Kangana Ranaut: ‘ಕಂಗನಾ ಫೇಕ್​ ಹಿಂಬಾಲಕರನ್ನು ಖರೀದಿಸಬೇಕು’: ಬಿಟ್ಟಿ ಸಲಹೆಗೆ ನಟಿಯ ಕಡೆಯಿಂದ ಖಡಕ್​ ಉತ್ತರ

|

Updated on: May 07, 2023 | 12:39 PM

Kangana Ranaut Tweet: ಬೇರೆ ನಟಿಯರಿಗೆ ಹೋಲಿಸಿದರೆ ಕಂಗನಾ ರಣಾವತ್​ ಅವರಿಗೆ ಟ್ವಿಟಿರ್​ನಲ್ಲಿ ಇರುವ ಫಾಲೋವರ್ಸ್​ ಸಂಖ್ಯೆ ಬಹಳ ಕಡಿಮೆ. ಅದಕ್ಕಾಗಿ ನೆಟ್ಟಿಗರು ಇಂಥ ಸಲಹೆ ನೀಡಿದ್ದಾರೆ.

Kangana Ranaut: ‘ಕಂಗನಾ ಫೇಕ್​ ಹಿಂಬಾಲಕರನ್ನು ಖರೀದಿಸಬೇಕು’: ಬಿಟ್ಟಿ ಸಲಹೆಗೆ ನಟಿಯ ಕಡೆಯಿಂದ ಖಡಕ್​ ಉತ್ತರ
ಕಂಗನಾ ರಣಾವತ್
Follow us on

ನಟಿ ಕಂಗನಾ ರಣಾವತ್​ (Kangana Ranaut) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಟ್ವಿಟರ್​ ಮೂಲಕ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಅವರು ಕೆಲವೊಮ್ಮೆ ಕಿರಿಕ್​ ಮಾಡಿಕೊಂಡಿದ್ದೂ ಉಂಟು. ಆಕ್ಷೇಪಾರ್ಹ ಟ್ವೀಟ್​ ಮಾಡಿದ್ದಕ್ಕಾಗಿ ಅವರ ಟ್ವಿಟರ್​ (Twitter) ಖಾತೆಯನ್ನು ಸಸ್ಪೆಂಡ್​ ಮಾಡಲಾಗಿತ್ತು. ನಂತರ ಎಲಾನ್​ ಮಸ್ಕ್​ ಟ್ವಿಟರ್​ ಸಂಸ್ಥೆಯನ್ನು ಖರೀದಿಸಿದ ಬಳಿಕ ಕಂಗನಾ ಅವರ ಖಾತೆ ಮರಳಿ ಸಿಕ್ಕಿತ್ತು. ಪ್ರಸ್ತುತ ಅವರನ್ನು 2.9 ಮಿಲಿಯನ್​ (29 ಲಕ್ಷ) ಮಂದಿ ಮಾತ್ರ ಫಾಲೋ ಮಾಡುತ್ತಿದ್ದಾರೆ. ಬೇರೆ ನಟಿಯರಿಗೆ ಹೋಲಿಸಿದರೆ ಇದು ತುಂಬ ಕಡಿಮೆ. ಹಾಗಾಗಿ ನೆಟ್ಟಿಗರ ಕಡೆಯಿಂದ ಕಂಗನಾಗೆ ಒಂದು ಸಲಹೆ ಬಂದಿದೆ. ಕಂಗನಾ ಅವರು ಫೇಕ್​ ಹಿಂಬಾಲಕರನ್ನು ಖರೀದಿಸಬೇಕು ಎಂದು ಸಲಹೆ ನೀಡಲಾಗಿದೆ. ಅದಕ್ಕೆ ನಟಿಯ ಕಡೆಯಿಂದ ಖಡಕ್​ ಉತ್ತರ ಬಂದಿದೆ.

