Kiara Advani: ಡಿ.2ಕ್ಕೆ ಗುಟ್ಟು ರಟ್ಟು ಮಾಡ್ತಾರೆ ಕಿಯಾರಾ ಅಡ್ವಾಣಿ; ಇದು ಮದುವೆ ಸಮಾಚಾರ ಅಂತಾರೆ ಫ್ಯಾನ್ಸ್​

| Updated By: ಮದನ್​ ಕುಮಾರ್​

Updated on: Nov 28, 2022 | 7:30 AM

Kiara Advani Sidharth Malhotra Marriage: ‘ಈ ರಹಸ್ಯವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಡಿಸೆಂಬರ್​ 2ಕ್ಕೆ ಕಾದಿರಿ’ ಎಂದು ಕಿಯಾರಾ ಅಡ್ವಾನಿ ಪೋಸ್ಟ್​ ಮಾಡಿದ್ದಾರೆ. ಇದು ಮದುವೆಯ ವಿಚಾರ ಎಂದು ಫ್ಯಾನ್ಸ್​ ಊಹಿಸಿದ್ದಾರೆ.

Kiara Advani: ಡಿ.2ಕ್ಕೆ ಗುಟ್ಟು ರಟ್ಟು ಮಾಡ್ತಾರೆ ಕಿಯಾರಾ ಅಡ್ವಾಣಿ; ಇದು ಮದುವೆ ಸಮಾಚಾರ ಅಂತಾರೆ ಫ್ಯಾನ್ಸ್​
ಕಿಯಾರಾ ಅಡ್ವಾಣಿ, ಸಿದ್ದಾರ್ಥ್ ಮಲ್ಹೋತ್ರಾ
Follow us on

ಈಗ ಸೆಲೆಬ್ರಿಟಿಗಳ ಮದುವೆ ಸೀಸನ್ ನಡೆಯುತ್ತಿದೆ ಎನ್ನಬಹುದು. ಹಲವು ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಕಾರಣ ಆಗಿರುವುದು ಅವರ ಹೊಸ ಸೋಶಿಯಲ್​ ಮೀಡಿಯಾ ಪೋಸ್ಟ್​. ನಟ ಸಿದ್ದಾರ್ಥ್​ ಮಲ್ಹೋತ್ರಾ (Sidharth Malhotra) ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗುಸುಗುಸು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈಗ ಈ ಸಂಬಂಧಕ್ಕೆ ಅವರು ಮದುವೆಯ ಮುದ್ರೆ ಒತ್ತಲು ತೀರ್ಮಾನಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಕಿಯಾರಾ ಕಡೆಯಿಂದಲೇ ಮದುವೆ (Kiara Advani Marriage) ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ನ.27ರಂದು ಕಿಯಾರಾ ಅಡ್ವಾಣಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಚಿಕ್ಕ ವಿಡಿಯೋ ಹಂಚಿಕೊಂಡರು. ಬಿಳಿ ಪರದೆಗಳ ಹಿಂದೆ ನಿಂತು ಅವರು ಫೋಟೋಗೆ ಪೋಸ್​ ನೀಡಿದ್ದಾರೆ. ಇದು ಯಾವುದೋ ವಿಶೇಷವಾದ ಫೋಟೋಶೂಟ್​ ಎಂದು ಅಭಿಮಾನಿಗಳು ಊಹಿಸಿದ್ದಾರೆ. ‘ಈ ರಹಸ್ಯವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಶೀಘ್ರದಲ್ಲೇ ಬರಲಿದೆ. ಡಿಸೆಂಬರ್​ 2ಕ್ಕೆ ಕಾದಿರಿ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

ಇದನ್ನೂ ಓದಿ
‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
ಪಡ್ಡೆಗಳ ನಿದ್ದೆ ಕದ್ದ ಕಿಯಾರಾ ಅಡ್ವಾಣಿ; ಇಲ್ಲಿದೆ ಫೋಟೋ ಗ್ಯಾಲರಿ
ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್

ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್​ ವೈರಲ್​ ಆಗಿದೆ. 6 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿ​ದ್ದಾರೆ. ಸಾವಿರಾರು ಕಮೆಂಟ್​ಗಳು ಬಂದಿವೆ. ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ ಮದುವೆಯ ಕುರಿತಾಗಿಯೇ ಈ ಪೋಸ್ಟ್​ ಹಾಕಲಾಗಿದೆ ಎಂದು ಬಹುತೇಕ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

‘ನಿಮ್ಮ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ ಅವರ ಸೀಕ್ರೆಟ್​ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಬೇರೆ ಯಾವುದಾದರೂ ಸೀಕ್ರೆಟ್​ ಇದ್ದರೆ ಹೇಳಿ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಕಿಯಾರಾ ಅವರು ಯಾವುದೋ ಬ್ರ್ಯಾಂಡ್​ ಜೊತೆ ಕೈ ಜೋಡಿಸಿರಬಹುದು ಅಥವಾ ತಮ್ಮದೇ ಹೊಸ ಬ್ರ್ಯಾಂಡ್​ ಆರಂಭಿಸಬಹುದು ಎಂದು ಕೂಡ ಅನೇಕರು ಊಹಿಸಿದ್ದಾರೆ. ಎಲ್ಲದಕ್ಕೂ ಡಿಸೆಂಬರ್​ 2ರಂದು ಉತ್ತರ ಸಿಗಲಿದೆ.

2014ರಿಂದಲೂ ಕಿಯಾರಾ ಅಡ್ವಾಣಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’, ‘ಕಬೀರ್​ ಸಿಂಗ್​’, ‘ಶೇರ್ಷಾ’, ‘ಭೂಲ್​ ಭುಲಯ್ಯ 2’ ಮುಂತಾದ ಸಿನಿಮಾಗಳಿಂದ ಅವರು ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಫೇಮಸ್​ ಆಗಿದ್ದಾರೆ. ತೆಲುಗಿನ ‘ಭರತ್​ ಅನೇ ನೇನು’, ‘ವಿನಯ ವಿದೇಯ ರಾಮ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.