪಿಲ್ ಶರ್ಮಾ ಅವರ ಶೋಗೆ ಹೋಗೋದರಿಂದಲೂ ಸಿನಿಮಾ ಹಿಟ್ ಆಗಲ್ಲ’ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
Producers released film #TheKeralaStory trailer just 9 days before the release of the film. And it’s a blockbuster. It is one more proof, Ki Shahar Shahar Bheekh Maangne Se film hit Nahi hoti. Kapil Sharma Ke show Par Jaane se film hit Nahi hoti.
— KRK (@kamaalrkhan) May 9, 2023
ಕಮಾಲ್ ಆರ್. ಖಾನ್ ಅವರ ಮಾತುಗಳನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಸದ್ಯ ವಿವೇಕ್ ಅಗ್ನಿಹೋತ್ರಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಪ್ರಸ್ತುತ ತಾವು ‘ದೇಶದ್ರೋಹಿ 2’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಕಮಾಲ್ ಆರ್. ಖಾನ್ ಹೇಳಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.