ಈದ್​ ದಿನವೇ ಸಲ್ಮಾನ್​ ಖಾನ್​ ಮನೆ ಎದುರು ಅಭಿಮಾನಿಗಳ ಮೇಲೆ ಲಾಠಿಚಾರ್ಜ್​​​

ನಟ ಸಲ್ಮಾನ್​ ಖಾನ್​ ಅವರನ್ನು ನೋಡಲು ಬಂದು ಅಭಿಮಾನಿಗಳಿಂದ ಟ್ರಾಫಿಕ್​ ಜಾಮ್​ ಉಂಟಾಗಿದೆ. ಪರಿಸ್ಥಿತಿ ಸುಧಾರಿಸಲು ಪೊಲೀಸರಿಂದ ಲಾಠಿಚಾರ್ಜ್​ ಮಾಡಲಾಗಿದೆ. ಕೆಲವು ಮಹಿಳೆಯರು ಕೂಡ ಗುಂಪಿನಲ್ಲಿ ಲಾಠಿ ಏಟು ತಿಂದಿದ್ದಾರೆ. ವಾಹನಗಳ ಓಡಾಟಕ್ಕೆ ಅಡ್ದಿಪಡಿಸಿದ ಅಭಿಮಾನಿಗಳ ಗುಂಪನ್ನು ಪೊಲೀಸರು ಚದುರಿಸಿದ್ದಾರೆ.

ಈದ್​ ದಿನವೇ ಸಲ್ಮಾನ್​ ಖಾನ್​ ಮನೆ ಎದುರು ಅಭಿಮಾನಿಗಳ ಮೇಲೆ ಲಾಠಿಚಾರ್ಜ್​​​
ಸಲ್ಮಾನ್​ ಖಾನ್​ ಅಭಿಮಾನಿಗಳು

Updated on: Apr 11, 2024 | 7:11 PM

ಎಲ್ಲೆಡೆ ಇಂದು (ಏಪ್ರಿಲ್​ 11) ಈದ್​ (Eid 2024) ಆಚರಣೆ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳು ಕೂಡ ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಬಾಲಿವುಡ್​ ಸ್ಟಾರ್​ಗಳಾದ ಸಲ್ಮಾನ್​ ಖಾನ್​ (Salman Khan), ಶಾರುಖ್​ ಖಾನ್​, ಆಮಿರ್​ ಖಾನ್​ ಮುಂತಾದ ನಟರು ಈದ್​ ಆಚರಣೆಯಲ್ಲಿ ಭಾಗಿ ಆಗಿದ್ದಾರೆ. ಅವರನ್ನು ನೋಡಬೇಕು ಎಂದು ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಲಾಠಿಯ ರುಚಿ ತೋರಿಸಲಾಗಿದೆ. ಹೌದು, ಸಲ್ಮಾನ್​ ಖಾನ್​ ಅವರ ಮನೆ ಎದುರು ಅಭಿಮಾನಿಗಳ ಮೇಲೆ ಲಾಠಿಚಾರ್ಜ್​ (Lathicharge) ಮಾಡಲಾಗಿದೆ.

ಜನ್ಮದಿನ ಹಾಗೂ ಈದ್​ ಪ್ರಯುಕ್ತ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರು ತಮ್ಮ ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ವಿಶ್​ ಮಾಡುತ್ತಾರೆ. ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಈ ವರ್ಷವೂ ಈದ್​ ಪ್ರಯುಕ್ತ ತಮ್ಮ ನೆಚ್ಚಿನ ನಟನನ್ನು ನೋಡಲು ಜನ ಬಂದಿದ್ದಾರೆ. ಸಲ್ಮಾನ್​ ಖಾನ್​ ಅವರ ಮನೆ ಎದುರು ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಅವರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ.

ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಸಲ್ಮಾನ್​ ಖಾನ್​ ಅಭಿಮಾನಿಗಳು ಜಮಾಯಿಸಿದ್ದರು. ಎಷ್ಟು ಹೊತ್ತು ಕಾದರೂ ಕೂಡ ಸಲ್ಮಾನ್​ ಖಾನ್​ ದರ್ಶನ ನೀಡಲೇ ಇಲ್ಲ. ನೆರೆದಿದ್ದ ಅಭಿಮಾನಿಗಳಿಂದ ಟ್ರಾಫಿಕ್​ ಜಾಮ್​ ಉಂಟಾಯಿತು. ಪರಿಸ್ಥಿತಿ ಸುಧಾರಿಸಲು ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಇದರಿಂದ ಕಾಲ್ತುಳಿತ ಉಂಟಾಗಿದೆ. ಮಹಿಳೆಯರು ಕೂಡ ಗುಂಪಿನಲ್ಲಿ ಲಾಠಿ ಏಟು ತಿಂದಿದ್ದಾರೆ. ವಾಹನಗಳ ಓಡಾಟಕ್ಕೆ ಅಡ್ದಿಪಡಿಸಿದ ಅಭಿಮಾನಿಗಳನ್ನು ಪೊಲೀಸರು ಚದುರಿಸಿದ್ದಾರೆ. ಲಾಠಿಚಾರ್ಜ್​ ಬಳಿಕ ರಸ್ತೆ ಕ್ಲಿಯರ್ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆಗೆ ಪದೇಪದೇ ಭೇಟಿ ನೀಡುತ್ತಿರುವ ಅಟ್ಲಿ; ಏನು ಸಮಾಚಾರ?

ಸಲ್ಮಾನ್​ ಖಾನ್​ ಅವರು ಈದ್​ ದಿನವೇ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ಈ ಸಿನಿಮಾಗೆ ‘ಸಿಕಂದರ್​’ ಎಂದು ಹೆಸರು ಇಡಲಾಗಿದೆ. ಎ.ಆರ್​. ಮುರುಗದಾಸ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. 2025ರ ಈದ್​ ಸಮಯದಲ್ಲಿ ‘ಸಿಕಂದರ್​’ ಚಿತ್ರ ಬಿಡುಗಡೆ ಆಗಲಿದೆ. ಸಾಜಿದ್​ ನಾಡಿಯದ್ವಾಲಾ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us