Kamal Haasan: ‘ದಿ ಕೇರಳ ಸ್ಟೋರಿ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ’: ಕಮಲ್​ ಹಾಸನ್​ ನೇರ ಟೀಕೆ

|

Updated on: May 27, 2023 | 8:44 PM

The Kerala Story: ‘ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ’ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.

Kamal Haasan: ‘ದಿ ಕೇರಳ ಸ್ಟೋರಿ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ’: ಕಮಲ್​ ಹಾಸನ್​ ನೇರ ಟೀಕೆ
ಕಮಲ್​ ಹಾಸನ್​, ಅದಾ ಶರ್ಮಾ
Follow us on

ಬಾಕ್ಸ್​ ಆಫೀಸ್​ನಲ್ಲಿ ‘ದಿ ಕೇರಳ ಸ್ಟೋರಿ ’ (The Kerala Story) ಸಿನಿಮಾ ಚಿನ್ನದ ಬೆಳೆ ತೆಗೆದಿದೆ. ಆದರೆ ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ನಟ ಕಮಲ್​ ಹಾಸನ್​ (Kamal Haasan) ಅವರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಸತ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಚರ್ಚೆಗೆ ಕಾರಣ ಆಗಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ‘ಐಫಾ ಅವಾರ್ಡ್ಸ್​’ ಕಾರ್ಯಕ್ರಮದಲ್ಲಿ ಕಮಲ್​ ಹಾಸನ್​ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ ’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಚಿತ್ರವನ್ನು ತೆಗಳಿದ್ದಾರೆ. ‘ನಾನು ಆಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ (Propaganda Movie). ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ’ ಎಂದು ಕಮಲ್​ ಹಾಸನ್​ ಹೇಳಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಈ ಸಿನಿಮಾವನ್ನು ವಿರೋಧಿಸಿದ್ದುಂಟು.

‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಮತಾಂತರ ಮತ್ತು ಐಸಿಸ್​ ಉಗ್ರ ಸಂಘಟನೆಗಳ ನಡುವೆ ಇರುವ ನಂಟನ್ನು ಈ ಸಿನಿಮಾ ತೆರೆದಿಟ್ಟಿದೆ. ಇದು ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ನಿರ್ದೇಶಕ ಸುದೀಪ್ತೋ ಸೇನ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ದೇಶದ ವಿವಿಧ ನಗರಗಳ ಸಾವಿರಾರು ಪರದೆಗಳಲ್ಲಿ ಮೇ 5ರಂದು ‘ದಿ ಕೇರಳ ಸ್ಟೋರಿ’ ತೆರೆಕಂಡಿತು. ಈವರೆಗೂ ಈ ಸಿನಿಮಾ 213 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಿದ ಅಂಶಗಳು ಸಂಪೂರ್ಣ ಸುಳ್ಳು ಎಂದು ಕೆಲವರು ವಾದಿಸುತ್ತಿದ್ದಾರೆ. ರಾಜಕೀಯದ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಭಾರತದಲ್ಲಿನ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಸಲುವಾಗಿ ಈ ಸಿನಿಮಾ ನಿರ್ಮಾಣ ಆಗಿದೆ ಅಂತ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್​ ಆರೋಗ್ಯ ಈಗ ಹೇಗಿದೆ?

‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿದೆ. ಆದರೆ ಈ ಕಲೆಕ್ಷನ್​ನಿಂದ ನಿರ್ದೇಶಕ ಸುದೀಪ್ತೋ ಸೇನ್​ ಅವರಿಗೆ ಸಮಾಧಾನ ಆಗಿಲ್ಲ. ಅವರ ಉದ್ದೇಶ ಬೇರೆಯೇ ಇದೆ. ‘ನಮ್ಮ ಸಿನಿಮಾವನ್ನು ಇನ್ನಷ್ಟು ಜನರು ನೋಡಬೇಕು. ವಿಶ್ವಾದ್ಯಂತ ಇರುವ ಭಾರತದ ಜನರಲ್ಲಿ ಶೇಕಡ 10ರಷ್ಟು ಜನರಿಗಾದರೂ ನಮ್ಮ ಚಿತ್ರದ ಸಂದೇಶ ತಲುಪಬೇಕು. ಆಗಲೇ ಇದನ್ನು ಸಕ್ಸಸ್​ ಅಂತ ನಾವು ಕರೆಬಹುದು’ ಎಂದು ಸುದೀಪ್ತೋ ಸೇನ್​ ಹೇಳಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್​ ನಂಬರ್​ ಲೀಕ್​; ಕಿರುಕುಳ ನೀಡಿದ ಸೈಬರ್​ ಕಿಡಿಗೇಡಿ

‘ಸಿನಿಮಾ ಯಾವಾಗಲೂ ಜನರಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಪ್ರೀತಿಯನ್ನು ಬೆಳೆಸಬೇಕು. ಅದನ್ನು ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿ. ಒಂದು ಚಿತ್ರಕ್ಕೆ ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಶಕ್ತಿ ಇದ್ದರೆ ಅದು ತಪ್ಪು. ನಾವು ಜಗತ್ತನ್ನು ಒಂದುಗೂಡಿಸಬೇಕೇ ಹೊರತು ವಿಭಜಿಸಬಾರದು’ ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.