AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiara Advani: ತಮ್ಮನ್ನು ಸದಾ ಹಿಂಬಾಲಿಸುವ ವ್ಯಕ್ತಿಗಳಿಗೆ ಸ್ವೀಟ್​ ಬಾಕ್ಸ್​ ನೀಡಿದ ಹೊಸ ದಂಪತಿ ಕಿಯಾರಾ-ಸಿದ್ದಾರ್ಥ್​

Sidharth Malhotra Wedding | Paparazzi: ಪಾಪರಾಜಿಗಳು ಹಿಂಬಾಲಿಸಿದಾಗ ಕೆಲವು ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಆದರೆ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಆ ರೀತಿ ಅಂದುಕೊಂಡಿಲ್ಲ.

Kiara Advani: ತಮ್ಮನ್ನು ಸದಾ ಹಿಂಬಾಲಿಸುವ ವ್ಯಕ್ತಿಗಳಿಗೆ ಸ್ವೀಟ್​ ಬಾಕ್ಸ್​ ನೀಡಿದ ಹೊಸ ದಂಪತಿ ಕಿಯಾರಾ-ಸಿದ್ದಾರ್ಥ್​
ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ
ಮದನ್​ ಕುಮಾರ್​
|

Updated on: Feb 12, 2023 | 10:57 AM

Share

ಬಾಲಿವುಡ್​ನ ಕ್ಯೂಟ್​ ಕಪಲ್​ ಎನಿಸಿಕೊಂಡಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ (Sidharth Malhotra) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ‘ಶೇರ್ಷಾ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ನಿಜ ಜೀವನದಲ್ಲೂ ಇವರು ಜೋಡಿ ಆಗಬೇಕು ಎಂದು ಫ್ಯಾನ್ಸ್​ ಬಯಸಿದ್ದರು. ಅವರ ಆಸೆಯಂತೆಯೇ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗೆ ಮದುವೆಯಾದರು. ರಾಜಸ್ಥಾನದಲ್ಲಿ ವಿವಾಹ ಕಾರ್ಯಗಳನ್ನು ಮುಗಿಸಿಕೊಂಡು ಮುಂಬೈಗೆ ಬಂದಿರುವ ದಂಪತಿ ಕೆಲವು ವಿಶೇಷ ವ್ಯಕ್ತಿಗಳಿಗೆ ಸಿಹಿ ಹಂಚಿದ್ದಾರೆ. ಯಾರವರು? ಇಲ್ಲಿದೆ ವಿವರ..

ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಅದರಲ್ಲೂ ಲವ್​, ಡೇಟಿಂಗ್​, ಮದುವೆ ಮುಂತಾದ ವಿಚಾರಗಳ ಸುಳಿವು ಸಿಕ್ಕರಂತೂ 24 ಗಂಟೆಯೂ ಸೆಲೆಬ್ರಿಟಿಗಳ ಮೇಲೆ ಪಾಪರಾಜಿಗಳು ಕಣ್ಣಿಟ್ಟಿರುತ್ತಾರೆ. ಫೋಟೋ ಕ್ಲಿಕ್ಕಿಸಲು ಹಾತೊರೆಯುತ್ತಾರೆ. ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಮದುವೆ ವಿಚಾರದಲ್ಲೂ ಹಾಗೆಯೇ ಆಯಿತು. ಅವರು ಹೋದಲ್ಲಿ-ಬಂದಲ್ಲಿ ಪಾಪರಾಜಿಗಳು ಮುತ್ತಿಕೊಂಡಿದ್ದರು. ಈಗ ಅವರಿಗೆಲ್ಲ ಸ್ವೀಟ್​ ಬಾಕ್ಸ್​ ನೀಡಲಾಗಿದೆ.

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
Image
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಇದನ್ನೂ ಓದಿ: Kiara Advani Wedding: ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿದ್ದಾರ್ಥ್​-ಕಿಯಾರಾ ಅಡ್ವಾಣಿ

ಪಾಪರಾಜಿಗಳು ಹಿಂಬಾಲಿಸಿದಾಗ ಕೆಲವು ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಆದರೆ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಆ ರೀತಿ ಅಂದುಕೊಂಡಿಲ್ಲ. ಮದುವೆ ನಡೆದ ಹೋಟೆಲ್​ನ ಹೊರಗೆ, ವಿಮಾನ ನಿಲ್ದಾಣದ ಆವರಣದಲ್ಲಿ ತಮಗಾಗಿ ಹಗಲು-ರಾತ್ರಿ ಕಾದು ಫೋಟೋ ತೆಗೆದ ಪಾಪರಾಜಿಗಳಿಗೆ ಸಿಹಿ ನೀಡುವ ಮೂಲಕ ಸಿದ್ದಾರ್ಥ್​ ಮತ್ತು ಕಿಯಾರಾ ಧನ್ಯವಾದ ತಿಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಮದುವೆಯ ಸಂಭ್ರಮದಲ್ಲಿ ತಮ್ಮನ್ನು ನೆನಪಿಸಿಕೊಂಡಿದ್ದಕ್ಕಾಗಿ ಪಾಪರಾಜಿಗಳು ಧನ್ಯವಾದ ಅರ್ಪಿಸಿದ್ದಾರೆ. ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಸಿದ್ದಾರ್ಥ್​ ಮತ್ತು ಕಿಯಾರಾ ಅವರ ಮದುವೆ ನಡೆಯಿತು. ಫೆಬ್ರವರಿ 9ರಂದು ಮುಂಬೈನಲ್ಲಿ ರಿಸೆಪ್ಷನ್​ ಮಾಡಲಾಯಿತು. ಫೆಬ್ರವರಿ 12ರ ರಾತ್ರಿ 8 ಗಂಟೆಗೆ ಇನ್ನೊಂದು ರಿಸೆಪ್ಷನ್ ಏರ್ಪಡಿಸಲಾಗುತ್ತಿದೆ. ಜೂಹಿ ಚಾವ್ಲಾ, ಅನಿಲ್​ ಕಪೂರ್​, ಶಾರುಖ್​ ಖಾನ್​, ಅಜಯ್​ ದೇವಗನ್, ಅಕ್ಷಯ್​ ಕುಮಾರ್​, ಪರಿಣೀತಿ ಚೋಪ್ರಾ, ವರುಣ್​ ಧವನ್​ ಮುಂತಾದವರು ಹಾಜರಿ ಹಾಕುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್

ಬಾಲಿವುಡ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಮಿಷನ್​ ಮಜ್ನು’ ಸಿನಿಮಾದಿಂದ ಸಿದ್ದಾರ್ಥ್​ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕಿಯಾರಾ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್