ಮೊನಾಲಿಸಾ ಜತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕನ ಮೇಲೆ ರೇಪ್ ಕೇಸ್; ದೆಹಲಿಯಲ್ಲಿ ಬಂಧನ

ಕುಂಭಮೇಳದ ವೈರಲ್ ಆದ ಹುಡುಗಿ ಮೊನಾಲಿಸಾ ಜೊತೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಸಿನಿಮಾ ಮಾಡುತ್ತಿದ್ದರು. ಆದರೆ ಅವರ ಮೇಲೆ ಗಂಭೀರ ಆರೋಪ ಎದುರಾಗಿದೆ. ಝಾನ್ಸಿ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಲ್ಲಿ ಸನೋಜ್ ಮಿಶ್ರಾ ಅವರನ್ನು ದೆಹಲಿಯಲ್ಲಿ ಅರೆಸ್ಟ್ ಮಾಡಲಾಗಿದೆ.

ಮೊನಾಲಿಸಾ ಜತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕನ ಮೇಲೆ ರೇಪ್ ಕೇಸ್; ದೆಹಲಿಯಲ್ಲಿ ಬಂಧನ
Sanoj Mishra, Monalisa

Updated on: Mar 31, 2025 | 3:34 PM

ಮಹಾಕುಂಭಮೇಳದಲ್ಲಿ (Maha Kumbh) ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ (Monalisa) ಅವರ ಬದುಕು ರಾತ್ರೋ ರಾತ್ರಿ ಬದಲಾಯಿತು. ಅವರಿಗೆ ಬಾಲಿವುಡ್​ನಿಂದ ಆಫರ್​ ಕೂಡ ಬಂತು. ಮೊನಾಲಿಸಾ ಜೊತೆ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಕೂಡ ಚಾಲ್ತಿಯಲ್ಲಿದೆ ಎಂಬ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಪ್ರಕಟ ಆಗಿತ್ತು. ಶಾಕಿಂಗ್ ಸಂಗತಿ ಏನೆಂದರೆ, ಸನೋಜ್ ಮಿಶ್ರಾ (Sanoj Mishra) ಮೇಲೆ ಈಗ ಅತ್ಯಾಚಾರದ ಆರೋಪ ಎದುರಾಗಿದೆ. ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸನೋಜ್ ಮಿಶ್ರಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಸನೋಜ್ ಮಿಶ್ರಾ ಮೇಲೆ ಈ ಮೊದಲೇ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು.

2020ರಲ್ಲಿ ಝಾನ್ಸಿ ಮೂಲದ ಯುವತಿಯನ್ನು ಟಿಕ್​ಟಾಕ್ ಮತ್ತು ಇನ್​ಸ್ಟಾಗ್ರಾಮ್​ ಮೂಲಕ ಸನೋಜ್ ಮಿಶ್ರಾ ಪರಿಚಯ ಮಾಡಿಕೊಂಡಿದ್ದರು. ಬಳಿಕ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದರು. 2021ರ ಜೂನ್ 17ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಸನೋಜ್ ಮಿಶ್ರಾ ಕೇಳಿಕೊಂಡಿದ್ದರು. ಆದರೆ ಆ ಯುವತಿ ನಿರಾಕರಿಸಿದಾಗ, ಒಂದು ವೇಳೆ ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನೋಜ್ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರು ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಭಯದಿಂದ ಮರುದಿನ, ಅಂದರೆ 2021ರ ಜೂನ್ 18ರಂದು ಸನೋಜ್ ಅವರನ್ನು ಆ ಯುವತಿ ಭೇಟಿ ಮಾಡಿದ್ದರು. ಆಕೆಯನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಮತ್ತು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸೆಗಲಾಯಿತು. ಆಕೆಯ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಸನೋಜ್ ಮಿಶ್ರಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
ಕುಂಭಮೇಳದ ವೈರಲ್ ಹುಡುಗಿ ಮೊದಲ ಸಿನಿಮಾಗೆ ಕಿರಿಕ್; ಪೊಲೀಸ್ ಠಾಣೆಯಲ್ಲಿ ದೂರು
ಗ್ಲಾಮರಸ್ ಲುಕ್​ನಲ್ಲಿ ಮಹಾಕುಂಭದ ವೈರಲ್ ಹುಡುಗಿ ಮೊನಾಲಿಸಾ?
ಕುಂಭಮೇಳದ ಚಲುವೆ ಮೊನಾಲಿಸಾ ಫೋಟೊಗಾಗಿ ಟೆಂಟ್​ಗೆ ನುಗ್ಗಿದ ವ್ಯಕ್ತಿ
ಮಹಾಕುಂಭದ ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಬಂತು ಆಫರ್

ಆ ಬಳಿಕ ಹಲವು ಬಾರಿ ಆಕೆಯ ಮೇಲೆ ಸನೋಜ್ ಮಿಶ್ರಾ ದೌರ್ಜನ್ಯ ನಡೆಸಿದ್ದಾರೆ. ಮದುವೆ ಆಗುವುದಾಗಿ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಈ ರೀತಿ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದಾರೆ. ನಿರ್ದೇಶಕನ ಮೇಲೆ ಇಷ್ಟೆಲ್ಲ ಆರೋಪ ಎದುರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕುಂಭಮೇಳ ‘ಮೊನಾಲಿಸಾ’ಳ ಮೊದಲ ಸಿನಿಮಾ ಬಂದ್, ನಿರ್ದೇಶಕನಿಂದ ಮೋಸ?

ಮೊನಾಲಿಸಾ ಅವರು ಕುಂಭಮೇಳದಲ್ಲಿ ಕಾಣಿಸಿಕೊಂಡು ವೈರಲ್ ಆದ ಬಳಿಕ ಅವರನ್ನು ಸಿನಿಮಾದಲ್ಲಿ ಹೀರೋಯಿನ್ ಮಾಡುವುದಾಗಿ ಸನೋಜ್ ಮಿಶ್ರಾ ಭರವಸೆ ನೀಡಿದ್ದರು. ಈಗ ಅವರು ಗಂಭೀರ ಆರೋಪದಲ್ಲಿ ಅರೆಸ್ಟ್ ಆಗಿರುವುದರಿಂದ ಮೊನಾಲಿಸಾ ಭವಿಷ್ಯ ಹಾಳಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.