‘ಕಂಗನಾ ರಣಾವತ್​ ಅವರೇ.. ನೀವು ನಿಜವಾಗಿಯೂ ಟಾಪ್​ ನಟಿ. ನೀವು ಕೂಡ ಬೇರೆ ನಟಿಯರ ರೀತಿ ನಕಲಿ ಹಿಂಬಾಲಕರನ್ನು ಖರೀದಿಸಬೇಕು. ಈಗ ಇರುವ ಫಾಲೋವರ್ಸ್ ಸಂಖ್ಯೆ​ಗಿಂತ ಹೆಚ್ಚಿನದ್ದಕ್ಕೆ ನೀವು ಅರ್ಹರು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಆದರೆ ಆ ಸಲಹೆಯನ್ನು ಕಂಗನಾ ರಣಾವತ್​ ತಿರಸ್ಕರಿಸಿದ್ದಾರೆ.

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

Kangana Ranaut: ಕಂಗನಾಗೆ ನೆನಪಾಗುತ್ತಿದೆ ಆಮಿರ್​ ಖಾನ್​ ಜತೆ ಕಳೆದ ಆ ದಿನಗಳು; ಸಂಬಂಧ ಕೆಟ್ಟಿದ್ದಕ್ಕೆ ಕಾರಣ ತಿಳಿಸಿದ ನಟಿ

‘ಬೇಡ ಬೇಡ.. ಅಭಿಮಾನಿಗಳ ಜೊತೆ ನಾನು ನಡೆಸುವ ಪರ್ಸನಲ್​ ಮಾತುಕಥೆಯನ್ನು ತುಂಬ ಜನರು ನೋಡಬೇಕು ಅನ್ನುವ ಅಗತ್ಯ ನನಗಿಲ್ಲ. ಕಡಿಮೆ ಇದ್ದರೂ ಕೂಡ ಅದು ಉತ್ತಮ. ಕೇಳದ ಹೊರತು ಮೌಲ್ಯಯುತವಾದ ಯಾವುದನ್ನೂ ಕೂಡ ಎಂದಿಗೂ ನೀಡಬಾರದು ಅಂತ ಕೃಷ್ಣ ಹೇಳಿದ್ದಾನೆ. ಅಂತಹ ಬೇಜವಾಬ್ದಾರಿಯುತ ಕೆಲಸಕ್ಕೆ ಬೇರೆಯದೇ ಪರಿಣಾಮಗಳು ಇರುತ್ತವೆ’ ಎಂದು ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಆಲಿಯಾ ಭಟ್​ ಅವರನ್ನು 21.7 ಮಿಲಿಯನ್​ ಜನರು ಫಾಲೋ ಮಾಡುತ್ತಿದ್ದಾರೆ. ಸಮಂತಾ ರುತ್​ ಪ್ರಭು ಅವರಿಗೆ 10.4 ಮಿಲಿಯನ್​, ಪ್ರಿಯಾಂಕಾ ಚೋಪ್ರಾ ಅವರಿಗೆ 27.8 ಮಿಲಿಯನ್​, ದೀಪಿಕಾ ಪಡುಕೋಣೆಗೆ 27.1 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಇವರೆಲ್ಲರಿಗೆ ಹೋಲಿಸಿದರೆ ಕಂಗನಾ ರಣಾವತ್​ ಹೊಂದಿರುವ ಫಾಲೋವರ್ಸ್​ ಸಂಖ್ಯೆ ತೀರಾ ಕಡಿಮೆ.

ನಟನೆ, ನಿರ್ದೇಶನ, ನಿರ್ಮಾಣದ ಬಳಿಕ ಸಂಗೀತ ಸಂಯೋಜನೆ ಮಾಡ್ತಾರಾ ಕಂಗನಾ? ನೆಟ್ಟಿಗರಿಗೆ ಮೂಡಿದೆ ಗುಮಾನಿ

ಸಿನಿಮಾ ವಿಚಾರಕ್ಕೆ ಬರೋದಾದರೆ ಕಂಗನಾ ರಣಾವತ್​ ಅವರು ಈಗ ‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಅಲ್ಲದೇ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಇದರ ಜೊತೆಗೆ ‘ಚಂದ್ರಮುಖಿ 2’ ಚಿತ್ರದ ಕೆಲಸಗಳಲ್ಲೂ ಕಂಗನಾ ರಣಾವತ್​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.