ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಕಾರ್ತಿಕ್ ಆರ್ಯನ್ ಅವರು ಸೂಪರ್ ಹಿಟ್ ಜೋಡಿ ಎನಿಸಿಕೊಂಡಿದ್ದಾರೆ. ‘ಭೂಲ್ ಭುಲಯ್ಯ 2’ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದರು. ಈಗ ಅವರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆಯಾದ ‘ಸತ್ಯಪ್ರೇಮ್ ಕಿ ಕಥಾ’ (Satyaprem Ki Katha) ಸಿನಿಮಾ ಹಿಟ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾಗೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದರಿಂದ ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ (Kartik Aaryan) ಅವರ ಖ್ಯಾತಿ ಹೆಚ್ಚಾಗಿದೆ. ಬಾಲಿವುಡ್ನಲ್ಲಿ ಇರುವ ಗುಂಪುಗಾರಿಕೆಯನ್ನು ಎದುರಿಸಿ ನಿಂತವರು ಕಾರ್ತಿಕ್ ಆರ್ಯನ್. ‘ಸತ್ಯಪ್ರೇಮ್ ಕಿ ಕಥಾ’ ಸಿನಿಮಾ ಗೆದ್ದಿದ್ದಕ್ಕೆ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
‘ಸತ್ಯಪ್ರೇಮ್ ಕಿ ಕಥಾ’ ಬಿಡುಗಡೆ ಆಗಿದ್ದು ಜೂನ್ 29ರಂದು. ಮೊದಲ ದಿನ ಈ ಚಿತ್ರಕ್ಕೆ 9.25 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನದ ಕಲೆಕ್ಷನ್ ಕೊಂಚ ಕುಸಿಯಿತು. ಅಂದು ಕೇವಲ 6.50 ಕೋಟಿ ರೂಪಾಯಿ ಕಮಾಯಿ ಆಯಿತು. ಆದರೆ ಮೂರು ಮತ್ತು ನಾಲ್ಕನೇ ದಿನ ಏರಿಕೆ ಕಂಡುಬಂತು. ಜೂನ್ 1ರಂದು 10.10 ಹಾಗೂ ಜೂನ್ 2ರಂದು 11.50 ಕೋಟಿ ರೂಪಾಯಿ ಕಲೆಕ್ಷನ್ ಆಯಿತು.
ಇದನ್ನೂ ಓದಿ: Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್ ಆರ್ಯನ್; ವಿಡಿಯೋ ವೈರಲ್
ಈತನಕ 13 ದಿನ ಪ್ರದರ್ಶನ ಕಂಡಿರುವ ಈ ಸಿನಿಮಾ 68 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ 100 ಕೋಟಿ ರೂಪಾಯಿ ದಾಟಿದಂತಾಗುತ್ತದೆ. ಈ ಗೆಲುವನ್ನು ಚಿತ್ರತಂಡದವರು ಸಂಭ್ರಮಿಸುತ್ತಿದ್ದಾರೆ. ಸಮೀರ್ ವಿದ್ವಾಂಸ್ ಅವರು ‘ಸತ್ಯಪ್ರೇಮ್ ಕಿ ಕಥಾ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಗಜರಾಜ್ ರಾವ್, ಸುಪ್ರಿಯಾ ಪಾಠಕ್, ರಾಜ್ಪಾಲ್ ಯಾದವ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Kiara Advani: ಮದುವೆ ಬಳಿಕ ಐಷಾರಾಮಿ ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾಣಿ; ಇದರ ಬೆಲೆ ಇಷ್ಟೊಂದಾ?
ಕಾರ್ತಿಕ್ ಆರ್ಯನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಸಿನಿಮಾಗಳಲ್ಲಿ ಭರಪೂರ ಎಂಟರ್ಟೇನ್ಮೆಂಟ್ ಇರಲಿದೆ. ಅಲ್ಲದೇ ಫ್ಯಾಮಿಲಿ ಪ್ರೇಕ್ಷಕರನ್ನು ಕೂಡ ಅವರು ಸೆಳೆದುಕೊಂಡಿದ್ದಾರೆ. ‘ಸತ್ಯಪ್ರೇಮ್ ಕಿ ಕಥಾ’ ಸಿನಿಮಾದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಒಂದು ಸೋಶಿಯಲ್ ಮೆಸೇಜ್ ಕೂಡ ಇದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಎಷ್ಟೇ ಯಶಸ್ಸು ಸಿಕ್ಕರೂ ಕೂಡ ಕಾರ್ತಿಕ್ ಆರ್ಯನ್ ಅವರು ಸರಳತೆ ಮರೆತಿಲ್ಲ. ಹಾಗಾಗಿ ಅವರನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Tue, 11 July 23