‘ಕಾಂತಾರ’ ಸಿನಿಮಾ (Kantara Movie) ನೋಡಿದವರೆಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ಗೆ ಎಲ್ಲರೂ ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿ ಎನರ್ಜಿ ಕಂಡು ಕಣ್ಣರಳಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅಬ್ಬರಿಸಿದ ‘ಕಾಂತಾರ’ ಈಗ ಬಾಲಿವುಡ್ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ. ಈ ಚಿತ್ರದ ಕಲೆಕ್ಷನ್ ತಗ್ಗುವ ಸೂಚನೆಯೇ ಸಿಗುತ್ತಿಲ್ಲ. 9 ದಿನಕ್ಕೆ ಈ ಚಿತ್ರ ಬರೋಬ್ಬರಿ 19 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ದೊಡ್ಡ ದೊಡ್ಡ ಬಾಲಿವುಡ್ ಚಿತ್ರಗಳ ಎದುರು ಈ ಸಿನಿಮಾ ಗೆದ್ದು ಬೀಗಿದೆ.
‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ರಿಲೀಸ್ ಆಯಿತು. ಈ ಸಿನಿಮಾನ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡೋದು ಚಿತ್ರ ತಂಡದ ಆಲೋಚನೆ ಆಗಿತ್ತು. ಕನ್ನಡದಲ್ಲಿ ಸಿಕ್ಕ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಹೀಗಾಗಿ, ಅವರು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಆಸಕ್ತಿ ತೋರಿದರು. ಈ ಕಾರಣಕ್ಕೆ ಈ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಾಯಿತು. ಈಗ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ.
ಹಿಂದಿಯಲ್ಲಿ ಈ ಚಿತ್ರ ರಿಲೀಸ್ ಆಗಿ 9 ದಿನ ಕಳೆದಿದೆ. ಈ ಅವಧಿಯಲ್ಲಿ ಬರೋಬ್ಬರಿ 19.60 ಕೋಟಿ ರೂಪಾಯಿ ಗಳಿಸಿ ಬೀಗಿದೆ. ಶನಿವಾರ (ಅಕ್ಟೋಬರ್ 22) ಈ ಸಿನಿಮಾ 2.55 ಕೋಟಿ ರೂ. ಬಾಚಿಕೊಂಡಿದೆ. ಈಗಲೂ ಹಲವು ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ದೀಪಾವಳಿ ಹಬ್ಬ ಬಂದಿದೆ. ಈ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿವೆ. ಇದು ಚಿತ್ರಕ್ಕೆ ವರದಾನವಾಗಲಿದೆ.
#Kantara *#Hindi version* is truly unstoppable… Biz jumps again on [second] Sat… Expect growth on Day 10 [Sun], although biz *might* get affected due to #INDvPAK cricket match… [Week 2] Fri 2.05 cr, Sat 2.55 cr. Total: ₹ 19.60 cr. #India biz. Nett BOC. pic.twitter.com/Xpi16hJXgl
— taran adarsh (@taran_adarsh) October 23, 2022
ಕನ್ನಡದಲ್ಲಿ ಈಗಲೂ ಹೌಸ್ಫುಲ್!
‘ಕಾಂತಾರ’ ಸಿನಿಮಾ ತೆರೆಗೆ ಬಂದು ಒಂದು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಕನ್ನಡದ ಮಂದಿ ಚಿತ್ರವನ್ನು ಕಣ್ತುಂಬಿಕೊಳ್ಳೋದನ್ನು ನಿಲ್ಲಿಸಿಲ್ಲ. ಅನೇಕರು ಮರಳಿ ಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಈ ಕಾರಣಕ್ಕೆ ವೀಕೆಂಡ್ನಲ್ಲಿ ಬಹುತೇಕ ಶೋಗಳು ಸೋಲ್ಡ್ ಔಟ್ ಆಗಿವೆ. ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಹಬ್ಬದ ಸಂದರ್ಭದಲ್ಲಿ ಸಿನಿಮಾ ಮತ್ತಷ್ಟು ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ.
Published On - 3:00 pm, Sun, 23 October 22